ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2ನೇ ಟೆಸ್ಟ್‌ನಲ್ಲಿ ರೋಹಿತ್ ಸಿಡಿಸಿದ ಶತಕ ಭಾರತಕ್ಕೆ ಸರಣಿಯನ್ನು ನಿರ್ಧರಿಸಿತು: ವಿರಾಟ್ ಕೊಹ್ಲಿ

Rohit Sharma knock in second test defining moment of the series for India says Virat Kohli

ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಭರ್ಜರಿಯಾಗಿ ಗೆಲುವು ಸಾಧಿಸಿ ಸರಣಿಯನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಮೊದಲ ಪಂದ್ಯದಲ್ಲಿ 227 ರನ್‌ಗಳ ಅಂತರದಿಂದ ಭಾರತ ಸೋಲು ಕಂಡ ನಂತರ ಭಾರತ ಕಠಿಣ ಕ್ಷಣಗಳನ್ನು ಎದುರಿಸಿತ್ತು. ಆದರೆ ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಪರವಾಗಿ ರೋಹಿತ್ ಶರ್ಮಾ ನೀಡಿದ ಪ್ರದರ್ಶನ ನಿರ್ಣಾಯಕವಾಗಿತ್ತು ಎಂದು ಟೀಮ್ ಇಂಡಿಯಾ ನಾಯ ವಿರಾಟ್ ಕೊಹ್ಲಿ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯನ್ನು ಭರ್ಜರಿಯಾಗಿ ಗೆದ್ದು ತವರಿನಲ್ಲಿ ಇಂಗ್ಲೆಂಡ್ ತಂಡವನ್ನು ಎದುರಿಸಿದ್ದ ಭಾರತಕ್ಕೆ ಇಂಗ್ಲೆಂಡ್ ಮೊದಲ ಪಂದ್ಯದಲ್ಲಿ ದೊಡ್ಡ ಆಘಾತವನ್ನು ನೀಡಿತ್ತು. ದೊಡ್ಡ ಅಂತರದಿಂದ ಗೆಲುವು ಸಾಧಿಸಿ 1-0 ಅಂತರದ ಮುನ್ನಡೆಯನ್ನು ಪಡೆದುಕೊಂಡಿತ್ತು ಇಂಗ್ಲೆಂಡ್. ಆಗ ಭಾರತ ತಂಡ ಸರಣಿಗೆ ಮರಳಲು ಅವಕಾಶವನ್ನು ಮಾಡಿಕೊಟ್ಟಿದ್ದು ರೋಹಿತ್ ಶರ್ಮಾ ಎಂದು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಭಾರತ vs ಇಂಗ್ಲೆಂಡ್: ಪ್ರಶಸ್ತಿ ವಿಜೇತರ ಪಟ್ಟಿ, ಅಂಕಿ-ಅಂಶಗಳು!ಭಾರತ vs ಇಂಗ್ಲೆಂಡ್: ಪ್ರಶಸ್ತಿ ವಿಜೇತರ ಪಟ್ಟಿ, ಅಂಕಿ-ಅಂಶಗಳು!

2ನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಭರ್ಜರಿ ಶತಕ

2ನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಭರ್ಜರಿ ಶತಕ

ಚೆನ್ನೈನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಪರವಾಗಿ ರೋಹಿತ್ ಶರ್ಮಾ ಮೊದಲ ಇನ್ನಿಂಗ್ಸ್‌ನಲ್ಲಿ 161 ರನ್‌ಗಳ ಬೃಹತ್ ಕೊಡುಗೆಯನ್ನು ನೀಡಿದರು. ಈ ಮೂಲಕ ಭಾರತ 329 ರನ್‌ಗಳನ್ನು ಪೇರಿಸಲು ಶಕ್ತವಾಗಿತ್ತು. ಈ ಪ್ರದರ್ಶನ ಭಾರತದ ಗೆಲುವಿಗೆ ಕಾರಣವಾಗಿತ್ತು. ಅಹ್ಮದಾಬಾದ್‌ನಲ್ಲಿ ಸರಣಿ ಗೆದ್ದ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ "ರೋಹಿತ್ ಶರ್ಮಾ ನೀಡಿದ ಆ ಪ್ರದರ್ಶನ ಭಾರತದ ಪರವಾಗಿ ಸರಣಿ ನಿರ್ಣಯಿಸಲು ಕಾರಣವಾಯಿತು" ಎಂದಿದ್ದಾರೆ.

