ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಹಿತ್ ಶರ್ಮಾ ಐಪಿಎಲ್‌ನ ಯಶಸ್ವಿ ನಾಯಕನೆನಿಸಲು ಕಾರಣ ಹೇಳಿದ ಲಕ್ಷ್ಮಣ್

Rohit Sharma’s Ability To Handle Pressure Made Him Most Successful Ipl Captain, Says Laxman

ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿರುವ ರೋಹಿತ್ ಶರ್ಮಾ ಐಪಿಎಲ್‌ನ ಯಶಸ್ವಿ ನಾಯಕನೆನಿಸಿದ್ದಾರೆ. ರೋಹಿತ್ ನಾಯಕನಾದ ಬಳಿಕ ಮುಂಬೈ ಇಂಡಿಯನ್ಸ್ ತಂಡ ನಾಲ್ಕು ಬಾರಿ ಚಾಂಪಿಯನ್ ಎನಿಸಿದೆ. ಆ ಕಾರಣದಿಂದಾಗಿ ರೋಹಿತ್ ಶರ್ಮಾ ನಾಯಕತ್ವ ಗುಣ ಸಾಕಷ್ಟು ಹೊಗಳಿಕೆಗೆ ಪಾತ್ರವಾಗಿದೆ.

ಈ ಮಧ್ಯೆ ಟೀಮ್ ಇಂಡಿಯಾದ ಮಾಜಿ ಆಟಗಾರ ಡೆಕ್ಕನ್ ಚಾರ್ಜರ್ಸ್ ತಂಡದಲ್ಲಿ ಸಹ ಆಟಗಾರನಾಗಿದ್ದ ವಿವಿಎಸ್ ಲಕ್ಷ್ಮಣ್ ರೋಹಿತ್ ಶರ್ಮಾ ಅವರ ಯಶಸ್ಸಿಗೆ ಕಾರಣವೇನೆಂದು ಹೇಳಿದ್ದಾರೆ. ಒತ್ತಡದ ಸಂದರ್ಭವನ್ನು ಶಾಂತಚಿತ್ತದಿಂದ ನೊಭಾಯಿಸುವ ಅವರ ಗುಣವೇ ರೋಹಿತ್ ಶರ್ಮಾ ಅವರ ಯಶಸ್ಸಿಗೆ ಕಾರಣ ಎಂದು ಲಕ್ಷ್ಮಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕ್ರಿಕೆಟ್ ಅಂಗಳದಲ್ಲಿ ಯುವರಾಜ್ ಸಿಂಗ್ ಹೀರೋ ಆಗಿ ಮಿಂಚಿದ 5 ಸಂದರ್ಭಗಳುಕ್ರಿಕೆಟ್ ಅಂಗಳದಲ್ಲಿ ಯುವರಾಜ್ ಸಿಂಗ್ ಹೀರೋ ಆಗಿ ಮಿಂಚಿದ 5 ಸಂದರ್ಭಗಳು

ಆರಂಭದಲ್ಲಿ ರೋಹಿತ್ ಶರ್ಮಾ ಡೆಕ್ಕನ್ ಚಾರ್ಜರ್ಸ್ ತಂಡದ ಸದಸ್ಯರಾಗಿದ್ದರು. ಆ ಸಂದರ್ಭದಿಂದ ರೋಹಿತ್ ಶರ್ಮಾ ಬ್ಯಾಟ್ಸ್‌ಮನ್ ಆಗಿ ಮತ್ತು ನಾಯಕನಾಗಿ ಬೆಳೆಯುತ್ತಾ ಬಂದರು ಎಂಬುದನ್ನು ಲಕ್ಷ್ಮಣ್ ನೆನಪಿಸಿಕೊಂಡಿದ್ದಾರೆ. ಡೆಕ್ಕನ್ ಚಾರ್ಜರ್ಸ್ ತಂಡದಲ್ಲೇ ಆತನೋರ್ವ ನಾಯಕನಾಗಿ ಬೆಳೆಯಲು ಆರಂಭಿಸಿದರು. ಆದರೆ ಅವರಿನ್ನೂ ಆಗ ಯುವ ಕ್ರಿಕೆಟಿಗನಾಗಿದ್ದರು. ಭಾರತ ತಂಡವನ್ನು ಆಗಷ್ಟೇ ಪ್ರವೇಶಿಸಿದ್ದರು ಎಂದು ಲಕ್ಷ್ಮಣ್ ನೆನಪಿಸಿಕೊಂಡಿದ್ದಾರೆ.

ಐಪಿಎಲ್ ಆರಂಭದ ಟೂರ್ನಿಯಲ್ಲಿ ನಾವು(ಡೆಕ್ಕನ್ ಚಾರ್ಜರ್ಸ್) ಉತ್ತಮವಾಗಿ ಆಡಿರಲಿಲ್ಲ. ಆದರೆ ರೋಹಿತ್ ಶರ್ಮಾ ತಂಡದ ಪರವಾಗಿ ಅದ್ಭುತ ಪ್ರದರ್ಶನವನ್ನು ನೀಡಿದ್ದರು ಎಂದು ವಿವಿಎಸ್ ಲಕ್ಷ್ಮಣ್ ಹೇಳಿದ್ದಾರೆ. ಸ್ಟಾರ್ ಸ್ಪೋರ್ಟ್ಸ್‌ನ ಕ್ರಿಕೆಟ್ ಕನೆಕ್ಟೆಡ್ ಕಾರ್ಯಕ್ರಮದಲ್ಲಿ ರೋಹಿತ್ ಆಟದ ಬಗ್ಗೆ ಮಾತನಾಡಿದರು.

"ನನ್ನನ್ನು ಎದುರಿಸುವುದು ಕಷ್ಟ ಎಂದು ಸ್ವತಃ ಲಾರಾ ಹೇಳಿಕೊಂಡಿದ್ದರು" : ಪಾಕ್ ಆಲ್‌ರೌಂಡರ್

ಐಪಿಎಲ್‌ನಲ್ಲಿ ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ತಂಡವನ್ನು ನಾಲ್ಕು ಬಾರಿ ಚಾಂಪಿಯನ್ ಪಟ್ಟಕ್ಕೆ ಏರಿಸಿದ್ದಾರೆ. ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿಗಿಂತಲೂ ಒಂದು ಬಾರಿ ಹೆಚ್ಚು ಕಪ್ ಎತ್ತಿ ಹಿಡಿದಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಐಪಿಎಲ್‌ನ ಯಶಸ್ವೀ ನಾಯಕ ಎಂಬ ಖ್ಯಾತಿಯನ್ನು ಗಳಿಸಿದ್ದಾರೆ.

Story first published: Friday, May 29, 2020, 13:50 [IST]
Other articles published on May 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X