ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಹಿತ್ ಶರ್ಮಾ ಬಗ್ಗೆ ಬಹುದೊಡ್ಡ ನಿರೀಕ್ಷೆ ವ್ಯಕ್ತಪಡಿಸಿದ ಕ್ರಿಸ್ ಶ್ರೀಕಾಂತ್

Rohit Sharma Probably In Top 3 Or 5 All-time Greatest Openers-kris Srikkanth

ಟೀಮ್ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಟೀಮ್ ಇಂಡಿಯಾದ ಆಧಾರ ಸ್ಥಂಬವಾಗಿದ್ದಾರೆ. ತಮ್ಮ ಉತ್ಕೃಷ್ಟ ಆಟವನ್ನು ಪ್ರದರ್ಶಿಸುತ್ತಿರುವ ರೋಹಿತ್ ಶರ್ಮಾ ಬಗ್ಗೆ ವಿಶ್ವ ಶ್ರೇಷ್ಠ ಕ್ರಿಕೆಟಿಗರು ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಟೀಮ್ ಇಂಡಿಯಾದ ಮಾಜಿ ನಾಯಕ ಕ್ರಿಸ್ ಶ್ರೀಕಾಂತ್ ಕೂಡ ರೋಹಿತ್ ಬಗ್ಗೆ ಬಹುದೊಡ್ಡ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.

ರೋಹಿತ್ ಶರ್ಮಾ ಆರಂಭಿಕ ಆಟಗಾರನಾಗಿ 140 ಪಂದ್ಯಗಳಲ್ಲಿ 7148 ರನ್‌ಗಳನ್ನು ಗಳಿಸಿದ್ದಾರೆ. 58.11ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿರುವ ಶರ್ಮಾ 27 ಶತಕಗಳನ್ನು ಬಾರಿಸಿದ್ದಾರೆ. ಇನ್ನು ಟಿ20ಯಲ್ಲಿ 76 ಪಂದ್ಯಗಳಲ್ಲಿ ಆರಂಭಕನಾಗಿರುವ ರೋಹಿತ್ ಶರ್ಮಾ 2313 ರನ್‌ಗಳನ್ನು ಗಳಿಸಿದ್ದು ಚುಟುಕು ಮಾದರಿಯಲ್ಲಿ ಅತಿಹೆಚ್ಚು 4 ಶತಕ ದಾಖಲಿಸಿದ ಹೆಗ್ಗಳಿಕೆಯನ್ನು ಪಡೆದುಕೊಂಡಿದ್ದಾರೆ.

ಭಾರತ-ಪಾಕ್ ಈ ಪಂದ್ಯಗಳಲ್ಲಿ ನಂಬಲಾಗದ ಕಾಕತಾಳೀಯ ಸಂಗತಿಗಳು ನಡೆದಿತ್ತು!ಭಾರತ-ಪಾಕ್ ಈ ಪಂದ್ಯಗಳಲ್ಲಿ ನಂಬಲಾಗದ ಕಾಕತಾಳೀಯ ಸಂಗತಿಗಳು ನಡೆದಿತ್ತು!

ರೋಹಿತ್ ಮೇಲೆ ಶ್ರೀಕಾಂತ್ ನಿರೀಕ್ಷೆ

ರೋಹಿತ್ ಮೇಲೆ ಶ್ರೀಕಾಂತ್ ನಿರೀಕ್ಷೆ

ಟೀಮ್ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಆರಂಭಿಕ ಆಟಗಾರರ ಟಾಪ್ 3 ಪಟ್ಟಿಯಲ್ಲಿ ಅಥವಾ ಟಾಪ್ 5ರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಖಂಡಿತಾ ಸ್ಥಾನವನ್ನು ಪಡೆದುಕೊಳ್ಳಲಿದ್ದಾರೆ ಎಂದು ಶ್ರೀಕಾಂತ್ ರೋಹಿತ್ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

