ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಹಿತ್, ಇಶಾಂತ್ ಭಾರತ ಟೆಸ್ಟ್ ತಂಡದಲ್ಲೇ ಇಲ್ಲ: ಬಿಸಿಸಿಐ

Rohit Sharma, Ishant Sharma were not scheduled to fly to Australia: BCCI

ನವದೆಹಲಿ: ಬಹು ನಿರೀಕ್ಷಿತ ಭಾರತ vs ಆಸ್ಟ್ರೇಲಿಯಾ ಸರಣಿಯಲ್ಲಿ ಭಾರತದ ಅನುಭವಿಗಳಾದ ರೋಹಿತ್ ಶರ್ಮಾ ಮತ್ತು ಇಶಾಂತ್ ಶರ್ಮಾ ಆಡುವ ಸಾಧ್ಯತೆ ತೀರಾ ಕಡಿಮೆಯಿದೆ. ಈ ಕುರಿತು ಕ್ರಿಕೆಟ್ ವಲಯದಲ್ಲಿ ಚರ್ಚೆಯಾಗುತ್ತಿದೆ. ಈ ಬಗ್ಗೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಪ್ರತಿಕ್ರಿಯಿಸಿದೆ. ಆಸ್ಟ್ರೇಲಿಯಾಕ್ಕೆ ರೋಹಿತ್ ಮತ್ತು ಇಶಾಂತ್ ಪ್ರಯಾಣಿಸುತ್ತಿಲ್ಲ ಎಂದು ಬಿಸಿಸಿಐ ಹೇಳಿದೆ.

ಆಸ್ಟ್ರೇಲಿಯಾದಲ್ಲಿ ಭಾರತ: ಕೆಎಲ್ ರಾಹುಲ್ ತಂಡ ಸೋಲಿಸಿದ ಕೊಹ್ಲಿ ಪಡೆಆಸ್ಟ್ರೇಲಿಯಾದಲ್ಲಿ ಭಾರತ: ಕೆಎಲ್ ರಾಹುಲ್ ತಂಡ ಸೋಲಿಸಿದ ಕೊಹ್ಲಿ ಪಡೆ

ರೋಹಿತ್ ಶರ್ಮಾ ಮತ್ತು ಇಶಾಂತ್ ಶರ್ಮಾ ಅವರನ್ನು ಆಸ್ಟ್ರೇಲಿಯಾ ಪ್ರವಾಸದಿಂದ ದೂರ ಇಟ್ಟಿರುವ ವಿವಾದಕ್ಕೆ ಸ್ಪಷ್ಟನೆ ನೀಡಿರುವ ಬಿಸಿಸಿಐ, 'ರೋಹಿತ್ ಮತ್ತು ಇಶಾಂತ್ ಭಾರತ ತಂಡದಲ್ಲೇ ಇಲ್ಲ. ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಗಾಗಿ 18 ಜನರ ತಂಡ ಪ್ರಕಟವಾಗಿದೆ,' ಎಂದಿದೆ.

ಕೊಹ್ಲಿಯ ಗೈರಲ್ಲಿ ಇದನ್ನು ಪ್ರಯತ್ನಿಸಲೇ ಬೇಡಿ: ರಹಾನೆಗೆ ಸಲಹೆ ನೀಡಿದ ಬುಕನಾನ್ಕೊಹ್ಲಿಯ ಗೈರಲ್ಲಿ ಇದನ್ನು ಪ್ರಯತ್ನಿಸಲೇ ಬೇಡಿ: ರಹಾನೆಗೆ ಸಲಹೆ ನೀಡಿದ ಬುಕನಾನ್

ಬಿಸಿಸಿಐ ಹೇಳಿರುವಂತೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ ಆರಂಭಿಕ ಎರಡು ಟೆಸ್ಟ್ ಪಂದ್ಯಗಳಿಂದ ರೋಹಿತ್, ಇಶಾಂತ್ ಹೊರಗಿಡಲಾಗಿದೆ.

ಕೊಹ್ಲಿ ಜಾಗಕ್ಕೆ ಶ್ರೇಯಸ್

ಕೊಹ್ಲಿ ಜಾಗಕ್ಕೆ ಶ್ರೇಯಸ್

'ವಿರಾಟ್ ಕೊಹ್ಲಿ ಭಾರತಕ್ಕೆ ವಾಪಸ್ಸಾಗುತ್ತಿರುವುದರಿಂದ ಅವರ ಜಾಗಕ್ಕೆ ಶ್ರೇಯಸ್ ಐಯ್ಯರ್ ತರಲು ಯೋಚಿಸುತ್ತಿದ್ದೇವೆ. ಆಸ್ಟ್ರೇಲಿಯಾದಲ್ಲಿ 14 ದಿನಗಳ ಕಡ್ಡಾಯ ಕ್ವಾರಂಟೈನ್ ಇರುವುದೂ ರೋಹಿತ್, ಇಶಾಂತ್‌ಗೆ ಸಮಸ್ಯೆಯಾಗಿದೆ,' ಎಂದು ಬಿಸಿಸಿಐ ಹೇಳಿದೆ.

