ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಹಿಟ್‌ಮ್ಯಾನ್‌'ಗೆ ರಿಯಲ್ ಮ್ಯಾಡ್ರಿಡ್ ಎಫ್‌ಸಿಯಿಂದ ಸ್ಪೆಷಲ್ ಉಡುಗೊರೆ!

Rohit Sharma presented with customised Real Madrid Jersey

ನವದೆಹಲಿ, ಮಾರ್ಚ್ 3: ಭಾರತ ಕ್ರಿಕೆಟ್ ತಂಡದ ಸ್ಟಾರ್ ಆರಂಭಿಕ ಬ್ಯಾಟ್ಸ್‌ಮನ್, ಹಿಟ್‌ಮ್ಯಾನ್ ರೋಹಿತ್‌ ಶರ್ಮಾ ಅವರಿಗೆ, ಸ್ಪೇನ್ ಫುಟ್ಬಾಲ್ ದೈತ್ಯ ರಿಯಲ್ ಮ್ಯಾಡ್ರಿಡ್‌ನಿಂದ ವಿಶೇಷ ಉಡುಗೊರೆ ಲಭಿಸಿದೆ. ಸ್ಪೇನ್‌ನ ಮ್ಯಾಡ್ರಿಡ್‌ನಲ್ಲಿರುವ ಸ್ಯಾಂಟಿಯಾಗೊ ಬರ್ನಾಬ್ಯೂನಲ್ಲಿ ರೋಹಿತ್‌ಗೆ ರಿಯಲ್ ಮ್ಯಾಡ್ರಿಡ್‌ನಿಂದ ವಿಶೇಷ ಜೆರ್ಸಿ ಉಡುಗೊರೆಯಾಗಿ ದೊರೆತಿದೆ.

ಐಪಿಎಲ್‌ಗೆ ಕೊರೊನಾ ವೈರಸ್ ಭೀತಿ: ಪ್ರತಿಕ್ರಿಯಿಸಿದ ಬ್ರಿಜೇಶ್, ಗಂಗೂಲಿಐಪಿಎಲ್‌ಗೆ ಕೊರೊನಾ ವೈರಸ್ ಭೀತಿ: ಪ್ರತಿಕ್ರಿಯಿಸಿದ ಬ್ರಿಜೇಶ್, ಗಂಗೂಲಿ

ರೋಹಿತ್ ಶರ್ಮಾ ಅವರಿಗೆಂದೇ ವಿಶೇವಾಗಿ ತಯಾರಿಸಲಾಗಿದ್ದ ಆಕರ್ಷಕ ಫುಟ್ಬಾಲ್ ಜೆರ್ಸಿಯನ್ನು ಸಾಂಸ್ಥಿಕ ಸಂಬಂಧಗಳ ನಿರ್ದೇಶಕ ಎಮಿಲಿಯೊ ಬುಟ್ರಾಗುನೊ ಸ್ಯಾಂಟೋಸ್ ಅವರು ಲಾ ಲಿಗಾದ ಬ್ರ್ಯಾಂಡ್‌ ಅಂಬಾಸಿಡರ್ ಆಗಿರುವ ರೋಹಿತ್ ಕೈಗೆ ಹಸ್ತಾಂತರಿಸಿದರು.

ಸ್ಫೋಟಕ ಶತಕ ಚಚ್ಚಿದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ: ವೈರಲ್ ವೀಡಿಯೋಸ್ಫೋಟಕ ಶತಕ ಚಚ್ಚಿದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ: ವೈರಲ್ ವೀಡಿಯೋ

ಬೆನ್ನಿನಲ್ಲಿ 'ರೋ 45' ಎಂದು ಪ್ರಿಂಟ್‌ ಇರುವ ಬಿಳಿ ಬಣ್ಣದ ಜೆರ್ಸಿ ಜೊತೆಗೆ ರೋಹಿತ್ ಶರ್ಮಾ ಫೋಸ್ ನೀಡಿರುವ ಫೋಟೋವನ್ನು ರಿಯಲ್ ಮ್ಯಾಡ್ರಿಡ್ ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿಕೊಂಡಿದೆ. ಅಲ್ಲದೆ, 'ರೋಹಿತ್ ಶರ್ಮಾ ಅವರನ್ನು ಸ್ಯಾಂಟಿಯಾಗೊ ಬರ್ನಾಬ್ಯೂನಲ್ಲಿ ಕಾಣಲು ತುಂಬಾ ಖುಷಿಯೆನಿಸಿದೆ,' ಎಂದು ಸಾಲನ್ನೂ ಸೇರಿಸಿಕೊಂಡಿದೆ.

ರಣಜಿ ಟ್ರೋಫಿ: ಕರ್ನಾಟಕ ವಿರುದ್ಧ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಬೆಂಗಾಲ್ರಣಜಿ ಟ್ರೋಫಿ: ಕರ್ನಾಟಕ ವಿರುದ್ಧ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಬೆಂಗಾಲ್

ಭಾನುವಾರ (ಮಾರ್ಚ್ 1) ಲಾ ಲಿಗಾ ಟೂರ್ನಿಯಲ್ಲಿ ಬಾರ್ಸಿಲೋನಾ ವಿರುದ್ಧ ರಿಯಲ್ ಮ್ಯಾಡ್ರಿಡ್ 2-0 ಅಂತರದಿಂದ ಗೆದ್ದಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ರೋಹಿತ್, 'ಹಲಾಮಾಡ್ರಿಡ್ ಎಂಥಾ ಗೆಲುವಿದು, ಇಂತಹ ಅನುಭವ ದೊರೆತಿದ್ದಕ್ಕೆ ಧನ್ಯವಾದಗಳು,' ಎಂದು ಪ್ರತಿಯಿಸಿದ್ದಾರೆ. ನ್ಯೂಜಿಲೆಂಡ್ ಏಕದಿನ ಮತ್ತು ಟೆಸ್ಟ್ ಸರಣಿಯಿಂದ ಹೊರಗಿದ್ದ ರೋಹಿತ್ ಸದ್ಯ ಬಿಡುವಿನಲ್ಲಿದ್ದಾರೆ.

Story first published: Tuesday, March 3, 2020, 23:56 [IST]
Other articles published on Mar 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X