ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

22 ವರ್ಷ ಹಿಂದಿನ ಜಯಸೂರ್ಯ ದಾಖಲೆ ಮುರಿಯಲು ರೋಹಿತ್ ಶರ್ಮಾ 9 ರನ್ನಷ್ಟೇ ಹಿಂದೆ!

Rohit Sharma nine runs away from breaking Sanath Jayasuriya’s 22-year old record

ಎರಡು ಏಕದಿನ ಪಂದ್ಯಗಳ ಸರಣಿಯಲ್ಲಿ ಸಮಬಲ ಸಾಧಿಸಿರುವ ಟೀಮ್ ಇಂಡಿಯಾ ಮತ್ತು ವೆಸ್ಟ್‌ ಇಂಡೀಸ್ ತಂಡಗಳು ಇದೀಗ ಮತ್ತೊಂದು ಪಂದ್ಯಕ್ಕೆ ಸಿದ್ಧವಾಗಿದೆ. ಮೊದಲೆರಡು ಪಂದ್ಯಗಳನ್ನು ಎರಡೂ ತಂಡಗಳು ಕೂಡ ತಲಾ ಒಂದು ಪಂದ್ಯ ಗೆದ್ದು ಸರಣಿಯನ್ನು ಸಮಬಲ ಮಾಡಿಕೊಂಡಿದ್ದು ಮೂರನೇ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ.

ಆದರೆ ಮೂರನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತೊಂದು ದಾಖಲೆಗೆ ಸಜ್ಜಾಗಿ ನಿಂತಿದ್ದಾರೆ. ಇದು 22ವರ್ಷದ ಹಿಂದೆ ಶ್ರೀಲಂಕಾದ ಮಾಜಿ ನಾಯಕ ಸನತ್ ಜಯಸೂರ್ಯ ಮಾಡಿದ ದಾಖಲೆಯಾಗಿದ್ದು ಈ ದಾಖಲೆಯನ್ನು ರೋಹಿತ್ ಶರ್ಮಾ ಮುರಿಯುವ ಅವಕಾಶವನ್ನು ಹೊಂದಿದ್ದಾರೆ. ಕೇವಲ 9 ರನ್ ಗಳಿಸಿದರೆ ರೋಹಿತ್ ಈ ದಾಖಲೆಯನ್ನು ಹಿಂದಿಕ್ಕಲಿದ್ದಾರೆ.

ಐಪಿಎಲ್2020; ಕೊಲ್ಕತ್ತಾ ನಾಯಕನಾಗಿ ಮುಂದುವರಿಯುತ್ತಾರಾ ದಿನೇಶ್ ಕಾರ್ತಿಕ್? ಐಪಿಎಲ್2020; ಕೊಲ್ಕತ್ತಾ ನಾಯಕನಾಗಿ ಮುಂದುವರಿಯುತ್ತಾರಾ ದಿನೇಶ್ ಕಾರ್ತಿಕ್?

ಸನತ್ ಜಯಸೂರ್ಯ ಎಲ್ಲಾ ಫಾರ್ಮೆಟ್‌ಗಳಲ್ಲೂ ಕ್ಯಾಲೆಂಡರ್‌ವರ್ಷದಲ್ಲಿ ಅತಿಹೆಚ್ಚು ರನ್‌ಗಳಿಸಿದ ಆರಂಭಿಕ ಆಟಗಾರ ಆಗಿದ್ದಾರೆ. ಈ ದಾಖಲೆಯನ್ನು ಮುರಿಯುವ ಅಪೂರ್ವ ಅವಕಾಶ ರೋಹಿತ್ ಶರ್ಮಾ ಮುಂದಿದೆ. ಆದರೆ ರೋಹಿತ್ ಶರ್ಮಾ ಈ ವರ್ಷ ಆಡಲು ಉಳಿದಿರುವ ಪಂದ್ಯ ಇದೊಂದೇ ಆಗಿದೆ.

ಕ್ರಿಕೆಟ್ ಬೇಲ್ಸ್ ಹಿಡಿದು ಹರಾಜುಕೂಗಿದ ವ್ಯಕ್ತಿಯ ಹಿಂದಿನ ಕುತೂಹಲಕಾರಿ ಮಾಹಿತಿಕ್ರಿಕೆಟ್ ಬೇಲ್ಸ್ ಹಿಡಿದು ಹರಾಜುಕೂಗಿದ ವ್ಯಕ್ತಿಯ ಹಿಂದಿನ ಕುತೂಹಲಕಾರಿ ಮಾಹಿತಿ

ರೋಹಿತ್ ಶರ್ಮಾ ಈ ವರ್ಷ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಮೂರು ಪಾರ್ಮ್ಯಾಟ್‌ಗಳಲ್ಲಿ 2379 ರನ್ ದಾಖಲಿಸಿದ್ದಾರೆ. 1997ರಲ್ಲಿ ಸನತ್ ಜಯಸೂರ್ಯ 2387 ರನ್ ದಾಖಲಿಸಿದ್ದರು. ಈ ಮೊತ್ತ ಹಿಂದಿಕ್ಕಲು ಕೇವಲ 9 ರನ್ ಹಿಂದೆಯಿದ್ದಾರೆ. ವಿಶಾಖಪಟ್ಟಣಂ ನಡೆದ ಪಂದ್ಯದಲ್ಲಿ ರೋಹಿತ್ ಬರೊಬ್ಬರಿ 159 ರನ್ ಚಚ್ಚಿದ್ದರು.

Story first published: Friday, December 20, 2019, 19:41 [IST]
Other articles published on Dec 20, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X