ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಹಿತ್ ಶರ್ಮಾ ಟಚ್ಚಲ್ಲಿಲ್ಲ, ಆ ಅನುಕೂಲ ಬಳಸಿಕೊಳ್ತೀವಿ: ಶಿಖರ್ ಧವನ್

Rohit Sharma may have lost touch, we will take advantage of that says Shikhar Dhawan

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಲೀಗ್‌ ಹಂತದ ಕೊನೇ ಕ್ಷಣದಲ್ಲಿ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಗಾಯಕ್ಕೀಡಾಗಿ ಒಂದಿಷ್ಟು ಪಂದ್ಯಗಳಿಂದ ಹೊರಗುಳಿದಿದ್ದರು. ಹೀಗಾಗಿ ಈಗ ಶರ್ಮಾ ಕೊಂಚ ಫಾರ್ಮ್ ಕಳೆದುಕೊಂಡಂತಿದೆ. ಶರ್ಮಾ ಅವರ ಈ ಮೈನಸ್ ಪಾಯಿಂಟ್ ಅನ್ನು ಬಳಸಿಕೊಳ್ಳುತ್ತೇವೆ ಎಂದು ಡೆಲ್ಲಿ ಕ್ಯಾಪಿಟಲ್ಸ್‌ನ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಹೇಳಿದ್ದಾರೆ.

ನಾನು ಗಾಯಗೊಂಡಿದ್ದಾಗ, ಹೇಗಿದ್ದೀಯಾ? ಎಂದು ಧೋನಿಯೇ ಸ್ವತಃ ಬಂದು ಕೇಳಿದ್ದರು!ನಾನು ಗಾಯಗೊಂಡಿದ್ದಾಗ, ಹೇಗಿದ್ದೀಯಾ? ಎಂದು ಧೋನಿಯೇ ಸ್ವತಃ ಬಂದು ಕೇಳಿದ್ದರು!

ಹ್ಯಾಮ್‌ಸ್ಟ್ರಿಂಗ್ ಇಂಜುರಿಗೆ ಒಳಗಾಗಿರುವ ರೋಹಿತ್ ಲೀಗ್‌ ಕೊನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿದಿದ್ದರು. ಆದರೆ ಕೇವಲ 4 ರನ್ ಬಾರಿಸಿ ನಿರ್ಗಮಿಸಿದ್ದರು. ರೋಹಿತ್‌ ವಿಶ್ರಾಂತಿ ಮಾಡುತ್ತಾರೆ ಎಂದು ಭಾವಿಸಲಾಗಿತ್ತಾದರೂ ಅಚಾನಕ್ ಕಾಣಿಸಿಕೊಂಡಿದ್ದ ರೋಹಿತ್ ಅಚ್ಚರಿ ಮೂಡಿಸಿದ್ದರು. ಈ ಬಗ್ಗೆ ಕ್ರಿಕೆಟ್ ವಲಯದಲ್ಲಿ ಚರ್ಚೆಯೂ ಕೇಳಿ ಬಂದಿತ್ತು.

ಗುರುವಾರ ನಡೆಯಲಿರುವ ಕ್ವಾಲಿಫೈಯರ್ 1 ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಗೆಲುವಿನತ್ತ ಚಿತ್ತ ನೆಟ್ಟಿರುವ ಡೆಲ್ಲಿ, ರೋಹಿತ್ ಶರ್ಮಾ ಫಾರ್ಮ್ ಇಲ್ಲದ್ದನ್ನು ಬಳಸಿಕೊಂಡು ಒಳ್ಳೆಯ ಪ್ರದರ್ಶನ ನೀಡುವ ಯೋಚನೆಯಲ್ಲಿದೆ.

ಐಪಿಎಲ್‌: ಝಹೀರ್ ಖಾನ್ ಹಿಂದಿಕ್ಕಿ ದಾಖಲೆ ಬರೆದ ಸಂದೀಪ್ ಶರ್ಮಾಐಪಿಎಲ್‌: ಝಹೀರ್ ಖಾನ್ ಹಿಂದಿಕ್ಕಿ ದಾಖಲೆ ಬರೆದ ಸಂದೀಪ್ ಶರ್ಮಾ

'ರೋಹಿತ್ ಒಬ್ಬ ಒಳ್ಳೆಯ ಆಟಗಾರ. ಆತ ಈ ಬಾರಿ ಸಾಕಷ್ಟು ಪಂದ್ಯಗಳನ್ನಾಡಿಲ್ಲವಾದ್ದರಿಂದ ಆತ ಟಚ್‌ನಲ್ಲಿದ್ದಾನೋ ಅನ್ನೋದು ನನಗೆ ಖಾತ್ರಿಯಿಲ್ಲ. ಹೀಗಾಗಿ ನಾವು ಖಂಡಿತಾ ಅದರ ಸದುಪಯೋಗ ಪಡೆದುಕೊಳ್ಳುತ್ತೇವೆ,' ಎಂದು ಧವನ್ ಮೊದಲ ಕ್ವಾಲಿಫೈರ್ ಪಂದ್ಯಕ್ಕೂ ಮುನ್ನ ಹೇಳಿದ್ದಾರೆ.

Story first published: Wednesday, November 4, 2020, 19:12 [IST]
Other articles published on Nov 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X