ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗುಡ್‌ನ್ಯೂಸ್: ಫಿಟ್ನೆಸ್ ಟೆಸ್ಟ್ ಪಾಸ್ ಮಾಡಿದ ರೋಹಿತ್ ಶರ್ಮಾ, ಮುಂದಿನ ಸರಣಿಗೆ ಆಯ್ಕೆ ಗ್ಯಾರೆಂಟಿ

Rohit sharma

ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಹಾಗೂ ಏಕದಿನ ಸರಣಿ ಸೋತ ಟೀಂ ಇಂಡಿಯಾ ತನ್ನ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು. ಗೆಲ್ಲುವ ಚಿನ್ನದಂತಹ ಅವಕಾಶವಿದ್ದರೂ ಭಾರತ ಸುಲಭವಾಗಿ ಕೈ ಚೆಲ್ಲಿತು. ಆದ್ರೆ ಸೋಲಿನ ಬೇಸರದಲ್ಲಿರುವ ಟೀಂ ಇಂಡಿಯಾ ಅಭಿಮಾನಿಗಳಿಗೆ ಸಂತಸದ ಸುದ್ದಿ ಇಲ್ಲಿದೆ. ಟೀಂ ಇಂಡಿಯಾದ ಹಿಟ್‌ಮ್ಯಾನ್ ಕ್ಯಾಪ್ಟನ್ ರೋಹಿತ್ ಶರ್ಮಾ ಗಾಯದಿಂದ ಚೇತರಿಸಿಕೊಂಡಿದ್ದು, ಫಿಟ್ನೆಸ್ ಟೆಸ್ಟ್ ಕೂಡ ಪಾಸ್ ಆಗಿದ್ದಾರೆ.

ಬೆಂಗಳೂರಿನ ಎನ್‌ಸಿಎ ಅಕಾಡೆಮಿಯಲ್ಲಿ ಗಾಯದಿಂದ ಚೇತರಿಸಿಕೊಂಡಿರುವ ನಾಯಕ ರೋಹಿತ್ ಶರ್ಮಾ ಇಂದು ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ. ಇದರೊಂದಿಗೆ ತವರಿನಲ್ಲಿ ನಡೆಯಲಿರುವ ವಿಂಡೀಸ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗೆ ಹಿಟ್ ಮ್ಯಾನ್ ಲಭ್ಯವಾಗಲಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ರೋಹಿತ್ ಶರ್ಮಾ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಸಂಪೂರ್ಣ ಹೊರಗುಳಿದಿದ್ದರು.

ರೋಹಿತ್ ಶರ್ಮಾ ಗಾಯದಿಂದ ಚೇತರಿಕೆ

ರೋಹಿತ್ ಶರ್ಮಾ ಗಾಯದಿಂದ ಚೇತರಿಕೆ

ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತಯಾರಿ ನಡೆಸುತ್ತಿದ್ದ ವೇಳೆ ರೋಹಿತ್ ಶರ್ಮಾ ಗಾಯಗೊಂಡಿದ್ದರು. ಹ್ಯಾಮ್‌ಸ್ಟ್ರಿಂಗ್ ಸಮಸ್ಯೆಯಿಂದ ಬಳಲುತ್ತಿದ್ದ ರೋಹಿತ್ ಆರಂಭದಲ್ಲಿ ಟೆಸ್ಟ್ ಸರಣಿಯಿಂದ ಹೊರಬಿದ್ದರು. ಏಕದಿನ ಸರಣಿಗೆ ಚೇತರಿಸಿಕೊಳ್ಳಬಹುದೆಂಬ ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದ್ರೆ ಹಿಟ್‌ಮ್ಯಾನ್ ಗಾಯದ ಚೇತರಿಕೆ ವಿಳಂಭವಾದ ಪರಿಣಾಮ ರೋಹಿತ್ ಏಕದಿನ ಸರಣಿಯಲ್ಲೂ ಆಡಲಿಲ್ಲ. ಆದ್ರೆ ರೋಹಿತ್ ಇದೀಗ ಹ್ಯಾಮ್‌ಸ್ಟ್ರಿಂಗ್‌ನಿಂದ ಗುಣಮುಖರಾಗಿದ್ದಾರೆ. ಹೀಗಾಗಿ ಮುಂಬರುವ ವೆಸ್ಟ್ ಇಂಡೀಸ್ ಸರಣಿಗೆ ಅಲಭ್ಯರಾಗಿದ್ದಾರೆ.

