ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC Test Rankingನಲ್ಲಿ ದಾಖಲೆಯ ಜಿಗಿತ ಕಂಡ ರೋಹಿತ್ ಶರ್ಮಾ!

Rohit Sharma reaches career-best 17th in ICC Test Player Rankings

ನವದೆಹಲಿ, ಅಕ್ಟೋಬರ್ 7: ಟೆಸ್ಟ್‌ ಕ್ರಿಕೆಟ್‌ನಲ್ಲಿ ಆರಂಭಿಕರಾಗಿ ಬ್ಯಾಟಿಂಗ್‌ ಮಾಡಿದ ಚೊಚ್ಚಲ ಪಂದ್ಯದಲ್ಲೇ 2 ಶತಕಗಳನ್ನು ಬಾರಿಸಿರುವ ಹಿಟ್‌ಮ್ಯಾನ್ ರೋಹಿತ್ ಶರ್ಮಾ ನೂತನ ಐಸಿಸಿ ಟೆಸ್ಟ್‌ ರ್ಯಾಂಕಿಂಗ್‌ನಲ್ಲಿ ದಾಖಲೆಯ ಜಿಗಿತ ಕಂಡಿದ್ದಾರೆ. ವಿಶಾಖಪಟ್ಟಣದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ನಲ್ಲಿ ಪ್ರದರ್ಶಿಸಿದ ಭರ್ಜರಿ ಬ್ಯಾಟಿಂಗ್‌, ರ್ಯಾಂಕಿಂಗ್‌ನಲ್ಲಿ ಮೇಲಕ್ಕೇರಲು ಶರ್ಮಾಗೆ ನೆರವಾಗಿದೆ.

ಇತಿಹಾಸ ಬರೆದ ರೋಹಿತ್ ಶರ್ಮಾ, 25 ವರ್ಷಗಳ ಹಿಂದಿನ ದಾಖಲೆ ಬದಿಗೆ!ಇತಿಹಾಸ ಬರೆದ ರೋಹಿತ್ ಶರ್ಮಾ, 25 ವರ್ಷಗಳ ಹಿಂದಿನ ದಾಖಲೆ ಬದಿಗೆ!

ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ರೋಹಿತ್ ಶರ್ಮಾ ಆರಂಭಿಕ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 176 ರನ್, ದ್ವಿತೀಯ ಇನ್ನಿಂಗ್ಸ್‌ನಲ್ಲಿ 127 ರನ್ ಗಳಿಸಿದ್ದರು. ಶರ್ಮಾ, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ ಬ್ಯಾಟಿಂಗ್ ಬೆಂಬಲ, ಆರ್ ಅಶ್ವಿನ್, ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಶಮಿ ಬೌಲಿಂಗ್ ಬಲದಿಂದ ಭಾರತ ಪಂದ್ಯವನ್ನು 203 ರನ್‌ಗಳಿಂದ ಗೆದ್ದಿತ್ತು.

ಕಪಿಲ್ ದೇವ್, ಜಾವಗಲ್ ಶ್ರೀನಾಥ್‌ ದಾಖಲೆ ಪಟ್ಟಿ ಸೇರಿದ ಮೊಹಮ್ಮದ್ ಶಮಿಕಪಿಲ್ ದೇವ್, ಜಾವಗಲ್ ಶ್ರೀನಾಥ್‌ ದಾಖಲೆ ಪಟ್ಟಿ ಸೇರಿದ ಮೊಹಮ್ಮದ್ ಶಮಿ

ಮೊದಲ ಟೆಸ್ಟ್‌ನಲ್ಲಿ ಆಕರ್ಷಕ ಬ್ಯಾಟಿಂಗ್‌ನಿಂದಾಗಿ ಹಿಟ್‌ಮ್ಯಾನ್ ಸದ್ಯದ ಟೆಸ್ಟ್‌ ರ್ಯಾಂಕಿಂಗ್‌ನಲ್ಲಿ ಜೀವನ ಶ್ರೇಷ್ಠ ಜಿಗಿತ ಕಂಡಿದ್ದಾರೆ. ಟೆಸ್ಟ್‌ ರ್ಯಾಂಕಿಂಗ್‌ನಲ್ಲಿ 54ನೇ ಶ್ರೇಯಾಂಕದಲ್ಲಿದ್ದ ಶರ್ಮಾ ಈಗ 17ನೇ ಸ್ಥಾನದಲ್ಲಿದ್ದಾರೆ. ಅಂದರೆ ಬರೋಬ್ಬರಿ 36 ಸ್ಥಾನಗಳನ್ನು ಜಿಗಿದಿದ್ದಾರೆ.

ವಿಶ್ವದಾಖಲೆ ಬರೆದ ಪಾಕಿಸ್ತಾನ ಯುವ ಕ್ರಿಕೆಟರ್ ಮೊಹಮ್ಮದ್ ಹಸನೈನ್ವಿಶ್ವದಾಖಲೆ ಬರೆದ ಪಾಕಿಸ್ತಾನ ಯುವ ಕ್ರಿಕೆಟರ್ ಮೊಹಮ್ಮದ್ ಹಸನೈನ್

ಮಯಾಂಕ್ ಅಗರ್ವಾಲ್ ಕೂಡ ವೃತ್ತಿ ಜೀವನದ ಶ್ರೇಷ್ಠ ರ್ಯಾಂಕಿಂಗ್‌ 25ನೇ ಸ್ಥಾನಕ್ಕೇರಿದ್ದಾರೆ. ಇನ್ನುಳಿದಂತೆ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮೊದಲ ಸ್ಥಾನದಲ್ಲಿ, ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ. ಆರ್ ಅಶ್ವಿನ್ 10ನೇ ಸ್ಥಾನಕ್ಕೇರಿದ್ದಾರೆ. ತಂಡಗಳಲ್ಲಿ ಭಾರತ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮೊದಲ 3 ಸ್ಥಾನ ಪಡೆದಿವೆ.

Story first published: Monday, October 7, 2019, 19:31 [IST]
Other articles published on Oct 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X