ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಹಿತ್ ಶರ್ಮಾ ಆರೋಗ್ಯದ ಕುರಿತು ಅಪ್‌ಡೇಟ್ ತಿಳಿಸಿದ ಮಗಳು ಸಮೈರಾ

Rohit sharma

ಜುಲೈ 1ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯಕ್ಕೂ ಮುನ್ನ ಕೊರೊನಾ ಪಾಸಿಟಿವ್ ಆಗಿರುವ ರೋಹಿತ್ ಶರ್ಮಾ ಆರೋಗ್ಯದ ಕುರಿತು, ಸ್ವತಃ ಮಗಳು ಸಮೈರಾ ಮಾಧ್ಯಮಕ್ಕೆ ಉತ್ತರಿಸಿರುವ ವೀಡೀಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಲೈಸೆಸ್ಟರ್‌ಶೈರ್‌ ವಿರುದ್ಧದ ಅಭ್ಯಾಸ ಪಂದ್ಯದ ನಡುವೆ ಕೋವಿಡ್-19 ಪಾಸಿಟಿವ್ ಆಗಿದ್ದ ರೋಹಿತ್ ಶರ್ಮಾ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ನಲ್ಲಿ ಇಳಿದಿರಲಿಲ್ಲ. ಕೋವಿಡ್ ಪಾಸಿಟಿವ್ ಆಗುತ್ತಿದ್ದಂತೆ ಐಸೋಲೇಷನ್‌ಗೆ ಒಳಗಾಗಿದ್ದರು. ಬಹು ಮಹತ್ವದ ಹಾಗೂ ಸರಣಿ ಡಿಸೈಡರ್ ಟೆಸ್ಟ್‌ ಪಂದ್ಯಕ್ಕೆ ರೋಹಿತ್ ಅಲಭ್ಯತೆ ಟೀಂ ಇಂಡಿಯಾಗೆ ಹಿನ್ನಡೆಯಾಗಿದೆ.

ಕಳೆದ ನಾಲ್ಕು ಟೆಸ್ಟ್‌ನಲ್ಲಿ ಅಗ್ರ ರನ್ ದಾಖಲಿಸಿದ್ದ ರೋಹಿತ್

ಕಳೆದ ನಾಲ್ಕು ಟೆಸ್ಟ್‌ನಲ್ಲಿ ಅಗ್ರ ರನ್ ದಾಖಲಿಸಿದ್ದ ರೋಹಿತ್

ಕಳೆದ ವರ್ಷ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ ನಾಲ್ಕು ಟೆಸ್ಟ್‌ ಬಳಿಕ ಕೋವಿಡ್ ಕಾರಣಗಳಿಂದಾಗಿ ಅಂತಿಮ ಪಂದ್ಯವನ್ನಾಡದೇ ತವರಿಗೆ ಹಿಂದುರುಗಿತ್ತು. ಈ ಸರಣಿಯಲ್ಲಿ ರೋಹಿತ್ ಶರ್ಮಾ ಅಗ್ರ ಸ್ಕೋರರ್ ಆಗಿದ್ದರು. ಆದ್ರೆ ಅಂತಿಮ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಲಭ್ಯರಾಗುತ್ತಾರೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಿಲ್ಲ. ಆದ್ರೆ ಇದ್ರ ಬೆನ್ನಲ್ಲೇ ಮಗಳು ಸಮೈರಾ ಅಪ್ಪನ ಆರೋಗ್ಯದ ಕುರಿತು ಮಾಹಿತಿ ನೀಡಿದ್ದಾರೆ.

ಭಾರತ ವಿರುದ್ಧ ನಾಯಕತ್ವ ವಹಿಸಿದ ಭಾರತೀಯ ಮೂಲದ 3 ವಿದೇಶಿ ತಂಡದ ನಾಯಕರು

ರೋಹಿತ್ ಶರ್ಮಾ ಆರೋಗ್ಯದ ಕುರಿತು ಸಮೈರಾ ಹೇಳಿದ್ದೇನು?

