ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC Rankingನಲ್ಲಿ ಈ ಸಾಧನೆ ಮೆರೆದ 3ನೇ ಭಾರತೀಯ ರೋಹಿತ್ ಶರ್ಮಾ!

Rohit becomes third Indian to reach top 10 in ICC rankings | Oneindia Kannada
Rohit Sharma joins Virat Kohli and Gautam Gambhir in elite ICC rankings list

ನವದೆಹಲಿ, ಅಕ್ಟೋಬರ್ 23: ಬ್ಯಾಟಿಂಗ್ ಬಲಿಷ್ಟ ರೋಹಿತ್ ಶರ್ಮಾ ಐಸಿಸಿ ರ್ಯಾಂಕಿಂಗ್‌ನಲ್ಲಿ ಭಾರತೀಯರಿಗೆ ಹೆಮ್ಮೆ ಅನ್ನಿಸುವ ಸಾಧನೆ ಮೆರೆದಿದ್ದಾರೆ. ವಿಶ್ವ ರ್ಯಾಂಕಿಂಗ್‌ನಲ್ಲಿ ಈ ಅಪರೂಪದ ಸಾಧನೆ ಮೆರೆದ 3ನೇ ಭಾರತೀಯನಾಗಿ ರೋಹಿತ್ ಗುರುತಿಸಿಕೊಂಡಿದ್ದಾರೆ.

ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ 'ಹಿಟ್‌ಮ್ಯಾನ್' ರೋಹಿತ್ ಶರ್ಮಾ!ವಾಣಿಜ್ಯ ನಗರಿ ಹುಬ್ಬಳ್ಳಿಗೆ ಆಗಮಿಸಲಿದ್ದಾರೆ 'ಹಿಟ್‌ಮ್ಯಾನ್' ರೋಹಿತ್ ಶರ್ಮಾ!

ನೂತನ ಐಸಿಸಿ ರ್ಯಾಂಕಿಂಗ್‌ನಲ್ಲಿ ರೋಹಿತ್ ಶರ್ಮಾ ಟೆಸ್ಟ್, ಏಕದಿನ ಪಂದ್ಯ ಮತ್ತು ಟಿ20ಐನಲ್ಲಿ 10ರೊಳಗೆ ಸ್ಥಾನ ಪಡೆದುಕೊಂಡಿದ್ದಾರೆ. ಬಲು ಅಪರೂಪದ ಸಾಧನೆಯಿದು.

ಬಿಸಿಸಿಐ ಅಧ್ಯಕ್ಷರಾದ ಬಳಿಕ ವಿರಾಟ್ ಕೊಹ್ಲಿ ಬಗ್ಗೆ ಪ್ರತಿಕ್ರಿಯಿಸಿದ ಗಂಗೂಲಿ!ಬಿಸಿಸಿಐ ಅಧ್ಯಕ್ಷರಾದ ಬಳಿಕ ವಿರಾಟ್ ಕೊಹ್ಲಿ ಬಗ್ಗೆ ಪ್ರತಿಕ್ರಿಯಿಸಿದ ಗಂಗೂಲಿ!

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆರಂಭಿಕರಾಗಿ ಬ್ಯಾಟಿಂಗ್ ಮಾಡಿದ್ದ ಹಿಟ್‌ಮ್ಯಾನ್‌ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಗಮನಾರ್ಹ ಚೇತರಿಕೆ ಕಂಡಿದ್ದಾರೆ.

ಅದ್ಭುತ ಫಾರ್ಮ್

ಅದ್ಭುತ ಫಾರ್ಮ್

ರಾಂಚಿಯಲ್ಲಿ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ರೋಹಿತ್ ಒಟ್ಟು 529 ರನ್ ಕಲೆ ಹಾಕಿದ್ದರು. ತೃತೀಯ ಟೆಸ್ಟ್‌ನಲ್ಲಿ ದ್ವಿಶತಕ (212 ರನ್) ಸಿಡಿಸಿದ್ದರು. ಮೊದಲ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ್ದರು.

ಗಣನೀಯ ಜಿಗಿತ

ಗಣನೀಯ ಜಿಗಿತ

ರಾಂಚಿ ಟೆಸ್ಟ್ ಪ್ರದರ್ಶನ ರೋಹಿತ್ ಶರ್ಮಾ ಟೆಸ್ಟ್ ರ್ಯಾಂಕಿಂಗ್‌ನಲ್ಲಿ 44ನೇ ಸ್ಥಾನದಿಂದ ಗಣನೀಯ ಜಿಗಿತ ಕಾಣಲು ನೆರವಾಗಿದೆ. ಈಗ ರೋಹಿತ್ ಶರ್ಮಾ ಟೆಸ್ಟ್‌ ರ್ಯಾಂಕಿಂಗ್‌ನಲ್ಲಿ 10ರೊಳಗೆ ಸ್ಥಾನ ಪಡೆದುಕೊಂಡಿದ್ದಾರೆ.

ಎಲ್ಲಾ ಮಾದರಿಯಲ್ಲೂ ಟಾಪ್ ಟೆನ್

ಎಲ್ಲಾ ಮಾದರಿಯಲ್ಲೂ ಟಾಪ್ ಟೆನ್

ರೋಹಿತ್ ಶರ್ಮಾ ಈಗ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ 10ರೊಳಗೆ ಸ್ಥಾನ ಪಡೆದುಕೊಂಡಿದ್ದಾರೆ. ಟೆಸ್ಟ್‌ನಲ್ಲಿ 10ನೇ, ಏಕದಿನದಲ್ಲಿ 2ನೇ ಮತ್ತು ಟಿ20ಐನಲ್ಲಿ ಹಿಟ್‌ಮ್ಯಾನ್‌ 7ನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅಜಿಂಕ್ಯ ರಹಾನೆ ಟೆಸ್ಟ್‌ನಲ್ಲಿ 5ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.

3ನೇ ಭಾರತೀಯ

3ನೇ ಭಾರತೀಯ

ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ 10ರೊಳಗೆ ಸ್ಥಾನ ಪಡೆದ ಭಾರತದ 3ನೇ ಆಟಗಾರನಾಗಿ ಶರ್ಮಾ ಗುರುತಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಈ ಸಾಧನೆ ತೋರಿದ್ದರು. ಅಂದ್ಹಾಗೆ ಟೆಸ್ಟ್‌ ರ್ಯಾಂಕಿಂಗ್‌ನ ಅಗ್ರ ಸ್ಥಾನದಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ದ್ವಿತೀಯ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಇದ್ದಾರೆ. ಭಾರತ ನಂ.1 ಸ್ಥಾನದಲ್ಲಿದೆ.

Story first published: Wednesday, October 23, 2019, 20:50 [IST]
Other articles published on Oct 23, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X