ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ವಿರುದ್ಧ 100 ಸಿಕ್ಸರ್ ಸಿಡಿಸಿದ ಮೊದಲ ಕ್ರಿಕೆಟಿಗ ಎಂಬ ಸಾಧನೆ ಮಾಡಿದ ರೋಹಿತ್ ಶರ್ಮಾ

Rohit Sharma is the first batsman hit 100 sixes against australia

ಟೀಮ್ ಇಂಡಿಯಾದ ಅನುಭವಿ ಆಟಗಾರ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದು ಮೊದಲ ವಿಕೆಟ್‌ಗೆ ಶುಭ್ಮನ್ ಗಿಲ್ ಜೊತೆ ಸೇರಿ 70 ರನ್‌ಗಳ ಜೊತೆಯಾಟವನ್ನು ನೀಡಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ 26 ರನ್ ಗಳಿಸಿದ ರೋಹಿತ್ ಶರ್ಮಾ ಈ ಸಂದರ್ಭದಲ್ಲಿ ವಿಶೇಷವಾದ ಸಾಧನೆಯೊಂದನ್ನು ಮಾಡಿದ್ದಾರೆ.

ಡಿಸ್ನಿ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಶರ್ಮಾ ಒಮದು ಸಿಕ್ಸರ್ ಸಿಡಿಸಿದರು. ಈ ಸಿಕ್ಸ್ ಆಸ್ಟ್ರೇಲಿಯಾ ವಿರುದ್ಧ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಸಿಡಿಸಿದ 100ನೇ ಸಿಕ್ಸರ್ ಆಗಿದೆ. ಈ ಮೂಲಕ ರೋಹಿತ್ ಶರ್ಮಾ ಆಸ್ಟ್ರೇಲಿಯಾ ತಂಡದ ವಿರುದ್ಧ 100 ಸಿಕ್ಸರ್ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ.

ಭರ್ಜರಿ ಫೀಲ್ಡಿಂಗ್ ಮೂಲಕ ಶತಕವೀರ ಸ್ಮಿತ್ ವಿಕೆಟ್ ಕೆಡವಿದ ಜಡ್ಡುಗೆ ನೆಟ್ಟಿಗರ ಪ್ರಶಂಸೆಭರ್ಜರಿ ಫೀಲ್ಡಿಂಗ್ ಮೂಲಕ ಶತಕವೀರ ಸ್ಮಿತ್ ವಿಕೆಟ್ ಕೆಡವಿದ ಜಡ್ಡುಗೆ ನೆಟ್ಟಿಗರ ಪ್ರಶಂಸೆ

ಈ ಸಾಧನೆ ಮಾಡಿದ ಏಕೈಕ ಆಟಗಾರ

ಈ ಸಾಧನೆ ಮಾಡಿದ ಏಕೈಕ ಆಟಗಾರ

ಭಾರತದ ಇನ್ನಿಂಗ್ಸ್‌ನ 16ನೇ ಓವರ್‌ನಲ್ಲಿ ರೋಹಿತ್ ಶರ್ಮಾ ನಥನ್ ಲಿಯಾನ್ ಎಸೆತದಲ್ಲಿ ಮುನ್ನುಗ್ಗಿ ಬಂದು ಸಿಕ್ಸರ್ ಸಿಡಿಸಿದರು. ಈ ಮೂಲಕ ವಿಶ್ವ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಹಾಗೂ ಏಕೈಕ ಆಟಗಾರ ಎಂಬ ಸಾಧನೆ ಮಾಡಿದ್ದಾರೆ ರೋಹಿತ್ ಶರ್ಮಾ. ಈ ಸಿಕ್ಸರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮಾದರಿಯಲ್ಲಿ ರೋಹಿತ್ ಶರ್ಮಾ ಸಿಡಿಸಿದ 424ನೇ ಸಿಕ್ಸರ್ ಆಗಿದೆ.

ಆಸಿಸ್ ವಿರುದ್ಧ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರು

ಆಸಿಸ್ ವಿರುದ್ಧ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರು

ಆಸ್ಟ್ರೇಲಿಯಾ ವಿರುದ್ಧ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಮೊದಲಿಗನಾಗಿದ್ದು ಅವರ ಖಾತೆಯಲ್ಲಿ 100 ಸಿಕ್ಸರ್‌ಗಳು ಇದೆ. ಎರಡನೇ ಸ್ಥಾನದಲ್ಲಿ ಇಂಗ್ಲೆಂಡ್ ತಂಡದ ಸೀಮಿತ ಓವರ್‌ಗಳ ನಾಯಕ ಇಯಾನ್ ಮಾರ್ಗನ್ ಇದ್ದು 63 ಸಿಕ್ಸರ್ ಸಿಡಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ 61 ಸಿಕ್ಸರ್ ಸಿಡಿಸಿರುವ ಬ್ರೆಂಡನ್ ಮೆಕ್‌ಕಲಮ್ ಮೂರನೇ ಸ್ಥಾನದಲ್ಲಿ ಹಾಗೂ ತಲಾ 60 ಸಿಕ್ಸರ್ ಸಿಡಿಸಿರುವ ಸಚಿನ್ ತೆಂಡೂಲ್ಕರ್ ಹಾಗೂ ಎಂಎಸ್ ಧೋನಿ ನಂತರದ ಸ್ಥಾನದಲ್ಲಿದ್ದಾರೆ.

ಸುದೀರ್ಘ ಕಾಲದ ಬಳಿಕ ಟೆಸ್ಟ್‌ಗೆ ಮರಳಿದ ಶರ್ಮಾ

ಸುದೀರ್ಘ ಕಾಲದ ಬಳಿಕ ಟೆಸ್ಟ್‌ಗೆ ಮರಳಿದ ಶರ್ಮಾ

ಐಪಿಎಲ್ ವೇಳೆ ಗಾಯಗೊಂಡಿದ್ದ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಿಂದ ಹೊರಗುಳಿದಿದ್ದರು. ಮೊದಲ ಎರಡಯ ಟೆಸ್ಟ್ ಪಂದ್ಯಗಳಿಂದಲೂ ಹೊರಗುಳಿದಿದ್ದ ಶರ್ಮಾ ಮೂರನೇ ಪಂದ್ಯದಲ್ಲಿ ಸುದೀರ್ಘ ಕಾಲದ ಬಳಿಕ ಮರಳಿದ್ದಾರೆ.

Story first published: Friday, January 8, 2021, 16:41 [IST]
Other articles published on Jan 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X