ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂದಿನ ಎಂಎಸ್ ಧೋನಿ ಈತನೇ ಎಂದು ಸುರೇಶ್ ರೈನಾ ಹೆಸರಿಸಿದ್ದು ಯಾರನ್ನು?

Rohit Sharma Is The Next Ms Dhoni For The Indian Cricket Team-Suresh Raina

ಭಾರತದ ಅನುಭವಿ ಕ್ರಿಕೆಟಿಗ ಸುರೇಶ್ ರೈನಾ ಟೀಮ್ ಇಂಡಿಯಾ ನಾಯಕತ್ವದ ಬಗ್ಗೆ ಗಮನಾರ್ಹ ಹೇಳಿಕೆಯೊಂದನ್ನು ನೀಡಿದ್ದಾರೆ. ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಯ ನಾಯಕತ್ವದ ಶೈಲಿಗೆ ಹಾಲಿ ಭಾರತೀಯ ಕ್ರಿಕೆಟಿಗನನ್ನು ಹೋಲಿಸಿದ್ದಾರೆ. ಈತನೇ ಭಾರತದ ಮುಂದಿನ ಧೋನಿ ಎಂದಿದ್ದಾರೆ.

ಹಾಲಿ ನಾಯಕ ವಿರಾಟ್ ಕೊಹ್ಲಿಯನ್ನು ಧೋನಿ ನಾಯಕತ್ವಕ್ಕೆ ಸುರೇಶ್ ರೈನಾ ಹೋಲಿಕೆ ಮಾಡಿಲ್ಲ. ಆದರೆ ಇನ್ನೋರ್ವ ಪ್ರಮುಖ ಆಟಗಾರನನ್ನು ಸುರೇಶ್ ರೈನಾ ಈತ ಭಾರತದ ಮುಂದಿನ ಎಂಎಸ್ ಧೋನಿ ಎಂದು ಮನಸಾರೆ ಹೊಗಳಿದ್ದಾರೆ. ಈ ಹೋಲಿಕೆಗೆ ಈಗಾಗಲೇ ಅನೇಕ ಮಾಜಿ ಕ್ರಿಕೆಟಿಗನಿಂದ ಪಾತ್ರನಾಗಿರುವ ಆ ಆಟಗಾರ ಬೇರೆ ಯಾರೂ ಅಲ್ಲ ಟೀಮ್ ಇಂಡಿಯಾ ಸೀಮಿತ ಓವರ್‌ಗಳ ಉಪನಾಯಕ.

ಮನಮುಟ್ಟುವ ಹಾಗೆ ಸ್ಟುವರ್ಟ್ ಬ್ರಾಡ್‌ಗೆ ಸಂದೇಶ ಬರೆದ ಯುವರಾಜ್ ಸಿಂಗ್!ಮನಮುಟ್ಟುವ ಹಾಗೆ ಸ್ಟುವರ್ಟ್ ಬ್ರಾಡ್‌ಗೆ ಸಂದೇಶ ಬರೆದ ಯುವರಾಜ್ ಸಿಂಗ್!

ಧೋನಿ ಅವರು ಕ್ರಿಕೆಟಿಗೆ ನಿವೃತ್ತಿ ಹೇಳಿದ ನಂತರ ಅವರ ಜಾಗವನ್ನು ಯಾರೂ ತುಂಬುತ್ತಾರೆ. ಜೊತೆಗೆ ಅವರ ರೀತಿಯ ಕೂಲ್ ಕ್ಯಾಪ್ಟನ್ ಭಾರತ ತಂಡಕ್ಕೆ ಬೇಕು ಎಂದು ಕೆಲವರು ವಾದಿಸುತ್ತಿದ್ದಾರೆ. ಈಗ ಈ ವಿಚಾರವಾಗಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಸುರೇಶ್ ರೈನಾ, ಧೋನಿ ರೀತಿಯ ನಾಯಕತ್ವದ ಗುಣಗಳು ಮತ್ತು ಶಾಂತ ಸ್ವಾಭಾವವನ್ನು ನಾನು ರೋಹಿತ್ ಅವರಲ್ಲಿ ನೋಡಿದ್ದೇನೆ ಎಂದು ಹೇಳಿದ್ದಾರೆ.

ನಾಯಕತ್ವದಲ್ಲಿ ಮಾಜಿ ನಾಯಕ ಎಂಎಸ್ ಧೋನಿಗೆ ರೋಹಿತ್ ಅವರನ್ನು ಹೋಲಿಸಿರುವ ಸುರೇಶ್ ರೈನಾ, ಧೋನಿಯಂತೆ ಶರ್ಮಾ ಕೂಡ ಶಾಂತವಾಗಿರುತ್ತಾರೆ, ತಂಡದ ಉಳಿದ ಆಟಗಾರರಿಗೆ ಸ್ಫೂರ್ತಿ ತುಂಬುತ್ತಿರುತ್ತಾರೆ ಎಂದಿದ್ದಾರೆ.

'ರೋಹಿತ್ ನಾಯಕತ್ವ ಧೋನಿ ನಾಯಕತ್ವಕ್ಕೆ ತುಂಬಾ ಹೋಲಿಕೆಯಾಗುತ್ತದೆ. ಶಾಂತ ಸ್ವಾಭಾವದಲ್ಲಿ ಎಲ್ಲವನ್ನೂ ನಿಭಾಯಿಸೋದು, ಆಟಗಾರರಿಗೆ ಸ್ಫೂರ್ತಿ ನೀಡೋದು ಇವುಗಳಲ್ಲಿ ಶರ್ಮಾ ಧೋನಿಗೆ ಹೋಲುತ್ತಾರೆ. ಅವರು ಯಾವಾಗಲೂ ಬಿಂದಾಸ್ ಆಗಿರುತ್ತಾರೆ. ಯಾಕೆಂದರೆ ಅವರಿಗೆ ಗೊತ್ತು, ಯಾವಾಗ ಬ್ಯಾಟಿಂಗ್‌ಗೆ ಹೋದರೂ ತಾನು ರನ್‌ ಗಳಿಸುತ್ತೇನೆಂದು,' ಎಂದು ರೈನಾ ಅಭಿಪ್ರಾಯಿಸಿದ್ದಾರೆ.

ಮಾತು ಮುಂದುವರೆಸಿದ ರೈನಾ, 'ರೋಹಿತ್ ಶರ್ಮಾ ಅವರಲ್ಲಿರುವ ಆತ್ಮ ವಿಶ್ವಾಸ ಒಬ್ಬ ಆಟಗಾರನಲ್ಲಿದ್ದರೆ, ಆತನಿಂದ ಉಳಿದವರೂ ಆ ಗುಣವನ್ನು ಹೆಕ್ಕಿಕೊಳ್ಳುತ್ತಾರೆ. ರೋಹಿತ್ ಇರೋದೆ ಹೀಗೆ,' ಎಂದು ಎಂದರು. ಐಪಿಎಲ್‌ನಲ್ಲಿ ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ 3 ಬಾರಿ ಪ್ರಶಸ್ತಿ ಗೆದ್ದಿದ್ದರೆ, ಶರ್ಮಾ ನಾಯಕತ್ವದಲ್ಲಿ ಎಂಐ 4 ಬಾರಿ ಟ್ರೋಫಿ ಗೆದ್ದಿದೆ.

Story first published: Tuesday, August 11, 2020, 17:40 [IST]
Other articles published on Aug 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X