ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಸಿಸಿಐಗೆ ತಿರುಗೇಟು, ರೋಹಿತ್ ಶರ್ಮ ಟ್ವಿಟ್ಟರ್ ''ಬಯೋ'' ಬದಲು

Rohit Sharma removes India Cricketer from his social media bio

ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾದಲ್ಲಿ ರೋಹಿತ್ ಶರ್ಮ ಏಕಿಲ್ಲ? ಎಂಬ ಪ್ರಶ್ನೆ ಸದ್ಯಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿ ಟ್ರೆಂಡಿಂಗ್ ನಲ್ಲಿದೆ. ಫ್ಯಾನ್ಸ್, ಕ್ರಿಕೆಟ್ ಪಂಡಿತರು ಈ ಬಗ್ಗೆ ಚರ್ಚೆ ನಡೆಸುತ್ತಿರುವ ಹೊತ್ತಿನಲ್ಲೇ ರೋಹಿತ್ ಶರ್ಮ ಅವರು ತಮ್ಮದೇ ಆದ ರೀತಿಯಲ್ಲಿ ಬಿಸಿಸಿಐ ಆಯ್ಕೆ ಸಮಿತಿಗೆ ತಿರುಗೇಟು ನೀಡಿದ್ದಾರೆ.

ಐಪಿಎಲ್ 2020ರಲ್ಲಿ ಮುಂಬೈ ಇಂಡಿಯನ್ಸ್ ಮುನ್ನಡೆಸುತ್ತಿರುವ ರೋಹಿತ್ ಶರ್ಮರನ್ನು ಆಸ್ಟ್ರೇಲಿಯಾ ಸರಣಿಗಾಗಿ ಪ್ರಕಟಿಸಿರುವ ತಂಡಕ್ಕೆ ಪರಿಗಣಿಸಿಲ್ಲ. ರೋಹಿತ್ ಶರ್ಮ ರ ದೈಹಿಕ ಕ್ಷಮತೆ ಬಗ್ಗೆ ಫಿಟ್ನೆಸ್ ತಜ್ಞರ ವರದಿ ಬಂದ ಬಳಿಕ ಈ ಬಗ್ಗೆ ಅಂತಿಮ ನಿರ್ಣಯ ಹೊರಬರಬಹುದು. ಆದರೆ, ಫಿಟ್ನೆಸ್ ವಿಷಯಕ್ಕೆ ರೋಹಿತ್ ರನ್ನು ಕೈಬಿಡಲಾಗಿದೆ ಎಂದು ಬಿಸಿಸಿಐ ಆಯ್ಕೆ ಸಮಿತಿ ಸ್ಪಷ್ಟಪಡಿಸಿಲ್ಲ.

ಹೀಗಾಗಿ, ಗೊಂದಲದ ಸನ್ನಿವೇಶದಲ್ಲಿ ಬಿಸಿಸಿಐ ಆಯ್ಕೆ ಸಮಿತಿ ತೆಗೆದುಕೊಂಡ ನಿರ್ಣಯಕ್ಕೆ ಬದಲಾಗಿ ಮುಂಬೈ ಇಂಡಿಯನ್ಸ್ ನಿನ್ನೆ ಫೋಟೊ ಹಂಚಿಕೊಂಡು ಉತ್ತರ ನೀಡಿತ್ತು. ಇಂದು ರೋಹಿತ್ ಶರ್ಮ ಅವರು ತಮ್ಮ ಟ್ವಿಟ್ಟರ್ ಸ್ವವಿವರ ಜಾಗದಲ್ಲಿ India Cricketer ಎಂಬುದನ್ನು ತೆಗೆದು ಹಾಕಿದ್ದಾರೆ.

