ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ನಾನು ರೋಹಿತ್ ಅವರ ದೊಡ್ಡ ಅಭಿಮಾನಿ': ನ್ಯೂಜಿಲೆಂಡ್ ಮಾರಕ ವೇಗಿ

Rohit Sharma is an exceptional batsman: Lockie Ferguson

ನವದೆಹಲಿ: ಇಂಗ್ಲೆಂಡ್‌ನಲ್ಲಿ 2019ರಲ್ಲಿ ನಡೆದಿದ್ದ ಐಸಿಸಿ ವಿಶ್ವಕಪ್‌ನಲ್ಲಿ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ತಂಡವನ್ನು ಫೈನಲ್‌ಗೆ ತರುವಲ್ಲಿ ಬಲಗೈ ವೇಗಿ ಲಾಕಿ ಫಾರ್ಗುಸನ್ ಪ್ರಮುಖ ಪಾತ್ರ ವಹಿಸಿದ್ದರು. ಇದೇ ಮಾರಕ ವೇಗಿ ಫಾರ್ಗುಸನ್ ಭಾರತದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಅವರನ್ನು ಶ್ಲಾಘಿಸಿದ್ದಾರೆ. ರೋಹಿತ್‌ನಂತ ಬ್ಯಾಟ್ಸ್‌ಮನ್‌ಗಳಿಗೆ ಬೌಲಿಂಗ್ ಮಾಡೋದು ಸವಾಲಿನ ಸಂಗತಿ ಎಂದು ಫಾರ್ಗುಸನ್ ಹೇಳಿದ್ದಾರೆ.

ಆರ್‌ಸಿಬಿ ಒಂದೇ ಒಂದು ಸಾರಿ ಐಪಿಎಲ್ ಕಪ್‌ ಗೆಲ್ಲದ್ದಕ್ಕೆ ಅಸಲಿ ಕಾರಣಗಳಿವು!ಆರ್‌ಸಿಬಿ ಒಂದೇ ಒಂದು ಸಾರಿ ಐಪಿಎಲ್ ಕಪ್‌ ಗೆಲ್ಲದ್ದಕ್ಕೆ ಅಸಲಿ ಕಾರಣಗಳಿವು!

ಸ್ಪೋರ್ಟ್ಸ್ ಕೀಡಾದ ಸಂದರ್ಶನದಲ್ಲಿ ಮಾತನಾಡಿದ ಲಾಕಿ ಫಾರ್ಗುಸನ್, 'ನಿಮಗೆ ಬೌಲಿಂಗ್ ಮಾಡಲು ಕಷ್ಟ ಅನ್ನಿಸುವ ಬ್ಯಾಟ್ಸ್‌ಮನ್ ಯಾರು ಹೇಳಿ?' ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. 'ಒಳ್ಳೆಯ ಪ್ರಶ್ನೆಯಿದು. ನಂಗೆ ಕಷ್ಟ ಅನ್ನಿಸೋ ಕೆಲವೇ ಬ್ಯಾಟ್ಸ್‌ಮನ್‌ಗಳಿದ್ದಾರೆ. ಅವರಲ್ಲಿ ರೋಹಿತ್ ಮೊದಲಿಗ,' ಎಂದು ಫಾರ್ಗುಸನ್ ಪ್ರತಿಕ್ರಿಯಿಸಿದ್ದಾರೆ.

ಈ ಬಾರಿಯ ಐಪಿಎಲ್‌ನಲ್ಲಿ ಕಾಣಲಿರುವ ಪ್ರಮುಖ ಬದಲಾವಣೆಗಳಿವುಈ ಬಾರಿಯ ಐಪಿಎಲ್‌ನಲ್ಲಿ ಕಾಣಲಿರುವ ಪ್ರಮುಖ ಬದಲಾವಣೆಗಳಿವು

ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಾದ ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್ ಇವರೆಲ್ಲರಿಗಿಂತ ರೋಹಿತ್ ಯಾಕೆ ಹೆಚ್ಚು ಅಪಾಯಕಾರಿ ಅನ್ನೋದನ್ನ ಫಾರ್ಗುಸನ್ ವಿವರಿಸಿದ್ದಾರೆ.

ಅಪಾಯಕಾರಿಯಾಗಿ ಬದಲಾಗುತ್ತಾರೆ

ಅಪಾಯಕಾರಿಯಾಗಿ ಬದಲಾಗುತ್ತಾರೆ

ಸಂದರ್ಶನದಲ್ಲಿ ಮಾತು ಮುಂದುವರೆಸಿದ ಫಾರ್ಗುಸನ್, 'ರೋಹಿತ್ ವಿರುದ್ಧ ಆಡುವಾಗ ನೀವು ಅವರನ್ನು ಬೇಗನೆ ಔಟ್ ಮಾಡದಿದ್ದರೆ ಅವರು ಖಂಡಿತಾ ದೊಡ್ಡ ರನ್ ಗಳಿಸುತ್ತಾರೆ. ತುಂಬಾ ಅಪಾಯಕಾರಿಯಾಗಿ ಬದಲಾಗುತ್ತಾರೆ. ಅವರು ಬೇಗನೇ ಬೌಲಿಂಗ್ ಲೆಂತ್‌ಗೆ ಅಡ್ಜಸ್ಟ್ ಆಗುತ್ತಾರೆ. ಇಲ್ಲೇ ನಾನು ಸೋಲುತ್ತೇನೆ,' ಎಂದರು.