ತೂಕ ಇಳಿಸಿಕೊಂಡಿರುವ ಹಿಟ್‌ಮ್ಯಾನ್

ತೂಕ ಇಳಿಸಿಕೊಂಡಿರುವ ಹಿಟ್‌ಮ್ಯಾನ್

ಎನ್‌ಸಿಎ ಪುನಶ್ಚೇತನ ಶಿಬಿರದಲ್ಲಿ ಸಾಕಷ್ಟು ದಿನಗಳನ್ನ ಕಳೆದ ರೋಹಿತ್ ಶರ್ಮಾಗೆ ಚಿಕಿತ್ಸೆ ನೀಡಿದ ಪರಿಣಿತರು ತೂಕ ಇಳಿಸಿಕೊಳ್ಳುವಂತೆ ಸಲಹೆ ನೀಡಿದ್ದರು. ಅದ್ರಂತೆಯೇ ರೋಹಿತ್ ಫಿಟ್ನೆಸ್ ಮೇಲೆ ಗಮನ ಕೇಂದ್ರೀಕರಿಸಿದ್ದರು. ಫಿಟ್‌ನೆಸ್‌ಗಾಗಿ ಅವರು ಪ್ರತಿದಿನ ಗಂಟೆಗಟ್ಟಲೆ ಬೆವರು ಸುರಿಸಿದ್ದಾರೆ. ಹೀಗಾಗಿ ರೋಹಿತ್ ಸಂಪೂರ್ಣ ಫಿಟ್ನೆಸ್ ಸಾಧಿಸಲು ತೂಕ ಇಳಿಸಲು ಸಾಧ್ಯವಾಗಿದೆ. ಈ ಪ್ರಕ್ರಿಯೆಯಲ್ಲಿ ಅವರು 6 ಕೆ.ಜಿ ಅಥವಾ ಅದಕ್ಕಿಂತ ಹೆಚ್ಚಿನ ತೂಕ ನಷ್ಟ ಕಂಡಿದ್ದಾರೆ. ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ತೂಕ ಇಳಿಸಿಕೊಂಡ ಫೋಟೋಗಳು ವೈರಲ್ ಆಗಿವೆ. ಆ ಫೋಟೋಗಳಲ್ಲಿ ಹಿಟ್‌ಮ್ಯಾನ್ ಸ್ಲಿಮ್ ನ್ಯೂ ಲುಕ್‌ನಿಂದ ಕಾಣಿಸಿಕೊಂಡಿದ್ದಾರೆ.

ಫಿಟ್ನೆಸ್ ಪರೀಕ್ಷೆಯ ಪ್ರಮಾಣಪತ್ರ ನೀಡಲಾಗಿದೆ

ಫಿಟ್ನೆಸ್ ಪರೀಕ್ಷೆಯ ಪ್ರಮಾಣಪತ್ರ ನೀಡಲಾಗಿದೆ

ಬೆಂಗಳೂರಿನ ಎನ್‌ಸಿಎ ಅಕಾಡೆಮಿಯಲ್ಲಿ ಇಂದು ರೋಹಿತ್ ಶರ್ಮಾ ಫಿಟ್ನೆಸ್ ಪರೀಕ್ಷೆಗೆ ಒಳಗಾದರು. ಈ ಟೆಸ್ಟ್ ಗಳಲ್ಲಿ ಮಿಂಚಿದ ರೋಹಿತ್ ಫಿಟ್ನೆಸ್‌ ಸಾಬೀತು ಪಡಿಸಿದರು. ನಿಗದಿತ ಸಮಯದಲ್ಲಿ ನೀಡಿದ್ದ ಫಿಟ್ನೆಸ್ ಪರೀಕ್ಷೆಗಳನ್ನ ರೋಹಿತ್‌ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಹೀಗಾಗಿ ಅಧಿಕಾರಿಗಳು ರೋಹಿತ್ ಶರ್ಮಾಗೆ ಫಿಟ್ನೆಸ್ ಕ್ಲಿಯರೆನ್ಸ್ ಪ್ರಮಾಣಪತ್ರವನ್ನೂ ನೀಡಿದ್ದಾರೆ. ಸಂಪೂರ್ಣವಾಗಿ ಚೇತರಿಸಿಕೊಂಡಿರುವುದರಿಂದ ಹಿಟ್‌ಮ್ಯಾನ್ ತವರಿನಲ್ಲಿ ನಡೆಯಲಿರುವ ಏಕದಿನ ಮತ್ತು ಟಿ20 ಸರಣಿಗೆ ಲಭ್ಯವಾಗಲಿದ್ದಾರೆ.

ಕ್ರಿಸ್‌ಗೇಲ್‌, ಜಾಂಟಿರೋಡ್ಸ್‌ಗೆ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

Virat Kohli ಈಗಲೂ ಎಷ್ಟು ವರ್ಷ ಕ್ರಿಕೆಟ್ ಆಡಬಹುದು | Oneindia Kannada
ಭಾರತ ವರ್ಸಸ್ ವೆಸ್ಟ್ ಇಂಡೀಸ್ ಏಕದಿನ, ಟಿ20 ವೇಳಾಪಟ್ಟಿ

ಭಾರತ ವರ್ಸಸ್ ವೆಸ್ಟ್ ಇಂಡೀಸ್ ಏಕದಿನ, ಟಿ20 ವೇಳಾಪಟ್ಟಿ

ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಫೆಬ್ರವರಿ 6ರಿಂದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಲಿವೆ.

ಭಾರತ-ವೆಸ್ಟ್ ಇಂಡೀಸ್ ಏಕದಿನ ಸರಣಿಯ ವೇಳಾಪಟ್ಟಿ:
1ನೇ ODI, ಫೆಬ್ರವರಿ 6, ಭಾನುವಾರ, ಅಹಮದಾಬಾದ್ (1PM)
2ನೇ ODI, ಫೆಬ್ರವರಿ 9, ಬುಧವಾರ, ಅಹಮದಾಬಾದ್ (1PM)
3ನೇ ODI, ಫೆಬ್ರವರಿ 11, ಶುಕ್ರವಾರ, ಅಹಮದಾಬಾದ್ (1PM)

ಟಿ20 ಸರಣಿಯ ವೇಳಾಪಟ್ಟಿ:
1 ನೇ T20, ಫೆಬ್ರವರಿ 16 , ಬುಧವಾರ, ಕೋಲ್ಕತ್ತಾ (7PM)
2 ನೇ T20, ಫೆಬ್ರವರಿ 18 , ಶುಕ್ರವಾರ, ಕೋಲ್ಕತ್ತಾ (7PM)
3ನೇ T20, ಫೆಬ್ರವರಿ 20 , ಭಾನುವಾರ, ಕೋಲ್ಕತ್ತಾ (7PM)

Story first published: Wednesday, January 26, 2022, 19:43 [IST]
Other articles published on Jan 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X