ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ಪ್ರವಾಸಕ್ಕೆ ರೋಹಿತ್, ಇಶಾಂತ್ ಸೇರ್ಪಡೆ ಸಾಧ್ಯತೆ!

Rohit Sharma, Ishant Sharma are likely to include in Australia tour

ದುಬೈ: ನವೆಂಬರ್ 27ರಿಂದ ಆರಂಭಗೊಳ್ಳಲಿರುವ ಭಾರತ-ಆಸ್ಟ್ರೇಲಿಯಾ ಪ್ರವಾಸ ಸರಣಿಗೆ ಭಾರತ ತಂಡದಲ್ಲಿ ಹಿಟ್‌ಮ್ಯಾನ್ ರೋಹಿತ್ ಶರ್ಮಾ ಮತ್ತು ಅನುಭವಿ ವೇಗಿ ಇಶಾಂತ್ ಶರ್ಮಾ ಸೇರಿಕೊಳ್ಳುವ ಸಾಧ್ಯತೆಯಿದೆ. ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಮೂಲ ಈ ವಿಚಾರ ತಿಳಿಸಿರುವುದಾಗಿ ವರದಿಯಾಗಿದೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್ ನಾಯಕರಾಗಿರುವ ರೋಹಿತ್ ಶರ್ಮಾ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ನ ಆಟಗಾರ ಇಶಾಂತ್ ಶರ್ಮಾ ಲೀಗ್‌ ಹಂತದ ಕೊನೇ ಪಂದ್ಯಗಳಲ್ಲಿ ಪಾಲ್ಗೊಂಡಿಲ್ಲ.

ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಡೆಲ್ಲಿ ಕ್ಯಾಪಿಟಲ್ಸ್!ಐಪಿಎಲ್ ಇತಿಹಾಸದಲ್ಲಿ ಅಪರೂಪದ ದಾಖಲೆ ಬರೆದ ಡೆಲ್ಲಿ ಕ್ಯಾಪಿಟಲ್ಸ್!

ಗಾಯಕ್ಕೀಡಾಗಿದ್ದ ಇಬ್ಬರೂ ಸದ್ಯ ಇನ್ನೂ ಪೂರ್ತಿ ಚೇತರಿಸಿಕೊಂಡಿಲ್ಲ. ಗಾಯಕ್ಕೀಡಾಗಿದ್ದರಿಂದ ರೋಹಿತ್ ಮತ್ತು ಇಶಾಂತ್ ಇಬ್ಬರನ್ನೂ ಬಹು ನಿರೀಕ್ಷಿತ ಆಸ್ಟ್ರೇಲಿಯಾ ಸರಣಿಯಿಂದ ಕೈ ಬಿಡಲಾಗಿತ್ತು. ಆಸೀಸ್ ಪ್ರವಾಸ ಸರಣಿಗೆ ತಂಡ ಪ್ರಕಟಿಸುವಾಗ ಪಟ್ಟಿಯಲ್ಲಿ ಇಬ್ಬರ ಹೆಸರೂ ಇರಲಿಲ್ಲ.

12 ವರ್ಷಗಳ ಹಿಂದಿನ ದಾಖಲೆ ಮುರಿದ ದೇವದತ್ ಪಡಿಕ್ಕಲ್12 ವರ್ಷಗಳ ಹಿಂದಿನ ದಾಖಲೆ ಮುರಿದ ದೇವದತ್ ಪಡಿಕ್ಕಲ್

ಈ ಬಗ್ಗೆ ಅನೇಕ ಕ್ರಿಕೆಟ್ ಪರಿಣಿತರು, ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಆದರೆ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ರೋಹಿತ್, ಇಶಾಂತ್ ಫಿಟ್ ಆದರೆ ತಂಡಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಗಂಗೂಲಿ ಮಾಹಿತಿ

