ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋ'ಹಿಟ್' ಪಾಲಿಗೆ ವೆರಿ ವೆರಿ ಸ್ಪೆಷಲ್ ಅನ್ನಿಸಲಿದೆ ಹ್ಯಾಮಿಲ್ಟನ್ ಏಕದಿನ ಪಂದ್ಯ!

Rohit Sharma looks to extend impressive captaincy record in landmark ODI

ಹ್ಯಾಮಿಲ್ಟನ್, ಜನವರಿ 30: ಒಂದೇ ಇನ್ನಿಂಗ್ಸ್‌ನಲ್ಲಿ ಏಕದಿನ ಅತ್ಯಧಿಕ ರನ್ ಬಾರಿಸಿದ ಹಿರಿಮೆ ಈಗಲೂ ರೋಹಿತ್ ಶರ್ಮಾ ಅವರ ಹೆಸರಿನಲ್ಲಿದೆ. ಏಕದಿನ ಹೆಚ್ಚು ದ್ವಿಶತಕಗಳ ದಾಖಲೆಯೂ ರೋಹಿತ್ ಅವರದ್ದೇ. ಗುರುವಾರ (ಜನವರಿ 31) ನಡೆಯುವ ಭಾರತ-ನ್ಯೂಜಿಲ್ಯಾಂಡ್ 4ನೇ ಏಕದಿನದಿನ ರೋಹಿತ್ ಪಾಲಿಗೆ ಅವಿಸ್ಮರಣೀಯವೆನಿಸಲಿದೆ.

ಭಾರತ vs ನ್ಯೂಜಿಲ್ಯಾಂಡ್: 4ನೇ ಏಕದಿನಕ್ಕೆ ಭಾರತ ಸಂಭಾವ್ಯ ತಂಡಭಾರತ vs ನ್ಯೂಜಿಲ್ಯಾಂಡ್: 4ನೇ ಏಕದಿನಕ್ಕೆ ಭಾರತ ಸಂಭಾವ್ಯ ತಂಡ

ಹ್ಯಾಮಿಲ್ಟನ್ ಏಕದಿನ ಪಂದ್ಯ ಹಿಟ್‌ಮ್ಯಾನ್ ರೋಹಿತ್ ಪಾಲಿಗೆ ಯಾಕೆ ತುಂಬಾ ಪ್ರಮುಖವಾದರು ಎನ್ನುವುದಕ್ಕೆ ಎರಡು ಬಲವಾದ ಕಾರಣಗಳು ಸಿಕ್ಕುತ್ತವೆ. 1. ಈ ಪಂದ್ಯದಲ್ಲಿ ರೋಹಿತ್, ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿದ್ದಾರೆ. 2. (ಬಹು ಮುಖ್ಯವಾದುದು) ಇದು ರೋಹಿತ್ ಪಾಲಿನ 200ನೇ ಅಂತಾರಾಷ್ಟ್ರೀಯ ಏಕದಿನ ಪಂದ್ಯ.

ಟಿ20 ವಿಶ್ವಕಪ್ 2020ರ ವೇಳಾಪಟ್ಟಿ ಪ್ರಕಟ: ಕಠಿಣ ಗ್ರೂಪ್‌ನಲ್ಲಿ ಕೊಹ್ಲಿ ಬಳಗ!ಟಿ20 ವಿಶ್ವಕಪ್ 2020ರ ವೇಳಾಪಟ್ಟಿ ಪ್ರಕಟ: ಕಠಿಣ ಗ್ರೂಪ್‌ನಲ್ಲಿ ಕೊಹ್ಲಿ ಬಳಗ!

ರೋಹಿತ್‌ಗೆ ಈ ಪಂದ್ಯ ಸ್ಪೆಷಲ್ ಅನ್ನುವುದಕ್ಕೆ ಇನ್ನೂ ಕಾರಣಗಳಿವೆ. ಭಾರತ ಒಂದುವೇಳೆ 4ನೇ ಪಂದ್ಯವನ್ನೂ ಗೆದ್ದರೆ ನ್ಯೂಜಿಲ್ಯಾಂಡ್ ವಿರುದ್ಧ ಭಾರತ 4-0ಯಿಂದ ಸರಣಿ ಜಯಿಸಿರುವ 52 ವರ್ಷಗಳ ಹಿಂದಿನ ದಾಖಲೆಯನ್ನು ಮರು ಸ್ಥಾಪಿಸಲಿದೆ. 1967ರಲ್ಲಿ ನ್ಯೂಜಿಲ್ಯಾಂಡ್ ಪ್ರವಾಸ ಕೈಗೊಂಡಿದ್ದ ಭಾರತ ಅಂದು 4-0ಯಿಂದ ಸರಣಿ ಗೆದ್ದುಕೊಂಡಿತ್ತು.

ಹಿಂದಿನ ಪಂದ್ಯಗಳಲ್ಲಿನ ಭಾರತದ ಪ್ರದರ್ಶನ ಗಮನಿಸಿದರೆ ಐದು ಪಂದ್ಯಗಳ ಏಕದಿನ ಸರಣಿಯನ್ನು ಭಾರತ 5-0ಯಿಂದ ಗೆದ್ದೇ ತೀರುವಂತೆ ಕಾಣುತ್ತಿದೆ. ಈ ಅಪರೂಪದ ಸಾಧನೆ ಸಾಧ್ಯತೆಯ ಹೊತ್ತಿನಲ್ಲಿ ಶರ್ಮಾ ತಂಡದ ನಾಯಕತ್ವ ವಹಿಸಿಕೊಂಡಿರುವುದರಿಂದ ಸಾಧನೆಯ ಗೌರವಕ್ಕೆ ರೋಹಿತ್‌ ಕೂಡ ಪಾಲುದಾರರಾಗಲಿದ್ದಾರೆ.

ಮಹಿಳಾ ಏಕದಿನ 2ನೇ ಪಂದ್ಯ: ಕಿವೀಸ್ ವಿರುದ್ಧ ಭಾರತ 8 ವಿಕೆಟ್ ಜಯಭೇರಿಮಹಿಳಾ ಏಕದಿನ 2ನೇ ಪಂದ್ಯ: ಕಿವೀಸ್ ವಿರುದ್ಧ ಭಾರತ 8 ವಿಕೆಟ್ ಜಯಭೇರಿ

ಈವರೆಗೆ 199 ಏಕದಿನ ಪಂದ್ಯಗಳಲ್ಲಿ ರೋಹಿತ್ ಒಟ್ಟು 7799 ರನ್ ಕಲೆ ಹಾಕಿದ್ದಾರೆ. 264 ಅತ್ಯಧಿಕ ವೈಯಕ್ತಿಕ ರನ್ ಮಾಡಿದ್ದಾರೆ. 22 ಸಾರಿ ಶತಕ, 3 ಬಾರಿ ದ್ವಿಶತಕ ಮತ್ತು 39 ಅರ್ಧಶತಕದ ದಾಖಲೆ ರೋಹಿತ್ ಅವರದ್ದು. ಐಸಿಸಿ ಏಕದಿನ ರ್ಯಾಂಕಿಂಗ್‌ನಲ್ಲಿ ಶರ್ಮಾ ದ್ವಿತೀಯ ಸ್ಥಾನಿಗ.

Story first published: Wednesday, January 30, 2019, 17:01 [IST]
Other articles published on Jan 30, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X