Rohit Sharma removes India Cricketer from his social media bio


ಟೀಂ ಇಂಡಿಯಾದ ಏಕದಿನ ಕ್ರಿಕೆಟ್ ತಂಡದ ಉಪ ನಾಯಕರಾಗಿದ್ದ ರೋಹಿತ್ ಅವರು ಐಪಿಎಲ್ 2020ರಲ್ಲಿ ಸ್ನಾಯುಸೆಳೆತಕ್ಕೆ ಸಿಲುಕಿ ಕಣಕ್ಕಿಳಿಯಲು ಆಗಿಲ್ಲ. ಕಿರಾನ್ ಪೊಲ್ಲಾರ್ಡ್ ಅವರು ಮುಂಬೈ ತಂಡವನ್ನು ಮುನ್ನಡೆಸುತ್ತಿದ್ದಾರೆ. ರೋಹಿತ್ ಗಾಯದ ಸಮಸ್ಯೆಯ ಬಗ್ಗೆ ಹೆಚ್ಚಿನ ಮಾಹಿತಿ ಲಭಿಸುವ ಮುನ್ನವೇ ಗಾಯದ ಮೇಲೆ ಬರೆ ಎಳೆದಂತೆ ಟೀಂ ಇಂಡಿಯಾ ಆಯ್ಕೆಗೆ ಪರಿಗಣಿಸಿಲ್ಲ.

ಕಿಂಗ್ಸ್ ಎಲೆವನ್ ಪಂಜಾಬ್ ತಂಡದ ಆರಂಭಿಕ ಆಟಗಾರ ಮಯಾಂಕ್ ಅಗರವಾಲ್ ಕೂಡಾ ಇದೇ ರೀತಿ ಗಾಯಗೊಂಡಿದ್ದರೂ ಆಸ್ಟ್ರೇಲಿಯಾ ಪ್ರವಾಸಕ್ಕೆ ಆಯ್ಕೆ ಮಾಡಲಾಗಿದೆ. ನವೆಂಬರ್ 27ರಿಂದ ಟೂರ್ನಮೆಂಟ್ ಆರಂಭವಾಗಲಿದ್ದು, ರೋಹಿತ್ ಗುಣಮುಖರಾಗಲು ಸಾಕಷ್ಟು ಕಾಲಾವಕಾಶವಿದೆ.

ಟೀಂ ಇಂಡಿಯಾಕ್ಕೆ ಆಯ್ಕೆ ನಿಜಕ್ಕೂ ನನಗೆ ಅಚ್ಚರಿ ತಂದಿದೆ: ವರುಣ್

ಆದರೆ, ಈ ಬಗ್ಗೆ ಗಮನ ಹರಿಸದ ಆಯ್ಕೆ ಸಮಿತಿ, ಏಕಾಏಕಿ ತಂಡದಿಂದ ಕೈಬಿಟ್ಟು ಯಾವ ಸಂದೇಶ ಹೇಳಲು ಹೊರಟ್ಟಿದ್ದಾರೆ ಎಂದು ಫ್ಯಾನ್ಸ್ ಪ್ರಶ್ನಿಸಿದ್ದಾರೆ. ಇದೇ ಪ್ರಶ್ನೆಯನ್ನು ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಕೂಡಾ ಮುಂದಿಟ್ಟಿದ್ದು, ಆಯ್ಕೆ ಬಗ್ಗೆ ಪಾರದರ್ಶಕತೆ ಅಗತ್ಯ ಎಂದಿದ್ದಾರೆ.

ರೋಹಿತ್ ಶರ್ಮಾ ಆಯ್ಕೆ ಮಾಡದಿದ್ದಕ್ಕೆ ಸ್ಪಷ್ಟನೆ ಕೇಳಿದ ಗವಾಸ್ಕರ್ರೋಹಿತ್ ಶರ್ಮಾ ಆಯ್ಕೆ ಮಾಡದಿದ್ದಕ್ಕೆ ಸ್ಪಷ್ಟನೆ ಕೇಳಿದ ಗವಾಸ್ಕರ್

ಕೊಹ್ಲಿ ಹಾಗೂ ರೋಹಿತ್ ನಡುವಿನ ವೈರತ್ವ ಹೆಚ್ಚಾಗುತ್ತಿದೆ ಎಂದಿರುವ ಅಭಿಮಾನಿ

Story first published: Tuesday, October 27, 2020, 22:05 [IST]
Other articles published on Oct 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X