ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ, ಪಾಂಡ್ಯ, ರಾಹುಲ್, ರೋಹಿತ್ ಪೈಕಿ ಚೊಚ್ಚಲ ಐಪಿಎಲ್‌ನಲ್ಲಿಯೇ 3 ಕೋಟಿ ಪಡೆದದ್ದು ಈತ ಮಾತ್ರ!

Rohit Sharma is the only active Indian cricketer who got 3 crores in 2008 IPL season

2007ರಲ್ಲಿ ನಡೆದಿದ್ದ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಿದ ಬೆನ್ನಲ್ಲೇ ಬಿಸಿಸಿಐ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಚೊಚ್ಚಲ ಆವೃತ್ತಿಯನ್ನು 2008ರಲ್ಲಿ ನಡೆಸಿ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಮಟ್ಟದ ಸಂಚಲನವನ್ನು ಸೃಷ್ಟಿಸಿತ್ತು. ಹೌದು, ವಿಶ್ವ ಕ್ರಿಕೆಟ್‌ನಲ್ಲೇ ಅದೇ ಮೊದಲ ಬಾರಿಗೆ ಫ್ರಾಂಚೈಸಿ ಕ್ರಿಕೆಟ್ ಲೀಗ್‌ನ್ನು ನಡೆಸಿ ಫ್ರಾಂಚೈಸಿ ಕ್ರಿಕೆಟ್ ಟೂರ್ನಮೆಂಟ್ ಪ್ರವೃತ್ತಿಗೆ ನಾಂದಿಯನ್ನು ಹಾಡಿ ಇತರೆ ಕ್ರಿಕೆಟ್ ದೇಶಗಳಿಗೆ ಸ್ಪೂರ್ತಿ ಆಗಿತ್ತು.

ಒಂದಲ್ಲಾ ಎರಡಲ್ಲ ಮೂರು ಬಾರಿ ಈ ಬಾರಿಯ ಏಷ್ಯಾಕಪ್‌ನಲ್ಲಿ ಮುಖಾಮುಖಿಯಾಗಲಿವೆ ಭಾರತ ಮತ್ತು ಪಾಕ್!ಒಂದಲ್ಲಾ ಎರಡಲ್ಲ ಮೂರು ಬಾರಿ ಈ ಬಾರಿಯ ಏಷ್ಯಾಕಪ್‌ನಲ್ಲಿ ಮುಖಾಮುಖಿಯಾಗಲಿವೆ ಭಾರತ ಮತ್ತು ಪಾಕ್!

ಇಂಡಿಯನ್ ಪ್ರೀಮಿಯರ್ ಲೀಗ್‌ ಮೊದಲ ವರ್ಷದಿಂದಲೂ ಸಹ ಬೃಹತ್‌ ಹಣದ ಹರಿವಿನಿಂದ ಕೂಡಿದ್ದ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಟೂರ್ನಮೆಂಟ್ ಆಗಿದ್ದು, ಆವೃತ್ತಿಯಿಂದ ಆವೃತ್ತಿಗೆ ಹಣದ ಮಟ್ಟ ಹೆಚ್ಚೇ ಆಯಿತು ಎನ್ನಬಹುದು. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಳಲ್ಲಿ ಕಣಕ್ಕಿಳಿಯುತ್ತಿದ್ದ ಆಟಗಾರರಿಗೆ ಕೈತುಂಬಾ ಕೋಟಿ ಕೋಟಿ ರೂಪಾಯಿ ಸಿಗುತ್ತಿದ್ದ ಕಾರಣ ಈ ಫ್ರಾಂಚೈಸಿ ಕ್ರಿಕೆಟ್ ಟೂರ್ನಮೆಂಟ್ ಎಂದರೆ ಆಟಗಾರರಿಗೂ ಸಹ ಫೇವರಿಟ್ ಎನ್ನಬಹುದು.

