ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಹಿತ್ ಶರ್ಮಾ ಫಿಟ್‌ನೆಸ್: ನವೆಂಬರ್ 1ರಂದು ಸ್ಪಷ್ಟವಾಗಲಿದೆ ರೋಹಿತ್ ಆಸ್ಸ್ರೇಲಿಯಾ ಪ್ರವಾಸದ ಭವಿಷ್ಯ

Rohit Sharmas fitness: BCCI medical team to assess fitness on Sunday

ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಈ ಬಾರಿಯ ಐಪಿಎಲ್‌ನಲ್ಲಿ ಗಾಯಗೊಂಡಿದ್ದು ಕಳೆದ ಕೆಲ ಪಂದ್ಯಗಳಲ್ಲಿ ಆಡಲು ಕಣಕ್ಕಿಳಿದಿಲ್ಲ. ಈ ಮಧ್ಯೆ ಆಸ್ಟ್ರೇಲಿಯಾ ವಿರುದ್ಧದ ಬಹು ನಿರೀಕ್ಷಿತ ಪ್ರವಾಸಕ್ಕೆ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಾಗಿದ್ದು ರೋಹಿತ್ ಶರ್ಮಾ ಅವರನ್ನು ಪರಿಗಣಿಸಿಲ್ಲ.

ಆದರೆ ರೋಹಿತ್ ಶರ್ಮಾ ಅವರ ಆಯ್ಕೆಗೆ ಸಂಬಂಧಪಟ್ಟಂತೆ ಬಿಸಿಸಿಐ ಕಡೆಯಿಂದ ಮಹತ್ವದ ವಿಚಾರವೊಂದು ಬಹಿರಂಗವಾಗಿದೆ. ಗಾಯಗೊಂಡಿರುವ ರೋಹಿತ್ ಶರ್ಮಾ ಅವರನ್ನು ಬಿಸಿಸಿಐನ ವೈದ್ಯಕೀಯ ಸಿಬ್ಬಂದಿಗಳ ತಂಡ ಪರೀಕ್ಷಿಸಿ ಬಳಿಕ ನಿರ್ಧರಿಸಲಿದೆ. ಬಳಿಕ ಆಸ್ಟ್ರೇಲಿಯಾ ಪ್ರವಾಸಕ್ಕೆ ರೋಹಿತ್ ಶರ್ಮಾ ಅವರ ಪರಿಗಣನೆಯನ್ನು ನಿರ್ಧರಿಸಲಾಗುತ್ತದೆ.

ಮೂರು ಸೋಲುಗಳಿಂದ ನಮ್ಮದು ಕೆಟ್ಟ ತಂಡ ಅನ್ನಿಸಲಾರದು: ರಹಾನೆಮೂರು ಸೋಲುಗಳಿಂದ ನಮ್ಮದು ಕೆಟ್ಟ ತಂಡ ಅನ್ನಿಸಲಾರದು: ರಹಾನೆ

ಭಾನುವಾರ ಬಿಸಿಸಿಐನ ವೈದ್ಯಕೀಯ ಸಿಬ್ಬಂಧಿಗಳ ತಂಡ ರೋಹಿತ್ ಶರ್ಮಾ ಫಿಟ್‌ಟೆಸ್ ಪರೀಕ್ಷೆಯನ್ನು ನಡೆಸಲಿದೆ. ರೋಹಿತ್ ಆಸ್ಟ್ರೇಲಿಯಾ ಟೂರ್ನಿಯಲ್ಲಿ ಪಾಲ್ಗೊಳ್ಳಲು ಫಿಟ್ ಇದ್ದರೆ ಈ ವರದಿಯ ಆಧಾರದಲ್ಲಿ ಬಿಸಿಸಿಐ ಆಸ್ಟ್ರೇಲಿಯಾ ಪ್ರವಾಸಕ್ಕೆ ರೋಹಿತ್ ಶರ್ಮಾ ಅವರ ಆಯ್ಕೆಯನ್ನು ನಿರ್ಧರಿಸಲಿದೆ.

ಅಕ್ಟೋಬರ್ 18ರಂದು ನಡೆದಿದ್ದ ಪಂಜಾಬ್ ವಿರುದ್ಧ ಎರಡು ಸೂಪರ್ ಓವರ್‌ಗಳನ್ನು ಕಂಡ ಪಂದ್ಯದಲ್ಲಿ ಪಾಲ್ಗೊಂಡ ಬಳಿಕ ರೋಹಿತ್ ಶರ್ಮಾ ಐಪಿಎಲ್‌ನಲ್ಲಿ ಕಾಣಿಸಿಕೊಂಡಿಲ್ಲ. ಮಂಡಿರಜ್ಜು ಸ್ನಾಯು ಸೆಳೆತಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ವಿಶ್ರಾಂತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಆದರೆ ರೋಹಿತ್ ಈಗ ನೆಟ್ ಅಭ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

ಜೋಫ್ರಾ ಹೇಳಿದಂತೆಯೇ ನಡೆಯುತ್ತಾ?: ಆರ್ಚರ್ ಹಳೆ ಟ್ವೀಟೊಂದು ವೈರಲ್!ಜೋಫ್ರಾ ಹೇಳಿದಂತೆಯೇ ನಡೆಯುತ್ತಾ?: ಆರ್ಚರ್ ಹಳೆ ಟ್ವೀಟೊಂದು ವೈರಲ್!

ರೋಹಿತ್ ಶರ್ಮಾ ಅವರನ್ನು ಆಸ್ಟ್ರೇಲಿಯಾ ವಿರುದ್ದ ನಡೆಯಲಿರುವ ಮೂರು ಮಾದರಿಯ ಸರಣಿಯಿಂದಲೂ ಹೊರಗಿಡಲಾಗಿದೆ. ಏಕದಿನ ಹಾಗೂ ಟಿ20ಯಲ್ಲಿ ಕೆಎಲ್ ರಾಹುಲ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ.

Story first published: Saturday, October 31, 2020, 17:23 [IST]
Other articles published on Oct 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X