ಗಂಗೂಲಿ ಮಾಹಿತಿ

ರೋಹಿತ್ ಶರ್ಮಾ ಮತ್ತು ಇಶಾಂತ್ ಶರ್ಮಾ ಚೇತರಿಕೆಯ ಕಡೆ ಲಕ್ಷ್ಯ ಹರಿಸುತ್ತಿರುವುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಿಂದುಸ್ತಾನ್ ಟೈಮ್ಸ್‌ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ. ಇಶಾಂತ್‌ ಫಿಟ್ ಆದರೆ ಆಸ್ಟ್ರೇಲಿಯಾ ಟೆಸ್ಟ್ ಸರಣಿಗೆ, ರೋಹಿತ್ ಫಿಟ್ ಆದರೆ ಆಸ್ಟ್ರೇಲಿಯಾ ಸರಣಿಗೆ ಸೇರಿಸಿಕೊಳ್ಳುವತ್ತ ಆಯ್ಕೆದಾರರು ಮತ್ತೆ ಯೋಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮುಫಾದ್ದಲ್ ವೊಹ್ರಾ ಟ್ವೀಟ್

ಮುಫಾದ್ದಲ್ ವೊಹ್ರಾ ಟ್ವೀಟ್

ರೋಹಿತ್ ಶರ್ಮಾ ಫಿಟ್ ಆದರೆ ಆಯ್ಕೆದಾರರು ಖಂಡಿತಾ ಆಸ್ಟ್ರೇಲಿಯಾಕ್ಕೆ ಪರಿಗಣಿಸಲಿದ್ದಾರೆ ಎಂದು ಗಂಗೂಲಿ, ಹಿಂದೂಸ್ತಾನ್ ಟೈಮ್ಸ್‌ಗೆ ಹೇಳಿರುವುದಾಗಿ ಕ್ರಿಕೆಟ್ ವಿಶ್ಲೇಷಕ ಮುಫಾದ್ದಲ್ ವೊಹ್ರಾ ಕೂಡ ಟ್ವೀಟ್ ಮಾಡಿದ್ದಾರೆ. ಹಿಂದೂಸ್ತಾನ್ ಟೈಮ್ಸ್‌ನಲ್ಲೂ ಈ ಬಗ್ಗೆ ವರದಿಯಿದೆ.

ನನಗೆ ಭರವಸೆಯಿದೆ

ನನಗೆ ಭರವಸೆಯಿದೆ

'ರೋಹಿತ್ ಶರ್ಮಾ ಬಗ್ಗೆ ಹೇಳೋದಾದ್ರೆ, ಆತ ಆಸ್ಟ್ರೇಲಿಯಾ ಪ್ರವಾಸಕ್ಕೆ ಫಿಟ್ ಆಗೋದನ್ನು ನಾವು ಬಯಸುತ್ತೇವೆ. ಸರಣಿಯ ಯಾವುದಾದರೂ ಹಂತದಲ್ಲಿ ಆತ ಫಿಟ್ ಆದರೆ, ಆತನಿಗೆ ಸ್ಥಾನ ನೀಡುವತ್ತ ಆಯ್ಕೆದಾರರು ಖಂಡಿತಾ ಯೋಚಿಸುತ್ತಾರೆ ಎಂದು ನನಗೆ ಭರವಸೆಯಿದೆ,' ಎಂಧು ಗಂಗೂಲಿ ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ಹೇಳಿದೆ.

ಭಾರತ vs ಆಸ್ಟ್ರೇಲಿಯಾ ಸರಣಿ

ಭಾರತ vs ಆಸ್ಟ್ರೇಲಿಯಾ ಸರಣಿ

ಆಸ್ಟ್ರೇಲಿಯಾಕ್ಕೆ ಪ್ರವಾಸ ಹೊರಡಲಿರುವ ಭಾರತ ತಂಡ ಅಲ್ಲಿ ಮೂರು ಪಂದ್ಯಗಳ ಟಿ20ಐ ಸರಣಿ, ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಇದರಲ್ಲಿ ಡೆ-ನೈಟ್ ಟೆಸ್ಟ್ ಕೂಡ ಸೇರಿರಲಿದೆ. ನವೆಂಬರ್ 10ಕ್ಕೆ ಐಪಿಎಲ್ ಕೊನೆಗೊಂಡ ಬಳಿಕ ಟೀಮ್ ಇಂಡಿಯಾ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲಿದೆ.

Story first published: Tuesday, November 3, 2020, 12:33 [IST]
Other articles published on Nov 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X