ಕಮ್‌ಬ್ಯಾಕ್‌ ಮಾಡಲು ಅತ್ಯಂತ ಮಹತ್ವವಾಗಿತ್ತು

ಕಮ್‌ಬ್ಯಾಕ್‌ ಮಾಡಲು ಅತ್ಯಂತ ಮಹತ್ವವಾಗಿತ್ತು

"ರೋಹಿತ್ ಶರ್ಮಾ ಅವರ ಪ್ರದರ್ಶನ ಈ ಸರಣಿಯಲ್ಲಿ ಭಾರತ ಕಮ್‌ಬ್ಯಾಕ್ ಮಾಡಲು ಅತ್ಯಂತ ಮಹತ್ವವನ್ನು ಪಡೆದುಕೊಂಡಿತ್ತು. ಅಂತಾ ಪಿಚ್‌ನಲ್ಲಿ 150 ರನ್(160) ಬಾರಿಸುವುದು ಅದು 250 ಗಳಿಸಿದ್ದಕ್ಕೆ ಸಮವಾಗಿದೆ" ಎಂದು ರೋಹಿತ್ ಶರ್ಮಾ ಬ್ಯಾಟಿಂಗ್ ಬಗ್ಗೆ ವಿರಾಟ್ ಕೊಹ್ಲಿ ಮೆಚ್ಚುಗೆಯನ್ನು ಸೂಚಿಸಿದರು. "ಸರಣಿಯ ಉದ್ದಕ್ಕೂ ಅವರು ಅದ್ಭುತ ಆಟಗಳನ್ನು ಪ್ರದರ್ಶಿಸುವ ಜೊತೆಗೆ ಅತ್ಯುತ್ತಮ ಜೊತೆಯಾಟಗಳನ್ನು ನೀಡಿದ್ದಾರೆ" ಎಂದು ಕೊಹ್ಲಿ ರೋಹಿತ್ ಶರ್ಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಯುವ ಆಟಗಾರರ ಬಗ್ಗೆಯೂ ಕೊಹ್ಲಿ ಮೆಚ್ಚುಗೆ

ಯುವ ಆಟಗಾರರ ಬಗ್ಗೆಯೂ ಕೊಹ್ಲಿ ಮೆಚ್ಚುಗೆ

ಇನ್ನು ಇದೇ ಸಂದರ್ಭದಲ್ಲಿ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನಿಡಿದ ಯುವ ಆಟಗಾರರ ಬಗ್ಗೆಯೂ ವಿರಾಟ್ ಕೊಹ್ಲಿ ಪ್ರಶಂಸೆಯ ಮಾತುಗಳನ್ನು ಆಡಿದ್ದಾರೆ. ಸಿಕ್ಕ ಅವಕಾಶಗಳನ್ನು ಅಕ್ಷರ್ ಪಟೇಲ್ ಹಾಗೂ ವಾಶಿಂಗ್ಟನ್ ಸುಂದರ್ ಎರಡೂ ಕೈಗಳಿಂದ ಬಾಚಿ ಕೊಂಡಿದ್ದಾರೆ ಎಂದಿದ್ದಾರೆ. "ನಿರ್ಭಯವಾಗಿ ಪ್ರದರ್ಶನವನ್ನು ನೀಡುವ ಯುವ ಆಟಗಾರರನ್ನು ಹೊಂದಬೇಕೆಂಬ ಆಲೋಚನೆಯಿತ್ತು, ಅಕ್ಷರ್ ಹಾಗೂ ವಾಶಿಂಗ್ಟನ್ ಸುಂದರ್ ಸಿದ್ಧರಾಗಿದ್ದರು. ರಿಷಭ್ ಹಾಗೂ ಸುಂದರ್ ಪಂದ್ಯದ ಗತಿಯನ್ನು ಬದಲಾಯಿಸುವ ಜೊತೆಯಾಟವನ್ನು ನೀಡಿದರು. ಅಕ್ಷರ್ ಪಟೇಲ್‌ ಕೂಡ ಅದೇ ರೀತಿಯ ಆಟವನ್ನು ಪ್ರದರ್ಶಿಸಿದರು" ಎಂದಿದ್ದಾರೆ ವಿರಾಟ್ ಕೊಹ್ಲಿ.

ಆರ್ ಅಶ್ವಿನ್ ಬಗ್ಗೆ ಕೊಹ್ಲಿ ಹೇಳಿಕೆ

ಆರ್ ಅಶ್ವಿನ್ ಬಗ್ಗೆ ಕೊಹ್ಲಿ ಹೇಳಿಕೆ

ಇನ್ನು ಇದೇ ಸಂದರ್ಭದಲ್ಲಿ ನಾಯಕ ವಿರಾಟ್ ಕೊಹ್ಲಿ ಅನುಭವಿ ಆಟಗಾರ ಆರ್ ಅಶ್ವಿನ್ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. "ಟೀಮ್ ಇಂಡಿಯಾ ಪರವಾಗಿ ಕಳೆದ ಆರೇಳು ವರ್ಷಗಳಿಂದ ಆರ್ ಅಶ್ವಿನ್ ಅತ್ಯಂತ ನಂಬಿಕಾರ್ಹವಾದ ಆಟಗಾರನಾಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು ನೀಡಿದ ಕೊಡುಗೆ ಅತ್ಯಂತ ಗಮನಾರ್ಹ" ಎಂದಿದ್ದಾರೆ ವಿರಾಟ್ ಕೊಹ್ಲಿ. ಇಂಗ್ಲೆಂಡ್ ವಿರುದ್ಧ ಆರ್ ಅಶ್ವಿನ್ ನೀಡಿದ ಪ್ರದರ್ಶನಕ್ಕೆ ಅವರು ಸರಣೀ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

Story first published: Sunday, March 7, 2021, 12:37 [IST]
Other articles published on Mar 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X