ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಆತನೊಂದು ಅದ್ಭುತ': ತನ್ನ ನೆಚ್ಚಿನ ಕೋಚ್ ಹೆಸರಿಸಿದ ರೋಹಿತ್ ಶರ್ಮಾ

Rohit Sharma picks best coach he has played under

ಮುಂಬೈ, ಏಪ್ರಿಲ್ 4: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಅತೀ ಹೆಚ್ಚು ಬಾರಿ ಟ್ರೋಫಿ ಗೆದ್ದ ಹೆಗ್ಗಳಿಕೆಗೆ ಮುಂಬೈ ಇಂಡಿಯನ್ಸ್ (ಎಂಐ) ತಂಡದ್ದು. ರೋಹಿತ್ ಶರ್ಮಾ, ರಿಕಿ ಪಾಂಟಿಂಗ್, ಸಚಿನ್ ತೆಂಡೂಲ್ಕರ್, ಕೀರನ್ ಪೊಲಾರ್ಡ್, ಮಿಚೆಲ್ ಜಾನ್ಸನ್, ಲಸಿತ್ ಮಾಲಿಂಗ, ಜಸ್‌ಪ್ರೀತ್‌ ಬೂಮ್ರಾ ಇಂಥ ಬಹಳಷ್ಟು ಬಲಿಷ್ಠ ಆಟಗಾರರಿಂದ ಮುಂಬೈ ಒಟ್ಟಿಗೆ 4 ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಅಂಕರಿಸಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಸುದೀರ್ಘ ಇನ್ನಿಂಗ್ಸ್‌ ದಾಖಲೆಯಿರುವ 5 ಬ್ಯಾಟ್ಸ್‌ಮನ್‌ಗಳುಟೆಸ್ಟ್ ಕ್ರಿಕೆಟ್‌ನಲ್ಲಿ ಸುದೀರ್ಘ ಇನ್ನಿಂಗ್ಸ್‌ ದಾಖಲೆಯಿರುವ 5 ಬ್ಯಾಟ್ಸ್‌ಮನ್‌ಗಳು

ಸದ್ಯ ಮುಂಬೈ ಇಂಡಿಯನ್ಸ್ ನಾಯಕತ್ವ ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಹೆಗಲ ಮೇಲಿದೆ. ಇಂಗ್ಲೆಂಡ್ ಮಾಜಿ ಆಟಗಾರ ಕೆವಿನ್ ಪೀಟರ್ಸನ್ ಜೊತೆ ಸಂದರ್ಶನದಲ್ಲಿ ಮಾತನಾಡಿರುವ ರೋಹಿತ್ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಟೀಮ್ ಇಂಡಿಯಾ ಮತ್ತು ಆರ್‌ಸಿಬಿಯಲ್ಲಿ ಕೊಹ್ಲಿಯ ಬೆಸ್ಟ್ ಬ್ಯಾಟಿಂಗ್ ಪಾರ್ಟ್‌ನರ್ಸ್ ಇವರು!ಟೀಮ್ ಇಂಡಿಯಾ ಮತ್ತು ಆರ್‌ಸಿಬಿಯಲ್ಲಿ ಕೊಹ್ಲಿಯ ಬೆಸ್ಟ್ ಬ್ಯಾಟಿಂಗ್ ಪಾರ್ಟ್‌ನರ್ಸ್ ಇವರು!

ಪೀಟರ್ಸನ್ ಜೊತೆ ಇನ್‌ಸ್ಟಾಗ್ರಾಮ್‌ ಲೈವ್‌ನಲ್ಲಿ ಮಾತನಾಡಿರುವ ರೋಹಿತ್ ಶರ್ಮಾ ತನ್ನ ನೆಚ್ಚಿನ ಕೋಚ್‌ ಹೆಸರನ್ನೂ ಹೇಳಿಕೊಂಡಿದ್ದಾರೆ.

ಮುಂಬೈ ಇಂಡಿಯನ್ಸ್ ನಾಯಕತ್ವ

ಮುಂಬೈ ಇಂಡಿಯನ್ಸ್ ನಾಯಕತ್ವ

ಮುಂಬೈ ಇಂಡಿಯನ್ಸ್ ನಾಯಕತ್ವ ರೋಹಿತ್ ಕೈಗೆ ಬರುವುದಕ್ಕೂ ಮುನ್ನ ಎಂಐ ಕ್ಯಾಪ್ಟನ್ಸಿ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಕೈಯಲ್ಲಿತ್ತು. 2013ರ ಸೀಸನ್‌ನ ಅರ್ಧದಲ್ಲಿ ಎಂಐ ನಾಯಕತ್ವದಿಂದ ಕೆಳಗಿಳಿದು, ಪಾಟಿಂಗ್‌, ರೋಹಿತ್‌ಗೆ ತಂಡದ ನಾಯಕತ್ವ ಬಿಟ್ಟುಕೊಟ್ಟಿದ್ದರು. ಅಂದಿನಿಂದ ಎಂಐ ತಂಡವನ್ನು ರೋಹಿತ್ ಮುನ್ನಡೆಸುತ್ತಿದ್ದಾರೆ.