ವಿಶ್ವಕಪ್‌ನಲ್ಲಿ ಅದ್ಭುತ ಬೌಲಿಂಗ್

ವಿಶ್ವಕಪ್‌ನಲ್ಲಿ ಅದ್ಭುತ ಬೌಲಿಂಗ್

2019ರಲ್ಲಿ ನಡೆದಿದ್ದ ಐಸಿಸಿ ವಿಶ್ವಕಪ್‌ನಲ್ಲಿ, ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ ಫೈನಲ್‌ನಲ್ಲಿ ಸೆಣಸಾಡುವಲ್ಲಿ ಫಾರ್ಗುಸನ್ ಪ್ರಮುಖ ಕೊಡುಗೆ ನೀಡಿದ್ದರು. ಅಂದು 9 ಪಂದ್ಯಗಳನ್ನಾಡಿದ್ದ ಫಾರ್ಗುಸನ್ 19.48ರ ಸರಾಸರಿಯಂತೆ 21 ವಿಕೆಟ್ ಪಡೆದಿದ್ದರು. ಇದು ಟೂರ್ನಿಯಲ್ಲಿ ಬೌಲರ್ ಪಡೆದ 2ನೇ ಅತ್ಯಧಿಕ ವಿಕೆಟ್ ಸಾಧನೆ. ಮೊದಲ ಸ್ಥಾನದಲ್ಲಿ ಆಸ್ಟ್ರೇಲಿಯಾ ವೇಗಿ ಮಿಚೆಲ್ ಸ್ಟಾರ್ಕ್ (27 ವಿಕೆಟ್) ಇದ್ದರು.

ಶರ್ಮಾ ಅಸಾಧಾರಣ ಬ್ಯಾಟ್ಸ್‌ಮನ್

ಶರ್ಮಾ ಅಸಾಧಾರಣ ಬ್ಯಾಟ್ಸ್‌ಮನ್

'ನಾನು ರೋಹಿತ್ ಅವರ ದೊಡ್ಡ ಅಭಿಮಾನಿ. ಶರ್ಮಾ ಒಬ್ಬರು ಅಸಾಧಾರಣ ಬ್ಯಾಟ್ಸ್‌ಮನ್ ಎಂದು ನನಗನ್ನಿಸುತ್ತದೆ,' ಎಂದು ಫಾರ್ಗುಸನ್ ಹಿಟ್‌ಮ್ಯಾನ್‌ ರೋಹಿತ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಫಾರ್ಗುಸನ್, ಕಿವೀಸ್ ಪರ 37 ಏಕದಿನ ಪಂದ್ಯಗಳಲ್ಲಿ 69 ವಿಕೆಟ್, 8 ಟಿ20ಐ ಪಂದ್ಯಗಳಲ್ಲಿ 14 ವಿಕೆಟ್ ಪಡೆದಿದ್ದಾರೆ.

ವಿಶ್ವ ದಾಖಲೆಯ ದಾಂಡಿಗ

ವಿಶ್ವ ದಾಖಲೆಯ ದಾಂಡಿಗ

ಏಕದಿನದ ಮೂಲಕ ರೋಹಿತ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದು 2007ರಲ್ಲಿ. ಆದರೆ ರೋಹಿತ್ ಆರಂಭಿಕರಾಗಿ ಬಡ್ತಿ ಪಡೆದಿದ್ದು 2013ರಲ್ಲಿ. ಏಕದಿನದಲ್ಲಿ 224 ಪಂದ್ಯಗಳನ್ನಾಡಿರುವ ರೋಹಿತ್, 9115 ರನ್ ಗಳಿಸಿದ್ದಾರೆ. ಇದರಲ್ಲಿ 29 ಶತಕ, 3 ದ್ವಿಶತಕ ಮತ್ತು 43 ಅರ್ಧಶತಕಗಳೂ ಸೇರಿವೆ. ಅಲ್ಲದೆ ಏಕದಿನದಲ್ಲಿ ವೈಯಕ್ತಿಕ ಅತ್ಯಧಿಕ ರನ್ (264) ವಿಶ್ವದಾಖಲೆಯೂ ಶರ್ಮಾ ಹೆಸರಿನಲ್ಲಿದೆ.

Story first published: Friday, July 31, 2020, 15:31 [IST]
Other articles published on Jul 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X