ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮತ್ತೆ ಆರಂಭವಾದ ಕ್ರಿಕೆಟ್: ಸಂತಸ ವ್ಯಕ್ತಪಡಿಸಿದ ರೋಹಿತ್ ಶರ್ಮಾ, ರಿಕಿ ಪಾಂಟಿಂಗ್

Rohit Sharma, Ricky Ponting React As International Cricket Resumes

ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಮಧ್ಯೆ ಟೆಸ್ಟ್ ಸರಣಿ ಆರಂಭವಾಗುವುದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮತ್ತೆ ಚಾಲನೆ ಸಿಕ್ಕಿದೆ. ಕೊರೊನಾ ವೈರಸ್‌ನ ಕಾರಣದಿಂದ 117 ದಿನಗಳ ಕಾಲ ಸ್ತಬ್ಧವಾಗಿದ್ದ ಕ್ರಿಕೆಟ್‌ ಮತ್ತೆ ಆರಂಭವಾಗಿರುವುದಕ್ಕೆ ವಿಶ್ವಾದ್ಯಂತ ಕ್ರಿಕೆಟ್ ಪ್ರೇಮಿಗಳು ತಮ್ಮ ಸಂತಸವನ್ನು ಸಾಮಾಜಿಕ ಜಾಲತಾಣಗಳ ಮೂಲಕ ವ್ಯಕ್ತಪಡಿಸಿದ್ದಾರೆ.

ಕೇವಲ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲ ಕ್ರಿಕೆಟ್ ಆಟಗಾರರಿಗೂ ಈ ಆರಂಭ ಹೊಸ ಭರವಸೆಯನ್ನು ನೀಡಿದೆ. ಹೀಗಾಗಿ ಹಾಲಿ ಹಾಗೂ ಮಾಜಿ ಕ್ರಿಕೆಟಿಗರು ಇಂದು ಆರಂಭವಾದ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ನಡುವಿನ ಪಂದ್ಯದ ಬಗ್ಗೆ ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ.

ಕ್ರಿಕೆಟ್‌ನಲ್ಲಿ ಈ ಐದು ಹೊಸ ನಿಯಮಗಳಿಗೆ ಕಾರಣವಾಯಿತು ಮಾರಕ ವೈರಸ್ಕ್ರಿಕೆಟ್‌ನಲ್ಲಿ ಈ ಐದು ಹೊಸ ನಿಯಮಗಳಿಗೆ ಕಾರಣವಾಯಿತು ಮಾರಕ ವೈರಸ್

ಟೀಮ್ ಇಂಡಿಯಾದ ಪ್ರಮುಖ ಆಟಗಾರ ರೋಹಿತ್ ಶರ್ಮಾ ಟ್ವಿಟ್ಟರ್‌ನಲ್ಲಿ ಈ ಬಗ್ಗೆ ತಮ್ಮ ಹರ್ಷವನ್ನು ವ್ಯಕ್ತಪಡಿಸಿದ್ದಾರೆ. "ಕ್ರಿಕೆಟ್ ಮತ್ತೆ ಬಂದಿದೆ. ಯು.ಕೆಯಿಂದ ಸಕಾರಾತ್ಮಕ ದೃಶ್ಯಗಳು ಹೊರಬರುತ್ತಿದೆ. ಕಡೆಗೂ ಕ್ರಿಕೆಟ್ ಆಡುವುದನ್ನು ನೋಡಲು ತುಂಬಾ ಖುಷಿಯೆನಿಸುತ್ತಿದೆ. ಎರಡೂ ತಂಡಗಳಿಗೂ ಒಳ್ಳೆಯದಾಗಲಿ. ಇನ್ನು ಮೈದಾನದಲ್ಲಿರುವುದನ್ನು ಕಾಯಲು ಸಾಧ್ಯವಿಲ್ಲ" ಎಂದು ರೋಹಿತ್ ಶರ್ಮಾ ಬರೆದುಕೊಂಡಿದ್ದಾರೆ.

ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಕೂಡ ಈ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. "ಟೆಸ್ಟ್ ಕ್ರಿಕೆಟ್ ಮತ್ತೆ ಆರಂಭವಾಗರುವುದನ್ನು ನೋಡಲು ಅದೆಷ್ಟು ಖುಷಿಯೆನಿಸುತ್ತಿದೆ" ಎಂದು ಟಿಕಿ ಪಾಂಟಿಂಗ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

143 ವರ್ಷಗಳಲ್ಲಿ ವೀಕ್ಷಕರಿಲ್ಲದೆ ಟೆಸ್ಟ್ ಪಂದ್ಯ ನಡೆಯುತ್ತಿರುವುದು ಇದೇ ಮೊದಲು!143 ವರ್ಷಗಳಲ್ಲಿ ವೀಕ್ಷಕರಿಲ್ಲದೆ ಟೆಸ್ಟ್ ಪಂದ್ಯ ನಡೆಯುತ್ತಿರುವುದು ಇದೇ ಮೊದಲು!

ಸೌಥಾಂಫ್ಟನ್‌ನಲ್ಲಿ ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ತಂಡಗಳು ಮೊದಲ ಟೆಸ್ಟ್ ಪಂದ್ಯದಲ್ಲಿ ಕಾದಾಟವನ್ನು ನಡೆಸುತ್ತಿದೆ. ಆದರೆ ಮೊದಲ ದಿನದ ಪಂದ್ಯಕ್ಕೆ ಮಳೆ ಸಾಕಷ್ಟು ಅಡ್ಡಿಯುಂಟು ಮಾಡಿದ್ದು ಅಭಿಮಾನಿಗಳು ನಿರಾಸೆಗೊಂಡಿದ್ದಾರೆ.

Story first published: Thursday, July 9, 2020, 10:07 [IST]
Other articles published on Jul 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X