ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸಿಸ್ ಸರಣಿಯಲ್ಲಿ ಸವಾಲೆನಿಸಲಿರುವ ಸಂಗತಿಗಳನ್ನು ಹೇಳಿದ ರೋಹಿತ್ ಶರ್ಮಾ

Rohit Sharma Identifies Big Reason Why Australia Series Will Be Challenging For India

ಈ ಬಾರಿಯ ಆಸ್ಟ್ರೇಲಿಯಾ ಸರಣಿ ಭಾರತಕ್ಕೆ ಈ ಹಿಂದಿನ ಸರಣಿಗಿಂತ ಸವಾಲೆನಿಸಲಿದೆ ಎಂದು ಟೀಮ್ ಇಂಡಿಯಾ ಸೀಮಿತ ಓವರ್‌ಗಳ ಉಪನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ. ರೋಹಿತ್ ಶರ್ಮಾ ಈ ಬಾರಿ ಸವಾಲಾಗಲಿರುವ ಕಾರಣಗಳನ್ನೂ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ

ಭಾರತ ಆಸ್ಟ್ರೇಲಿಯಾ ಕದನ ಅಂದರೆ ಅದು ಯಾವಾಗಲೂ ಸಾಕಷ್ಟು ರೋಚಕತೆಯನ್ನು ಪಡೆದುಕೊಂಡಿರುತ್ತದೆ. ಎರಡೂ ತಂಡಗಳ ಬಲಾಢ್ಯ ಆಟಗಾರರ ನಡುವೆ ಸಾಕಷ್ಟು ಜಿದ್ದಾಜಿದ್ದಿ ಕಂಡುಬರುತ್ತದೆ. ಆಟದಲ್ಲಿ ಹಿಡಿತವನ್ನು ಸಾಧಿಸಲು ದೊಡ್ಡ ಹಣಾಹಣಿಯೇ ನಡೆಯುತ್ತದೆ. ಈ ಹಿಂದೆ ಈ ಕಾದಾಟದಲ್ಲಿ ಆಸ್ಟ್ರೇಲಿಯಾ ಭಾರೀ ಮೇಲುಗೈಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.

ಆದರೆ ಸದ್ಯ ಪರಿಸ್ಥಿತಿ ವಿಭಿನ್ನವಾಗಿದೆ. ಇತ್ತೀಚೆಗೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಹಿಡಿತವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ಬಾರಿಯಂತೂ ಟೀಮ್ ಇಂಡಿಯಾ ಆಸ್ಟ್ರೇಲಿಯಾ ನೆಲದಲ್ಲಿ ಮೊತ್ತಮೊದಲ ಟೆಸ್ಟ್ ಸರಣಿಯನ್ನು ಗೆದ್ದು ಇತಿಹಾಸವನ್ನು ನಿರ್ಮಿಸಿತ್ತು.

ಭಾರತಿಯ ಕ್ರಿಕೆಟಿಗರು ದಾಖಲೆಗಾಗಿ ಆಡುತ್ತಿದ್ದರು ತಂಡಕ್ಕಾಗಿ ಅಲ್ಲ: ಇನ್ಜಮಾಮ್ ಉಲ್ ಹಕ್ಭಾರತಿಯ ಕ್ರಿಕೆಟಿಗರು ದಾಖಲೆಗಾಗಿ ಆಡುತ್ತಿದ್ದರು ತಂಡಕ್ಕಾಗಿ ಅಲ್ಲ: ಇನ್ಜಮಾಮ್ ಉಲ್ ಹಕ್

ಆದರೆ ಈ ಬಾರಿಯ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡದಲ್ಲಿ ಡೇವಿಡ್ ವಾರ್ನರ್ ಮತ್ತು ಸ್ಟೀವ್ ಸ್ಮಿತ್ ಇರಲಿದ್ದಾರೆ, ಇದು ಟೀಮ್ ಇಂಡಿಯಾ ಪಾಲಿಗೆ ಕಠಿಣವಾಗಿರಲಿದೆ ಎಂದು ರೋಹಿತ್ ಶರ್ಮಾ ಹೇಳಿಕೊಂಡಿದ್ದಾರೆ. ಟೀಮ್ ಇಂಡಿಯಾ ಆಸ್ಟ್ರೇಲಿಯಾವನ್ನು 2-1 ಅಂತರದಿಂದ ಮಣಿಸಿದ ಸಂದರ್ಭದಲ್ಲಿ ಈ ಇಬ್ಬರೂ ಘಟಾನುಘಟಿ ಆಟಗಾರರು ಬಾಲ್‌ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಲುಕಿ ಒಂದು ವರ್ಷಗಳ ನಿಶೇಧ ಶಿಕ್ಷೆಗೆ ಗುರಿಯಾಗಿದ್ದರು.

ಆವತ್ತು ನನ್ನ ಹೃದಯಕ್ಕೆ ಚೂರಿಯಿಂದ ತಿವಿದಂತೆ ಅನ್ನಿಸಿತ್ತು: ದಿನೇಶ್ ಕಾರ್ತಿಕ್ಆವತ್ತು ನನ್ನ ಹೃದಯಕ್ಕೆ ಚೂರಿಯಿಂದ ತಿವಿದಂತೆ ಅನ್ನಿಸಿತ್ತು: ದಿನೇಶ್ ಕಾರ್ತಿಕ್

"ನಾನು ಆಸ್ಟ್ರೇಲಿಯಾಕ್ಕೆ ಹೋಗಿ ಅಲ್ಲಿ ಟೆಸ್ಟ್ ಪಂದ್ಯಗಳನ್ನು ಆಡಲು ಕಾತುರನಾಗಿದ್ದೇನೆ ಎಂದಿರುವ ಶರ್ಮಾ ಆ ಇಬ್ಬರು ಆಟಗಾರರೊಂದಿಗೆ(ಸ್ಮಿತ್ ಮತ್ತು ವಾರ್ನರ್) ಸರಣಿ ಹಿಂದಿಗಿಂತ ವಿಭಿನ್ನವಾಗಿರಲಿದೆ ಎಂದು ಭಾರತದ ಸೀಮಿತ ಓವರ್‌ಗಳ ಉಪನಾಯಕ ಹೇಳಿದರು.

Story first published: Thursday, April 23, 2020, 21:40 [IST]
Other articles published on Apr 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X