ವಾರ್ನರ್ or ರೋಹಿತ್: ತನ್ನ ನೆಚ್ಚಿನ ಓಪನಿಂಗ್ ಪಾರ್ಟ್ನರ್ ಹೆಸರಿಸಿದ ರಾಯ್

ಬೆಂಗಳೂರು: ಈಗ ವಿಶ್ವ ಕ್ರಿಕೆಟ್‌ನಲ್ಲಿ ಬೆಸ್ಟ್ ಓಪನಿಂಗ್ ಬ್ಯಾಟ್ಸ್‌ಮನ್‌ ಯಾರು ಅಂತ ನಿಮ್ಮಲ್ಲಿ ಯಾರಾದರೂ ಪ್ರಶ್ನಿಸಿದರೆ ತಂತಾನೆ ನಿಮಗೆ ಟೀಮ್ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ ನೆನಪಾಗುತ್ತಾರೆ. ಏಕದಿನದಲ್ಲಿ ದ್ವಿಶತಕ, ಟೆಸ್ಟ್‌ನಲ್ಲಿ ಆರಂಭಿಕನಾಗಿ ಆಡಿದ ಮೊದಲ ಪಂದ್ಯದಲ್ಲೇ ಶತಕ, ಅಂತಾರಾಷ್ಟ್ರೀಯ ಟಿ20ಯಲ್ಲೂ 4 ಶತಕಗಳ ದಾಖಲೆ ಹಿಟ್‌ಮ್ಯಾನ್ ರೋಹಿತ್ ಹೆಸರಿನಲ್ಲಿದೆ. ಒಬ್ಬ ಬೆಸ್ಟ್ ಓಪನಿಂಗ್ ಬ್ಯಾಟ್ಸ್‌ಮನ್‌ ಮಾಡಬಹುದಾದ ಎಲ್ಲಾ ಸಾಧನೆಗಳನ್ನು ರೋಹಿತ್ ಮಾಡಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ವಿಶಿಷ್ಠ ದಾಖಲೆ

2019ರ ವಿಶ್ವಕಪ್‌ನಲ್ಲಿ ಹೆಚ್ಚು ಶತಕಗಳನ್ನು ಬಾರಿಸಿದ್ದ (5 ಶತಕಗಳು) ರೋಹಿತ್ ಶರ್ಮಾ, ಏಕದಿನ ವಿಶ್ವಕಪ್ ಒಂದೇ ಆವೃತ್ತಿಯಲ್ಲಿ ಹೆಚ್ಚು ಶತಕಗಳ ಬಾರಿಸಿದ ವಿಶ್ವದಾಖಲೆ ನಿರ್ಮಿಸಿದ್ದರು. ಅಲ್ಲದೆ 2019ರ ಸೀಸನ್‌ನಲ್ಲಿ 1490 ರನ್ ಮೂಲಕ ವರ್ಷದ ಮುಂಚೂಣಿ ರನ್ ಸರದಾರನಾಗಿ ಮಿಂಚಿದ್ದರು.

ಮುಲ್ತಾನ್‌ ಟೆಸ್ಟ್‌ನಲ್ಲಿ ಸಚಿನ್ 194 ರನ್ ಗಳಿಸಿದ್ದಾಗ ದ್ರಾವಿಡ್ ಡಿಕ್ಲೇರ್ ಕೊಟ್ಟಿದ್ದೇಕೆ ಗೊತ್ತಾ!?

ಹಾಗಾದರೆ 'ನಿಮ್ಮ ಬೆಸ್ಟ್ ಓಪನಿಂಗ್ ಪಾರ್ಟ್ನರ್ ಆಗಿ ಯಾರನ್ನು ಆರಿಸಲು ಬಯಸುತ್ತೀರಿ?' ಎಂದು ಇಂಗ್ಲೆಂಡ್ ತಂಡದ ಲಿಮಿಟೆಡ್ ಓವರ್‌ ಕ್ರಿಕೆಟ್ ಆರಂಭಿಕ ಬ್ಯಾಟ್ಸ್‌ಮನ್ ಜೇಸನ್ ರಾಯ್ ಅವರಲ್ಲಿ ಪ್ರಶ್ನಿಸಿದಾಗ ಅವರು ಏನೆಂದು ಉತ್ತರಿಸಿರಬಹುದು?

ಆಸ್ಟ್ರೇಲಿಯಾದ ಡೇವಿಡ್ ವಾರ್ನರ್

ಆಸ್ಟ್ರೇಲಿಯಾದ ಡೇವಿಡ್ ವಾರ್ನರ್

ರೋಹಿತ್ ಶರ್ಮಾ ಬಿಟ್ಟರೆ, ಈ ಆಧುನಿಕ ದಿನಗಳ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಕೂಡ ನಿರ್ಭೀತಿಯ ಆರಂಭಿಕ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಗುರುತಿಸಿಕೊಳ್ಳುತ್ತಾರೆ. 123 ಏಕದಿನ ಪಂದ್ಯಗಳಲ್ಲಿ 45ರ ಸರಾಸರಿಯಲ್ಲಿ 5267 ರನ್ ಗಳಿಸಿರುವ ವಾರ್ನರ್ ವಿಶ್ವದ ಅಪಾಯಕಾರಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು.

