ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs ENG 5ನೇ ಟೆಸ್ಟ್: ಬುಮ್ರಾ ನಾಯಕನಲ್ಲ; ಅಚ್ಚರಿ ಮೂಡಿಸಿದ ರಾಹುಲ್ ದ್ರಾವಿಡ್ ಹೇಳಿಕೆ!

Rohit Sharma is not yet ruled out from the 5th test match against England says Rahul Dravid

ಕಳೆದ ವರ್ಷ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಆಯೋಜನೆಯಾಗಿದ್ದ 5 ಪಂದ್ಯಗಳ ಟೆಸ್ಟ್ ಸರಣಿಯ ಅಂತಿಮ ಪಂದ್ಯ ಕೊರೋನಾವೈರಸ್ ಕಾರಣದಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಂಡು ಮುಂದೂಡಲ್ಪಟ್ಟಿತ್ತು. ಹೀಗೆ ಮುಂದೂಡಲ್ಪಟ್ಟಿದ್ದ ಈ ಟೆಸ್ಟ್ ಪಂದ್ಯ ಇದೇ ಜುಲೈ 1ರಿಂದ 5ರವರೆಗೆ ನಡೆಯಲಿದ್ದು, ಈ ಪಂದ್ಯ ಸರಣಿಯಲ್ಲಿ ವಿಜೇತ ತಂಡ ಯಾವುದು ಎಂಬುದನ್ನು ನಿರ್ಣಯಿಸಲಿದೆ.

2022ರಲ್ಲಿ ಅತಿ ಹೆಚ್ಚು ಟೆಸ್ಟ್ ಶತಕ ಬಾರಿಸಿರುವ ಟಾಪ್ 4 ಬ್ಯಾಟ್ಸ್‌ಮನ್‌ಗಳಿವರು; ಯಾರು ನಂಬರ್ 1?2022ರಲ್ಲಿ ಅತಿ ಹೆಚ್ಚು ಟೆಸ್ಟ್ ಶತಕ ಬಾರಿಸಿರುವ ಟಾಪ್ 4 ಬ್ಯಾಟ್ಸ್‌ಮನ್‌ಗಳಿವರು; ಯಾರು ನಂಬರ್ 1?

ಹೌದು, ಕಳೆದ ವರ್ಷ ನಡೆದಿದ್ದ ಈ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ 2-1 ಅಂತರದ ಮುನ್ನಡೆಯನ್ನು ಸಾಧಿಸಿದ್ದು, ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ವಿಜೇತ ತಂಡವಾಗಿ ಹೊರಹೊಮ್ಮಲಿದೆ ಅಥವಾ ಇಂಗ್ಲೆಂಡ್ ತಂಡ ಗೆದ್ದರೆ ಸರಣಿ ಡ್ರಾನಲ್ಲಿ ಅಂತ್ಯಗೊಳ್ಳಲಿದೆ. ಹೀಗಾಗಿ ಈ ಪಂದ್ಯ ಭಾರತ ಮತ್ತು ಇಂಗ್ಲೆಂಡ್ ಎರಡೂ ತಂಡಗಳಿಗೂ ಅತ್ಯಮೂಲ್ಯವಾಗಿದ್ದು, ಈ ಪಂದ್ಯ ರೋಚಕತೆಯನ್ನು ಹುಟ್ಟುಹಾಕುವುದರ ಜತೆಗೆ ಗೊಂದಲಗಳಿಗೂ ಸಹ ಎಡೆ ಮಾಡಿಕೊಟ್ಟಿದೆ.

ಭಾರತ vs ಐರ್ಲೆಂಡ್ 2ನೇ ಟಿ20: ಬೃಹತ್ ಮೊತ್ತ ಚೇಸ್ ಮಾಡಲು ಯತ್ನಿಸಿದ್ದ ಐರ್ಲೆಂಡ್; ಪರದಾಡಿ ಗೆದ್ದ ಭಾರತಭಾರತ vs ಐರ್ಲೆಂಡ್ 2ನೇ ಟಿ20: ಬೃಹತ್ ಮೊತ್ತ ಚೇಸ್ ಮಾಡಲು ಯತ್ನಿಸಿದ್ದ ಐರ್ಲೆಂಡ್; ಪರದಾಡಿ ಗೆದ್ದ ಭಾರತ

ಈ ಮಹತ್ವದ ಪಂದ್ಯದಲ್ಲಿ ಟೀಮ್ ಇಂಡಿಯಾವನ್ನು ನಾಯಕನಾಗಿ ಯಾರು ಮುನ್ನಡೆಸಲಿದ್ದಾರೆ ಎಂಬ ಗೊಂದಲ ಇದೀಗ ಉಂಟಾಗಿದ್ದು, ರೋಹಿತ್ ಶರ್ಮಾ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರಾ ಅಥವಾ ಜಸ್ ಪ್ರೀತ್ ಬುಮ್ರಾ ನಾಯಕನಾಗಲಿದ್ದಾರಾ ಎಂಬ ಗೊಂದಲ ಎದ್ದಿದೆ. ರೋಹಿತ್ ಶರ್ಮಾ ಕೊರೋನಾವೈರಸ್ ಸೋಂಕಿಗೆ ಒಳಗಾಗಿದ್ದು, ಜಸ್ ಪ್ರೀತ್ ಬೂಮ್ರಾ ತಂಡಕ್ಕೆ ನಾಯಕನಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಈ ಕುರಿತಾಗಿ ಇದೀಗ ಟೀಮ್ ಇಂಡಿಯಾದ ಹೆಡ್ ಕೋಚ್ ರಾಹುಲ್ ದ್ರಾವಿಡ್ ಪ್ರತಿಕ್ರಿಯಿಸಿದ್ದು, ಈ ಕೆಳಕಂಡಂತೆ ಹೇಳಿಕೆ ನೀಡಿದ್ದಾರೆ.