ರೋಹಿತ್ ನೆಚ್ಚಿನ ಕೋಚ್

ರೋಹಿತ್ ನೆಚ್ಚಿನ ಕೋಚ್

ತರಬೇತುದಾರರ ಅಡಿಯಲ್ಲಿ ಆಡಿದ್ದವರಲ್ಲಿ ತನಗೆ ರಿಕಿ ಪಾಂಟಿಂಗ್ ಕೋಚಿಂಗ್ ಅಚ್ಚುಮೆಚ್ಚು ಎಂದು ಶರ್ಮಾ ಹೇಳಿಕೊಂಡಿದ್ದಾರೆ. 'ಬೆಸ್ಟ್ ಕೋಚ್ ಅನ್ನು ಪಿಕ್ ಮಾಡೋದು ಕಷ್ಟ. ಯಾಕೆಂದರೆ ಎಲ್ಲರೂ ತಂಡವೊಂದಕ್ಕೆ ಕೊಡುಗೆ ಕೊಟ್ಟವರೆ. ಆದರೆ ರಿಕಿ ಪಾಂಟಿಂಗ್ ನನ್ನ ಪಾಲಿಗೆ ಒಂದು ಅದ್ಭುತವಾಗಿದ್ದರು,' ಎಂದು ಶರ್ಮಾ ಹೇಳಿದ್ದಾರೆ.

ಯುವಕರಿಗೆ ಮಾರ್ಗದರ್ಶನ

ಯುವಕರಿಗೆ ಮಾರ್ಗದರ್ಶನ

ತಂಡವನ್ನು ರಿಕಿ ಪಾಂಟಿಂಗ್ ನಿಭಾಯಿಸುತ್ತಿದ್ದ ರೀತಿ ಇಷ್ಟ. ಸೀಸನ್‌ನ ಮೊದಲಾರ್ಧದಲ್ಲಿ ನಾಯಕನಾಗಿದ್ದ ಪಾಂಟಿಂಗ್, ಅನಂತರ ನಾಯಕತ್ವ ನನಗೆ ನೀಡಿದರು. ಇಂಥದನ್ನು ಮಾಡಲು ಧೈರ್ಯ ಬೇಕು. ಅದಾಗಿ ಪಾಟಿಂಗ್ ಬೆಂಬಲ ಸಿಬ್ಬಂದಿಯಾಗಿ ಯುವ ಆಟಗಾರರಿಗೆ ಮಾರ್ಗದರ್ಶನ ನೀಡಿದ್ದಾರೆ,' ಎಂದು ರೋಹಿತ್ ವಿವರಿಸಿದರು.

7 ವರ್ಷದಿಂದ ರೋಹಿತ್ ನಾಯಕ

7 ವರ್ಷದಿಂದ ರೋಹಿತ್ ನಾಯಕ

ಕಳೆದ 7 ವರ್ಷಗಳಿಂದ ಮುಂಬೈ ಇಂಡಿಯನ್ಸ್ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸುತ್ತಿದ್ದಾರೆ. ರೋಹಿತ್ ನಾಯಕತ್ವದಲ್ಲಿ ಎಂಐ ಒಟ್ಟಿಗೆ 4 ಬಾರಿ ಪ್ರಶಸ್ತಿ ಜಯಿಸಿದೆ. ಒಟ್ಟು 188 ಐಪಿಎಲ್ ಪಂದ್ಯಗಳಲ್ಲಿ ಶರ್ಮಾ 4898 ರನ್ ಕಲೆ ಹಾಕಿದ್ದಾರೆ. ಮುಂಬೈ ಇಂಡಿಯನ್ಸ್ 4 ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಗೆದ್ದಿದ್ದರೆ, ದ್ವಿತೀಯ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್‌ 3 ಟ್ರೋಫಿಗಳನ್ನು ಜಯಿಸಿದೆ.

Story first published: Saturday, April 4, 2020, 11:57 [IST]
Other articles published on Apr 4, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X