ರೇಸ್‌ನಲ್ಲಿ ಆ್ಯರನ್ ಫಿಂಚ್

ರೇಸ್‌ನಲ್ಲಿ ಆ್ಯರನ್ ಫಿಂಚ್

ಉತ್ತಮ ಆರಂಭಿಕ ಬ್ಯಾಟ್ಸ್‌ಮನ್‌ಗಳಲ್ಲಿ 10ರೊಳಗೆ ಆಸ್ಟ್ರೇಲಿಯಾದ ಮತ್ತೊಬ್ಬ ಓಪನಿಂಗ್ ಬ್ಯಾಟ್ಸ್‌ಮನ್ ಆ್ಯರನ್ ಫಿಂಚ್ ಬರುತ್ತಾರೆ. ಡೇವಿಡ್ ವಾರ್ನರ್ ಮತ್ತು ಆ್ಯರನ್ ಫಿಂಚ್ ಜೋಡಿ ವಿಶ್ವದಲ್ಲಿ ನಾಲ್ಕನೇ ಯಶಸ್ವಿ ಆರಂಭಿಕ ಜೋಡಿಯಾಗಿ ಗುರುತಿಸಿಕೊಂಡಿದೆ. ವಾರ್ನರ್-ಫಿಂಚ್ 65 ಏಕದಿನ ಪಂದ್ಯಗಳಲ್ಲಿ 51.51ರ ಸರಾಸರಿಯಲ್ಲಿ 3297 ರನ್ ಗಳಿಸಿದ್ದಾರೆ. ಇಬ್ಬರೂ ಸೇರಿ 10 ಏಕದಿನ ಶತಕ, 14 ಅರ್ಧ ಶತಕಗಳ ದಾಖಲೆ ಹೊಂದಿದ್ದಾರೆ.

ಜೇಸನ್ ರಾಯ್ ಮೆಚ್ಚಿನ ಆಯ್ಕೆ

ಜೇಸನ್ ರಾಯ್ ಮೆಚ್ಚಿನ ಆಯ್ಕೆ

ಕಳೆದ ವರ್ಷ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಪರ ಸ್ಫೋಟಕ ಬ್ಯಾಟಿಂಗ್ ನಡೆದಿದ್ದ ಇಂಗ್ಲೆಂಡ್ ಓಪನರ್ ಜೇಸನ್ ರಾಯ್ ಅವರಲ್ಲಿ ಕ್ರಿಕ್‌ಟ್ರ್ಯಾಕರ್ ಸಂದರ್ಶನದಲ್ಲಿ, 'ರೋಹಿತ್ ಅಥವಾ ವಾರ್ನರ್ ಇವರಲ್ಲಿ ನಿಮ್ಮ ಕನಸಿನ ಆರಂಭಿಕ ಜೊತೆಗಾರ ಯಾರಾಗಲು ಬಯಸುತ್ತೀರಿ ಎಂದು ಪ್ರಶ್ನಿಸಲಾಯ್ತು. ಇದಕ್ಕೆ ಉತ್ತರಿಸಿದ ರಾಯ್, 'ರೋಹಿತ್ ಶರ್ಮಾ,' ಎಂದು ಪ್ರತಿಕ್ರಿಯಿಸಿದ್ದಾರೆ.

ಭಾರತದ ವಿರುದ್ಧ ಘರ್ಜಿಸಿದ್ದ ರಾಯ್

ಭಾರತದ ವಿರುದ್ಧ ಘರ್ಜಿಸಿದ್ದ ರಾಯ್

ಕಳೆದ ವರ್ಷ ಏಕದಿನ ವಿಶ್ವಕಪ್‌ನಲ್ಲಿ ರಾಯ್ 7 ಇನ್ನಿಂಗ್ಸ್‌ಗಳಲ್ಲಿ 63.28ರ ಸರಾಸರಿಯಲ್ಲಿ 443 ರನ್ ಗಳಿಸಿದ್ದರು. ಇದರಲ್ಲಿ 1 ಶತಕ, 4 ಅರ್ಧ ಶತಕಗಳು ಸೇರಿದ್ದವು. ಗಾಯದ ಕಾರಣ ಟೂರ್ನಿ ಮಧ್ಯದಲ್ಲಿ 3 ಪಂದ್ಯಗಳನ್ನು ರಾಯ್ ಮಿಸ್ ಮಾಡಿಕೊಂಡಿದ್ದ ರಾಯ್, ಮತ್ತೆ ವಾಪಸ್ಸಾಗಿ ಘರ್ಜಿಸಿದ್ದರು. ಭಾರತದ ವಿರುದ್ಧ 66, ನ್ಯೂಜಿಲೆಂಡ್ ವಿರುದ್ಧ 60 ಮತ್ತು ಆಸ್ಟ್ರೇಲಿಯಾ ವಿರುದ್ಧ ದ್ವಿತೀಯ ಸೆಮಿಫೈನಲ್‌ನಲ್ಲಿ 85 ರನ್ ಬಾರಿಸಿದ್ದರು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Saturday, July 11, 2020, 15:31 [IST]
Other articles published on Jul 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X