ರೋಹಿತ್ ಇನ್ನೂ ಪಂದ್ಯದಿಂದ ಹೊರ ಬಿದ್ದಿಲ್ಲ

ರೋಹಿತ್ ಇನ್ನೂ ಪಂದ್ಯದಿಂದ ಹೊರ ಬಿದ್ದಿಲ್ಲ

ಇಂಗ್ಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದರ ಕುರಿತು ಮಾತನಾಡಿರುವ ಕೋಚ್ ರಾಹುಲ್ ದ್ರಾವಿಡ್ ರೋಹಿತ್ ಶರ್ಮಾ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ರೋಹಿತ್ ಅವರಿಗೆ ಇಂದು ಮತ್ತು ನಾಳೆ ( ಜೂನ್ 30 ) ಎರಡು ಪ್ರತ್ಯೇಕ ಕೊರೊನಾ ಪರೀಕ್ಷೆ ನಡೆಸಲಿದ್ದು, ಈ ಪರೀಕ್ಷೆಗಳಲ್ಲಿ ವರದಿ ನೆಗೆಟಿವ್ ಬಂದರೆ ರೋಹಿತ್ ಶರ್ಮಾ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ, ರೋಹಿತ್ ಶರ್ಮಾ ಇನ್ನೂ ಪಂದ್ಯದಿಂದ ಹೊರ ಬಿದ್ದಿಲ್ಲ ಎಂದು ರಾಹುಲ್ ದ್ರಾವಿಡ್ ಹೇಳಿಕೆ ನೀಡಿದ್ದಾರೆ. ಹಾಗೂ ರೋಹಿತ್ ಶರ್ಮಾ ಅವರ ಆರೋಗ್ಯ ಸ್ಥಿತಿಯನ್ನು ವೈದ್ಯಕೀಯ ಸಿಬ್ಬಂದಿ ಗಮನಿಸುತ್ತಿದ್ದು, ರೋಹಿತ್ ಕಡ್ಡಾಯವಾಗಿ ನೆಗೆಟಿವ್ ವರದಿ ಪಡೆಯಲೇಬೇಕು ಎಂದು ಸಹ ರಾಹುಲ್ ದ್ರಾವಿಡ್ ಮಾಹಿತಿ ನೀಡಿದ್ದಾರೆ.

ಬುಮ್ರಾ ನಾಯಕನಲ್ಲ!

ಬುಮ್ರಾ ನಾಯಕನಲ್ಲ!

ರೋಹಿತ್ ಶರ್ಮಾ ಕೊರೋನಾವೈರಸ್ ಕಾರಣದಿಂದಾಗಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ ಹೀಗಾಗಿ ಜಸ್ಪ್ರೀತ್ ಬುಮ್ರಾ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ ಎಂಬ ಸುದ್ದಿಯ ಕುರಿತು ಪ್ರತಿಕ್ರಿಯಿಸಿದ ರಾಹುಲ್ ದ್ರಾವಿಡ್ ಈಗಲೇ ಜಸ್ಪ್ರೀತ್ ಬುಮ್ರಾ ನಾಯಕ ಎಂದು ಹೇಳುವುದು ಸರಿಯಲ್ಲ ಎಂದಿದ್ದಾರೆ. ಏಕೆಂದರೆ ಇನ್ನೂ ಸಹ ಬಿಸಿಸಿಐ ಅಧಿಕಾರಿಗಳಿಂದ ಹಾಗೂ ಹಾಗೂ ಆಯ್ಕೆದಾರರಿಂದ ಈ ಕುರಿತಾದ ಯಾವುದೇ ಮಾಹಿತಿ ಬಂದಿಲ್ಲ, ಹೀಗಾಗಿ ಬುಮ್ರಾ ನಾಯಕನಾಗಿ ಅಧಿಕೃತವಾಗಿ ಘೋಷಣೆಯಾಗಿಲ್ಲ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ. ಸದ್ಯ ರಾಹುಲ್ ದ್ರಾವಿಡ್ ಅವರ ಈ ಹೇಳಿಕೆ ಕ್ರಿಕೆಟ್ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದು, ನಾಯಕತ್ವ ಯಾರ ಪಾಲಾಗಲಿದೆ ಎಂಬ ಗೊಂದಲ ಮತ್ತಷ್ಟು ಹೆಚ್ಚಿದೆ.

ನಾಳೆ ಹೊರಬೀಳಲಿದೆ ನಾಯಕತ್ವದ ಅಂತಿಮ ತೀರ್ಮಾನ

ನಾಳೆ ಹೊರಬೀಳಲಿದೆ ನಾಯಕತ್ವದ ಅಂತಿಮ ತೀರ್ಮಾನ

ರಾಹುಲ್ ದ್ರಾವಿಡ್ ಅವರ ಮಾಹಿತಿಯಂತೆ ರೋಹಿತ್ ಶರ್ಮಾ ಅವರಿಗೆ ನಾಳೆ ( ಜೂನ್ 30 ) ಕೊರೊನಾ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯ ವರದಿ ಬಂದ ನಂತರವಷ್ಟೇ ರೋಹಿತ್ ಶರ್ಮಾ ಕಣಕ್ಕಿಳಿಯುತ್ತಾರಾ ಅಥವಾ ಬೇರೆ ನಾಯಕನ ಆಯ್ಕೆಯಾಗುತ್ತಾ ಎಂಬುದು ಬಹಿರಂಗಗೊಳ್ಳಲಿದೆ.

Story first published: Wednesday, June 29, 2022, 22:07 [IST]
Other articles published on Jun 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X