ಆಸ್ಟ್ರೇಲಿಯಾ ಸರಣಿಗೆ ರೋಹಿತ್ ಇಲ್ಲ?!

ಆಸ್ಟ್ರೇಲಿಯಾ ಸರಣಿಗೆ ರೋಹಿತ್ ಇಲ್ಲ?!

'ಡಿಸೆಂಬರ್ 12ಕ್ಕೆ ರೋಹಿತ್‌ಗೆ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸಲು ಅವಕಾಶ ನೀಡಿದರೂ ಅವರು ಪ್ರಯಾಣಿಸುತ್ತಾರೆಯೇ? ಅಲ್ಲಿ ಯಾವುದೇ ವಾಣಿಜ್ಯ ವಿಮಾನಗಳಿಲ್ಲ. ಹಾಗೂ ರೋಹಿತ್ ಆಸ್ಟ್ರೇಲಿಯಾಕ್ಕೆ ಹೋದರೂ ಮತ್ತೆ ಎರಡು ವಾರಗಳ ಕ್ವಾರಂಟೈನ್ ಪಾಲಿಸಬೇಕು. ಕ್ವಾರಂಟೈನ್ ಪಾಲಿಸಿದ ಮೇಲೆ ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಳ್ಳಬೇಕಾದರೆ ಫಿಟ್‌ನೆಸ್ ಸಂಗತಿಯಾಗುತ್ತದೆ,' ಎಂದು ಬಿಸಿಸಿಐ ತಿಳಿಸಿದೆ.

ಡಿಸೆಂಬರ್ 11ಕ್ಕೆ ಪರೀಕ್ಷೆ

ಡಿಸೆಂಬರ್ 11ಕ್ಕೆ ಪರೀಕ್ಷೆ

ಮಾಹಿತಿಯ ಪ್ರಕಾರ, ಗಾಯಕ್ಕೀಡಾಗಿ ಸದ್ಯ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಚೇತರಿಸಿಕೊಳ್ಳುತ್ತಿರುವ ರೋಹಿತ್ ಫಿಟ್‌ನೆಸನ್ನು ಡಿಸೆಂಬರ್ 11ರಂದು ಪರೀಕ್ಷಿಸಲಾಗುತ್ತದೆ. ಆ ಬಳಿಕ ಟೆಸ್ಟ್‌ಗೆ ರೋಹಿತ್ ಸೂಕ್ತವೇ ಎಂದು ನಿರ್ಧರಿಸಲಾಗುತ್ತದೆ. ಆದರೆ ಬಿಸಿಸಿಐ ನೀಡಿರುವ ಸುಳಿವಿನ ಪ್ರಕಾರ ರೋಹಿತ್ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುವ ಸಾಧ್ಯತೆ ತುಂಬಾ ಕಡಿಮೆ.

ಭಾರತ-ಆಸ್ಟ್ರೇಲಿಯಾ ಸರಣಿ

ಭಾರತ-ಆಸ್ಟ್ರೇಲಿಯಾ ಸರಣಿ

ನವೆಂಬರ್ 27ರಿಂದ ಭಾರತ-ಆಸ್ಟ್ರೇಲಿಯಾ ಸರಣಿ ಆರಂಭವಾಗಲಿದ್ದು, ಡಿಸೆಂಬರ್ 17ರಿಂದ ಟೆಸ್ಟ್ ಸರಣಿ ಶುರುವಾಗಲಿದೆ. ಅಲ್ಲಿಂದ ಜನವರಿ 19ರ ವರೆಗೆ ಟೆಸ್ಟ್ ಸರಣಿ ನಡೆಯಲಿದೆ. ಭಾರತ-ಆಸ್ಟ್ರೇಲಿಯಾ ಸರಣಿ 3 ಏಕದಿನ, 3 ಟಿ20ಐ ಮತ್ತು 4 ಟೆಸ್ಟ್ ಪಂದ್ಯಗಳನ್ನು ಒಳಗೊಂಡಿದೆ. ಇದರಲ್ಲಿ ಒಂದು ಡೇ-ನೈಟ್ ಟೆಸ್ಟ್ ಕೂಡ ಸೇರಿದೆ.

Story first published: Wednesday, November 25, 2020, 10:24 [IST]
Other articles published on Nov 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X