ದೊಡ್ಡ ಇನ್ನಿಂಗ್ಸ್ ಆಡುತ್ತಾರೆ ಶರ್ಮಾ

ದೊಡ್ಡ ಇನ್ನಿಂಗ್ಸ್ ಆಡುತ್ತಾರೆ ಶರ್ಮಾ

ರೋಹಿತ್ ಶರ್ಮಾ ಅವರನ್ನು ನಾನು ಏಕದಿನ ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಆರಂಭಿಕ ಆಟಗಾರರಲ್ಲಿ ಒಬ್ಬ ಎಂದು ಕರೆಯಲು ಇಚ್ಚಿಸುತ್ತೇನೆ ಎಂದು ಶ್ರೀಕಾಂತ್ ಹೇಳಿದ್ದಾರೆ. ರೋಹಿತ್ ಶರ್ಮಾ ಅವರ ಶ್ರೇಷ್ಠತೆಯೇನೆಂದರೆ ಅವರಿ ದೊಡ್ಡ ಇನ್ನಿಂಗ್ಸ್‌ನ್ನು ಆಡುತ್ತಾರೆ. ಶತಕ, ದ್ವಿಶತಕಗಳನ್ನು ಸರಾಗವಾಗಿ ಬಾರಿಸುವುದು ನಿಜಕ್ಕೂ ಅದ್ಭುತ ಎಂದಿದ್ದಾರೆ.

ರೋಹಿತ್ ಆಟದ ಶ್ರೇಷ್ಠತೆ

ರೋಹಿತ್ ಆಟದ ಶ್ರೇಷ್ಠತೆ

ಏಕದಿನ ಕ್ರಿಕೆಟ್‌ನಲ್ಲಿ ಆಟಗಾರನೋರ್ವ 100, 150, 200 ರನ್‌ಗಳನ್ನು ಬಾರಿಸುತ್ತಾನೆಂದರೆ ಆತ ತಂಡವನ್ನೆ ಯಾವ ಕಡೆಗೆ ತೆಗೆದುಕೊಂಡು ಹೋಗುತ್ತಿದ್ದಾನೆ ಎಂಬುದು ಮಹತ್ವವಾಗುತ್ತದೆ. ಇದು ರೋಹಿತ್ ಶರ್ಮಾ ಆಟದ ಶ್ರೇಷ್ಠತೆಯೆಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಶ್ರೀಕಾಂತ್ ಹೇಳಿದ್ದಾರೆ.

ವರ್ಷಾರಂಭದಲ್ಲಿ ಮಹತ್ವದ ಮೈಲಿಗಲ್ಲು

ವರ್ಷಾರಂಭದಲ್ಲಿ ಮಹತ್ವದ ಮೈಲಿಗಲ್ಲು

ಈ ವರ್ಷದ ಆರಂಭದಲ್ಲಿ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 7000ರನ್‌ಗಳನ್ನು ದಾಖಲಿಸಿದ ಆರಂಭಿಕ ಆಟಗಾರ ಎಂಬ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಈ ಮೂಲಕ ಸಚಿನ್ ತೆಂಡೂಲ್ಕರ್ ಮತ್ತು ಹಾಶಿಮ್ ಆಮ್ಲಾ ಅವರನ್ನು ಹಿಂದಿಕ್ಕಿ ಮೊದಲ ಆಟಗಾರ ಸ್ಥಾನವನ್ನು ಅಲಂಕರಿಸಿದ್ದಾರೆ. ಆರಂಭಿಕನಾಗಿ 7000 ರನ್‌ಗಳಿಸಿದ ನಾಲ್ಕನೇ ಭಾರತೀಯ ಆರಂಭಿಕ ಆಟಗಾರ ಎಂಬ ದಾಖಲೆಗೂ ಶರ್ಮಾ ಪಾತ್ರರಾಗಿದ್ದಾರೆ.

Story first published: Tuesday, June 30, 2020, 18:07 [IST]
Other articles published on Jun 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X