IND vs ZIM: ಜಿಂಬಾಬ್ವೆ ಸರಣಿಗೆ ಆಯ್ಕೆಯಾಗಿದ್ದರೂ ಸಹ ಈ ಮೂವರಿಗೆ ಆಡುವ ಅವಕಾಶ ಸಿಗುವುದು ಕನಸೇ!IND vs ZIM: ಜಿಂಬಾಬ್ವೆ ಸರಣಿಗೆ ಆಯ್ಕೆಯಾಗಿದ್ದರೂ ಸಹ ಈ ಮೂವರಿಗೆ ಆಡುವ ಅವಕಾಶ ಸಿಗುವುದು ಕನಸೇ!

ಇನ್ನು ಈ ಇಂಡಿಯನ್ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿ ದಿಗ್ಗಜ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ರೀತಿಯ ಆಟಗಾರರು ಕಣಕ್ಕಿಳಿದಿದ್ದು, ರಿಕಿ ಪಾಂಟಿಂಗ್, ಶೇನ್ ವಾರ್ನ್, ಆಡಂ ಗಿಲ್‌ಕ್ರಿಸ್ಟ್, ರಾಸ್ ಟೇಲರ್ ಹಾಗೂ ಜಾಕ್ಸ್ ಕಾಲೀಸ್ ರೀತಿಯ ಖ್ಯಾತ ವಿದೇಶಿ ಕ್ರಿಕೆಟಿಗರೂ ಸಹ ಈ ಐಪಿಎಲ್‌ನಲ್ಲಿ ಆಡಿದ್ದಾರೆ. ಇನ್ನು ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇಂದು ಸ್ಟಾರ್ ಆಟಗಾರರಾಗಿ ಮಿಂಚುತ್ತಿರುವ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಹಾಗೂ ಕೆಎಲ್ ರಾಹುಲ್ ಆರಂಭದಲ್ಲಿ ಯುವ ಕ್ರಿಕೆಟಿಗರಾಗಿ ಕಣಕ್ಕಿಳಿದಿದ್ದರು. ಹಾಗೂ ಇಂದು ಕೋಟಿ ಕೋಟಿ ಪಡೆಯುತ್ತಿರುವ ಈ ಕ್ರಿಕೆಟಿಗರು ಅಂದು ಲಕ್ಷ ರೂಪಾಯಿಗಳನ್ನು ಪಡೆದದ್ದು ತಿಳಿದಿರುವ ವಿಷಯವೇ. ಆದರೆ ಈ ಆಟಗಾರರ ಪೈಕಿ ಓರ್ವ ಆಟಗಾರ ಮಾತ್ರ ತನ್ನ ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿಯೇ 3 ಕೋಟಿ ಪಡೆದಿದ್ದರು. ಈ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ಚೊಚ್ಚಲ ಆವೃತ್ತಿಯಲ್ಲಿ ಲಕ್ಷ ಪಡೆದಿದ್ದವರು

ಚೊಚ್ಚಲ ಆವೃತ್ತಿಯಲ್ಲಿ ಲಕ್ಷ ಪಡೆದಿದ್ದವರು

ಇಂದು ಕೋಟಿ ಕೋಟಿ ಪಡೆಯುತ್ತಿರುವ ಆಟಗಾರರಾದ ವಿರಾಟ್ ಕೊಹ್ಲಿ ತನ್ನ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ 12 ಲಕ್ಷ ರೂಪಾಯಿಗಳನ್ನು ಪಡೆದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿದಿದ್ದರು. 2013ರ ಐಪಿಎಲ್‌ನಲ್ಲಿ ತನ್ನ ಮೊದಲ ಐಪಿಎಲ್ ಆವೃತ್ತಿ ಆಡಿದ್ದ ಜಸ್ಟ್ರೀತ್ ಬುಮ್ರಾ 10 ಲಕ್ಷ ಸಂಭಾವನೆಯನ್ನು ಪಡೆದಿದ್ದರು. 2015ರಲ್ಲಿ ಮುಂಬೈ ಇಂಡಿಯನ್ಸ್ ಪರ ತನ್ನ ಚೊಚ್ಚಲ ಐಪಿಎಲ್ ಆಡಿದ್ದ ಹಾರ್ದಿಕ್ ಪಾಂಡ್ಯ 10 ಪಡೆದಿದ್ದರು ಹಾಗೂ ಕೆಎಲ್ ರಾಹುಲ್ 2013ರಲ್ಲಿ ಚೊಚ್ಚಲ ಐಪಿಎಲ್ ಆಡಿ 10 ಲಕ್ಷಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ್ದರು.

