ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವ ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ ಹಿಟ್‌ಮ್ಯಾನ್ ರೋಹಿತ್ ಶರ್ಮಾ!

IND vs WI 1st t20 : Rohit Sharma is just one 6 away from creating history | Oneindia Kannada
Rohit Sharma one hit away from becoming first Indian to reach 400 sixes

ಹೈದರಾಬಾದ್, ಡಿಸೆಂಬರ್ 5: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400 ಸಿಕ್ಸರ್ ಬಾರಿಸಿದ ಚೊಚ್ಚಲ ಭಾರತೀಯ ದಾಖಲೆ ಬರೆಯಲು ರೋಹಿತ್ ಶರ್ಮಾಗೆ ಕೇವಲ 1 ಸಿಕ್ಸರ್ ಬೇಕಿದೆ. ಭಾರತ vs ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20ಐ ಪಂದ್ಯದಲ್ಲಿ ಶರ್ಮಾ ಈ ದಾಖಲೆ ಪೂರೈಸಿಕೊಳ್ಳಲು ಸಜ್ಜಾಗಿದ್ದಾರೆ.

ರಣಜಿ ಟ್ರೋಫಿ 2019-20: 15 ಆಟಗಾರರ ಕರ್ನಾಟಕ ತಂಡ ಪ್ರಕಟರಣಜಿ ಟ್ರೋಫಿ 2019-20: 15 ಆಟಗಾರರ ಕರ್ನಾಟಕ ತಂಡ ಪ್ರಕಟ

ರೋಹಿತ್, ಇನ್ನೊಂದು ಸಿಕ್ಸ್ ಬಾರಿಸಿದರೆ, 400 ಸಿಕ್ಸರ್ ಬಾರಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಳ್ಳುವುದಷ್ಟೇ ಅಲ್ಲ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400+ ಸಿಕ್ಸರ್ ದಾಖಲೆ ಮಾಡಿದ ವಿಶ್ವದ 3ನೇ ಆಟಗಾರನಾಗಿಯೂ ಗಮನ ಸೆಳೆಯಲಿದ್ದಾರೆ.

ಐಪಿಎಲ್‌ನಲ್ಲಿ ಬ್ಯಾಟ್‌ ಬೀಸಲಿದ್ದಾರೆ ಜಮೈಕಾ ಸ್ಪ್ರಿಂಟರ್‌ ಯೋಹಾನ್ ಬ್ಲೇಕ್!?ಐಪಿಎಲ್‌ನಲ್ಲಿ ಬ್ಯಾಟ್‌ ಬೀಸಲಿದ್ದಾರೆ ಜಮೈಕಾ ಸ್ಪ್ರಿಂಟರ್‌ ಯೋಹಾನ್ ಬ್ಲೇಕ್!?

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 400+ ಸಿಕ್ಸರ್ ಬಾರಿಸಿದ ಮೊದಲಿಬ್ಬರು ಆಟಗಾರರೆಂದರೆ ಪಾಕಿಸ್ತಾನ ಶಾಹೀದ್ ಅಫ್ರಿದಿ ಮತ್ತು ವೆಸ್ಟ್ ಇಂಡೀಸ್‌ನ ಕ್ರಿಸ್ ಗೇಲ್. ಅಫ್ರಿದಿ 476 ಸಿಕ್ಸರ್, ಗೇಲ್ 534 ಸಿಕ್ಸರ್‌ಗಳ ದಾಖಲೆ ಹೊಂದಿದ್ದಾರೆ. ರೋಹಿತ್ ಸದ್ಯ ಟೆಸ್ಟ್‌ನಲ್ಲಿ 52, ಏಕದಿನದಲ್ಲಿ 232 ಮತ್ತು ಟಿ20ಐನಲ್ಲಿ 115ರಂತೆ ಒಟ್ಟಿಗೆ 399 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ.

 '735 ನಾಟೌಟ್' : ವಾರ್ನರ್ ಭೇಟಿ ಬಳಿಕ ಲಾರಾ ಹೀಗಂದಿದ್ದೇಕೆ? '735 ನಾಟೌಟ್' : ವಾರ್ನರ್ ಭೇಟಿ ಬಳಿಕ ಲಾರಾ ಹೀಗಂದಿದ್ದೇಕೆ?

ಕಳೆದ ಅಕ್ಟೋಬರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆರಂಭಿಕರಾಗಿ ಚೊಚ್ಚಲ ಟೆಸ್ಟ್ ಸರಣಿ ಆಡಿದ್ದ ರೋಹಿತ್, ಟೆಸ್ಟ್ ಸರಣಿಯೊಂದರಲ್ಲಿ ನಿರ್ಮಾಣವಾಗಿದ್ದ ಅತ್ಯಧಿಕ ಸಿಕ್ಸರ್‌ಗಳ ದಾಖಲೆಯನ್ನು ಮುರಿದಿದ್ದರು. ಶರ್ಮಾ ಆ ಸರಣಿಯಲ್ಲಿ ಒಟ್ಟು 19 ಸಿಕ್ಸರ್ ಬಾರಿಸಿದ್ದರು. ದ್ವಿಶತಕವೂ ಸೇರಿ ಸರಣಿಯಲ್ಲಿ 529 ರನ್ ಕಲೆ ಹಾಕಿದ್ದರು.

ICC Test ranking: ಸ್ಟೀವ್ ಸ್ಮಿತ್ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ಕಿಂಗ್ ಕೊಹ್ಲಿ!ICC Test ranking: ಸ್ಟೀವ್ ಸ್ಮಿತ್ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ಕಿಂಗ್ ಕೊಹ್ಲಿ!

ಭಾರತಕ್ಕೆ ಪ್ರವಾಸ ಕೈಗೊಳ್ಳುತ್ತಿರುವ ವೆಸ್ಟ್ ಇಂಡೀಸ್ ತಂಡ, 3 ಟಿ20ಐ, 3 ಏಕದಿನ ಪಂದ್ಯಗಳನ್ನಾಡಲಿದೆ. 3 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಹೈದರಾಬಾದ್‌ನ ರಾಜೀವ್‌ ಗಾಂಧಿ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಡಿಸೆಂಬರ್ 6ರಂದು 7 pmಗೆ ಆರಂಭವಾಗಲಿದೆ.

Story first published: Thursday, December 5, 2019, 9:59 [IST]
Other articles published on Dec 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X