ರೋಹಿತ್ ಶರ್ಮಾ ಆರೋಗ್ಯದ ಕುರಿತು ಸಮೈರಾ ಹೇಳಿದ್ದೇನು?

ರೋಹಿತ್ ಶರ್ಮಾ ಪತ್ನಿ ರಿತಿಕಾ ಸಜ್ದೆ ಹಾಗೂ ಮಗಳು ಸಮೈರಾ ಹೋಟೆಲ್‌ನಿಂದ ಹೊರಗೆ ಬರುತ್ತಿದ್ದಂತೆ ಇಂಗ್ಲೆಂಡ್‌ನ ಪತ್ರಕರ್ತರು ಸಮೈರಾರರನ್ನು ನಿಮ್ಮಪ್ಪ ಎಲ್ಲಿ? ರೋಹಿತ್ ಶರ್ಮಾ ಹೇಗಿದ್ದಾರೆ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಸಮೈರಾ ಕ್ಯೂಟ್ ವೀಡಿಯೋ ಎಲ್ಲಡೆ ಸಖತ್ ವೈರಲ್ ಆಗಿದೆ.

ಇಯಾನ್ ಮಾರ್ಗನ್ ನಿವೃತ್ತಿ: ಇಂಗ್ಲೆಂಡ್‌ನ ಕೂಲ್ ಕ್ಯಾಪ್ಟನ್‌ಗೆ ಶುಭ ಕೋರಿದ ಅಭಿಮಾನಿಗಳು

ರೋಹಿತ್ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದ ಸಮೈರಾ!

ರೋಹಿತ್ ಶರ್ಮಾ ಏನು ಮಾಡ್ತಿದ್ದಾರೆ ಎಂದು ಕೇಳಿದ ಪ್ರಶ್ನೆಗೆ ಸಮೈರಾ ತನ್ನ ತಂದೆ ಲಿವಿಂಗ್ ರೂಂನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಅವರಿಗೆ ಕೋವಿಡ್ ಪಾಸಿಟಿವ್‌ ಆಗಿದ್ದು ವಿಶ್ರಾಂತಿ ಬಯಸಿದ್ದಾರೆ ಎಮದು ಹೇಳಿರುವ ವೀಡಿಯೋ ಸಾಕಷ್ಟು ವೈರಲ್ ಆಗಿದೆ.

ಪತ್ರಕರ್ತರು ಕೇಳಿದ ಪ್ರಶ್ನೆಗೆ ಸ್ವಲ್ಪವೂ ಹಿಂಜರಿಯದೇ ಉತ್ತರಿಸಿರುವ ಸಮೈರಾ ಧೈರ್ಯದಿಂದ ಮಾತನಾಡಿರುವ ವೀಡಿಯೋವನ್ನು ರೋಹಿತ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ರೋಹಿತ್ ಶರ್ಮಾ ಕೋವಿಡ್‌ನಿಂದ ಐಸೋಲೇಷನ್‌ನಲ್ಲಿದ್ದು, ಅಂತಿಮ ಪಂದ್ಯದಲ್ಲಿ ಆಡದೇ ಇದ್ದರೆ ಯಾರು ತಂಡವನ್ನ ಮುನ್ನಡೆಸುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಉಪನಾಯಕ ಜಸ್ಪ್ರೀತ್ ಬುಮ್ರಾ ಟೀಂ ಇಂಡಿಯಾವನ್ನ ಪ್ರಮುಖ ಪಂದ್ಯದಲ್ಲಿ ಮುನ್ನಡೆಸುವಷ್ಟು ಸಮರ್ಥರೇ ಎಂಬುದು ಇನ್ನೂ ಖಚಿತವಾಗಿಲ್ಲ.

Story first published: Wednesday, June 29, 2022, 10:06 [IST]
Other articles published on Jun 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X