ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಇಲ್ಲದ್ದರಿಂದ ರೋಹಿತ್ ಫಿಟ್ನೆಸ್ ತುಂಬಾ ಪ್ರಾಮುಖ್ಯ: ಮೋರೆ

Rohit Sharmas fitness is very important in Virat Kohlis absence: Kiran More

ಸಿಡ್ನಿ: 2018-19ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯನ್ನು 2-1ರಿಂದ ಗೆದ್ದು ಇತಿಹಾಸ ನಿರ್ಮಿಸಿದ್ದ ಭಾರತದ ನಾಯಕ ವಿರಾಟ್ ಕೊಹ್ಲಿ ಈ ಬಾರಿ ಟೆಸ್ಟ್ ಸರಣಿ ಉದ್ದಕ್ಕೂ ಆಡುತ್ತಿಲ್ಲ. ಆರಂಭಿಕ ಟೆಸ್ಟ್‌ನಲ್ಲಿ ಆಡಿದ ಬಳಿಕ ಕೊಹ್ಲಿ ಪಿತೃತ್ವ ರಜೆ ಪಡೆದುಕೊಳ್ಳಲಿದ್ದಾರೆ. ಕೊಹ್ಲಿ ಅನುಪಸ್ಥಿತಿಯಲ್ಲಿ ಟೆಸ್ಟ್ ಉಪನಾಯಕರಾಗಿರುವ ಅಜಿಂಕ್ಯ ರಹಾನೆ ನಾಯಕತ್ವ ನಿರ್ವಹಿಸಲಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಆಡುವ 11 ಆಟಗಾರರನ್ನು ಪ್ರಕಟಿಸಿದ ಬಿಸಿಸಿಐಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಆಡುವ 11 ಆಟಗಾರರನ್ನು ಪ್ರಕಟಿಸಿದ ಬಿಸಿಸಿಐ

ಟೆಸ್ಟ್‌ ಕ್ರಿಕೆಟ್‌ನಲ್ಲಿ ಇತ್ತೀಚೆಗಷ್ಟೇ ಆರಂಭಿಕರಾಗಿ ಭಡ್ತಿ ಪಡೆದಿರುವ ರೋಹಿತ್ ಶರ್ಮಾ ಕೂಡ ಟೆಸ್ಟ್ ಸರಣಿಯುದ್ದಕ್ಕೂ ಟೀಮ್ ಇಂಡಿಯಾ ಪರ ಆಡುತ್ತಿಲ್ಲ. ಆರಂಭಿಕ ಎರಡು ಪಂದ್ಯಗಳನ್ನು ಶರ್ಮಾ ಮಿಸ್ ಮಾಡಿಕೊಳ್ಳಲಿದ್ದಾರೆ. ಆದರೆ ಕೊನೆಯ ಎರಡು ಟೆಸ್ಟ್ ಪಂದ್ಯಗಳಲ್ಲಿ ರೋಹಿತ್ ಪಾತ್ರ ಸರಣಿ ಗೆಲುವಿನ ನೆಲೆಯಲ್ಲಿ ತುಂಬಾ ಪ್ರಮುಖವಾಗಿದೆ ಎಂದು ಭಾರತದ ಮಾಜಿ ಕ್ರಿಕೆಟಿಗ ಕಿರಣ್ ಮೋರೆ ಹೇಳಿದ್ದಾರೆ.

ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದಿದ್ದ ಇಂಡಿಯನ್ ಪ್ರೀಮಿಯರ್ ಲೀಗ್‌ ವೇಳೆ ರೋಹಿತ್ ಶರ್ಮಾ ಹ್ಯಾಮ್‌ಸ್ಟ್ರಿಂಗ್ ಗಾಯಕ್ಕೊಳಗಾಗಿದ್ದರು. ಹೀಗಾಗಿ ಶರ್ಮಾ ಟೀಮ್ ಇಂಡಿಯಾ ಜೊತೆ ಆಸ್ಟ್ರೇಲಿಯಾಕ್ಕೆ ಬಂದಿರಲಿಲ್ಲ. ಡಿಸೆಂಬರ್ 15ರಂದು ಆಸ್ಟ್ರೇಲಿಯಾಕ್ಕೆ ಬಂದಿರುವ ಹಿಟ್‌ಮ್ಯಾನ್ ರೋಹಿತ್ ಸದ್ಯ ಕ್ವಾರಂಟೈನ್‌ನಲ್ಲಿದ್ದಾರೆ.

ಅದೃಷ್ಟ ಕರೆಯುತ್ತಿದೆ ಬನ್ನಿ, ಕೋಟ್ಯಾಧಿಪತಿಯಾಗಲು ಇಲ್ಲಿದೆ ಅವಕಾಶ!ಅದೃಷ್ಟ ಕರೆಯುತ್ತಿದೆ ಬನ್ನಿ, ಕೋಟ್ಯಾಧಿಪತಿಯಾಗಲು ಇಲ್ಲಿದೆ ಅವಕಾಶ!

'ನಿಮ್ಮಲ್ಲಿ ರೋಹಿತ್ ಮತ್ತು ವಿರಾಟ್ ಇಲ್ಲದಿದ್ದರೆ ತಂಡದ ಬ್ಯಾಲನ್ಸ್ ತಪ್ಪುತ್ತದೆ. ಇಬ್ಬರು ಬ್ಯಾಟಿಂಗ್‌ಗೆ ಹೋಗುತ್ತಿದ್ದಾರೆಂದರೆ ಎದುರಾಳಿ ತಂಡ ಹೆದರುತ್ತದೆ. ಅದು ಟೆಸ್ಟ್ ಆಗಿರಲಿ ಇಲ್ಲ ಯಾವುದೇ ಮಾದರಿಯಾಗಿರಲಿ, ರೋಹಿತ್-ಕೊಹ್ಲಿಯನ್ನು ತಡೆಯೋದು ಕಷ್ಟ. ಹೀಗಾಗಿ ಈ ಬಾರಿ ಟೆಸ್ಟ್ ತಂಡದಲ್ಲಿ ಕೊಹ್ಲಿ ಇಲ್ಲದ್ದರಿಂದ ರೋಹಿತ್ ಪಾತ್ರ ಪ್ರಮುಖವಾಗಿದೆ,' ಎಂದು ಮೋರೆ ಹೇಳಿಕೊಂಡಿದ್ದಾರೆ.

Story first published: Wednesday, December 16, 2020, 20:01 [IST]
Other articles published on Dec 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X