ಚೊಚ್ಚಲ ಐಪಿಎಲ್‌ನಲ್ಲೇ 3 ಕೋಟಿ ಪಡೆದಿದ್ದ ರೋಹಿತ್!

ಚೊಚ್ಚಲ ಐಪಿಎಲ್‌ನಲ್ಲೇ 3 ಕೋಟಿ ಪಡೆದಿದ್ದ ರೋಹಿತ್!

ಸದ್ಯ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾಗಿ ಮಿಂಚುತ್ತಿರುವ ಈ ಆಟಗಾರರ ಪೈಕಿ ಚೊಚ್ಚಲ ಆವೃತ್ತಿಯಲ್ಲೇ ( 2008 ) 3 ಕೋಟಿ ಸಂಭಾವನೆಯನ್ನು ಪಡೆದಿದ್ದರು. ಈಗಿನ ಟೀಮ್ ಇಂಡಿಯಾದಲ್ಲಿರುವ ಆಟಗಾರರ ಪೈಕಿ 2008ರ ಐಪಿಎಲ್‌ನಲ್ಲಿ ಅತಿಹೆಚ್ಚು ಹಣ ಪಡೆದ ಆಟಗಾರ ಎಂಬ ದಾಖಲೆಯನ್ನು ರೋಹಿತ್ ಶರ್ಮಾ ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ. 2007ರಲ್ಲಿ ನಡೆದಿದ್ದ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಟೀಮ್ ಇಂಡಿಯಾದಲ್ಲಿ ರೋಹಿತ್ ಶರ್ಮಾ ಕೂಡ ಭಾಗಿಯಾಗಿದ್ದರಿಂದ ರೋಹಿತ್ ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿಯೇ ಇಷ್ಟು ದೊಡ್ಡ ಮೊತ್ತ ಪಡೆಯಲು ಕಾರಣ ಎನ್ನಬಹುದು.

ಚೊಚ್ಚಲ ಆವೃತ್ತಿಯಲ್ಲಿ ರೋಹಿತ್ ಪ್ರದರ್ಶನ

ಚೊಚ್ಚಲ ಆವೃತ್ತಿಯಲ್ಲಿ ರೋಹಿತ್ ಪ್ರದರ್ಶನ

2008ರ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿಯಲ್ಲಿ 3 ಕೋಟಿ ಪಡೆದು ಡೆಕ್ಕನ್ ಚಾರ್ಜರ್ಸ್ ಪರ ಆಡಿದ್ದ ರೋಹಿತ್ ಶರ್ಮಾ 12 ಇನ್ನಿಂಗ್ಸ್‌ನಲ್ಲಿ ಬ್ಯಾಟ್ ಬೀಸಿ 404 ರನ್ ಕಲೆಹಾಕಿದ್ದರು, 4 ಅರ್ಧಶತಕ ಬಾರಿಸಿದ್ದರು ಹಾಗೂ ರೋಹಿತ್ ಆ ಆವೃತ್ತಿಯಲ್ಲಿ ಕಲೆಹಾಕಿದ್ದ ಗರಿಷ್ಟ ರನ್ ಅಜೇಯ 76.

Story first published: Wednesday, August 17, 2022, 21:57 [IST]
Other articles published on Aug 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X