ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ ಫಿಟ್ನೆಸ್ ಬಗ್ಗೆ ಪೊಲಾರ್ಡ್ ಹೇಳಿದ್ದೇನು?

Rohit Sharmas Fitness Updated By Kieron Pollard

ಐಪಿಎಲ್ 13 ನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್‌ ಇಲೆವೆನ್ ಪಂಜಾಬ್ ನಡುವೆ ಭಾನುವಾರ (ಅ.18) ನಡೆದ ಎರಡು ಸೂಪರ್ ಓವರ್‌ ಪಂದ್ಯಗಳು ಕ್ರಿಕೆಟ್‌ ಇತಿಹಾಸದಲ್ಲಿ ಎಂದಿಗೂ ಮರೆಯಲಾಗದೆ ಅಚ್ಚಳಿಯದೇ ಉಳಿದಿದೆ.

ಪಂದ್ಯ ಟೈ ಆಗಿ, ಸೂಪರ್ ಓವರ್‌ ಕೂಡ ಟೈ ಆದ ಬಳಿಕ, ಎರಡನೇ ಸೂಪರ್‌ ಓವರ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಇನ್ನೆರಡು ಎಸೆತಗಳು ಬಾಕಿ ಇರುವಂತೆ ಪಂದ್ಯವನ್ನ ಗೆದ್ದು ಬೀಗಿತು.

ಮುಂಬೈ ಇಂಡಿಯನ್ಸ್ ಹೆಚ್ಚು ಸೋತಿದ್ದು ಯಾವ ತಂಡದ ವಿರುದ್ಧ ಗೊತ್ತಾ?!ಮುಂಬೈ ಇಂಡಿಯನ್ಸ್ ಹೆಚ್ಚು ಸೋತಿದ್ದು ಯಾವ ತಂಡದ ವಿರುದ್ಧ ಗೊತ್ತಾ?!

ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಪಂಜಾಬ್ ಕ್ರಿಸ್ ಜೋರ್ಡಾನ್ ಮಾಡಿದ ರನೌಟ್ ಎಡವಟ್ಟಿಗೆ ಸೂಪರ್ ಓವರ್ ಆಡುವಂತಾಯ್ತು.

ಮೊದಲ ಸೂಪರ್‌ ಓವರ್‌ನಲ್ಲಿ ಬ್ಯಾಟ್ ಮಾಡಿದ ಪಂಜಾಬ್ ಬುಮ್ರಾ ಬೌಲಿಂಗ್‌ಗೆ ಬಳಲಿ ಕೇವಲ ಐದು ರನ್‌ ಕಲೆಹಾಕಿತು. ಅತ್ತ ರಾಹುಲ್ ಟೀಮ್ ಪರ ಮೊಹಮ್ಮದ್ ಶಮಿ ಐದು ರನ್‌ಗಳನ್ನ ಡಿಫೆಂಡ್ ಮಾಡಿಕೊಂಡ ಪರಿಣಾಮ ಎರಡನೇ ಸೂಪರ್ ಓವರ್‌ಗೆ ಫಲಿತಾಂಶ ತಿರುಗಿತು.

ಎರಡನೇ ಸೂಪರ್‌ ಓವರ್‌ನಲ್ಲಿ ಮುಂಬೈ ಇಂಡಿಯನ್ಸ್ 11ರನ್‌ ಗೆ ಉತ್ತರವಾಗಿ 12 ರನ್‌ ಟಾರ್ಗೆಟ್ ಬೆನತ್ತಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನ ಕ್ರಿಸ್ ಗೇಲ್ ಮತ್ತು ಮಾಯಾಂಕ್ ಅಗರ್ವಾಲ್ ಸುಲಭವಾಗಿ 12 ರನ್ ಗಳಿಸಿ ಪಂದ್ಯವನ್ನ ಗೆಲ್ಲಿಸಿಕೊಟ್ಟರು.

ಪಂದ್ಯ ಸೋತರು ಮುಂಬೈ ಇಂಡಿಯನ್ಸ್ ಪಾಯಿಂಟ್ಸ್ ಟೇಬಲ್‌ನಲ್ಲಿ ಯಾವುದೇ ಪರಿಣಾಮ ಬೀರಿಲ್ಲ. ಎರಡನೇ ಸ್ಥಾನದಲ್ಲೇ ಉಳಿದಿರುವ ಮುಂಬೈಗೆ ನಾಯಕನೇ ಗಾಯಾಳುವಾಗಿರುವುದು ಸೋಲಿಗಿಂತ ತಲೆ ನೋವಾಗಿ ಪರಿಣಮಿಸಿದೆ.

ನಾಯಕ ರೋಹಿತ್ ಶರ್ಮಾ ಬದಲಿಗೆ, ನಿರೂಪಕರೊಂದಿಗೆ ಸಂವಹನ ನಡೆಸಿದ ಆಲ್‌ರೌಂಡರ್ ಕೀರನ್ ಪೊಲಾರ್ಡ್ ರೋಹಿತ್ ಅನುಪಸ್ಥಿತಿಯ ಕಾರಣವನ್ನು ಬಹಿರಂಗಪಡಿಸಿದರು. ರೋಹಿತ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆದರೆ ರೋಹಿತ್ ಒಬ್ಬ ಫೈಟರ್‌ ಅವರು ಕಂಬ್ಯಾಕ್ ಮಾಡುತ್ತಾರೆ ಎಂದು ರೋಹಿತ್ ಕುರಿತು ಪೊಲಾರ್ಡ್ ಹೆಚ್ಚು ಹೇಳಲು ಮುಂದಾಗಲಿಲ್ಲ.

"ಅವರು (ರೋಹಿತ್) ಆರೋಗ್ಯವಾಗಿಲ್ಲ ಎಂದು ನನಗೆ ತಿಳಿಸಲಾಯಿತು, ಅದಕ್ಕಾಗಿಯೇ ನಾನು ನಿಮ್ಮೊಂದಿಗೆ ಚಾಟ್ ಮಾಡಲು ಇಲ್ಲಿದ್ದೇನೆ. ಏನಾಗುತ್ತದೆ ಎಂದು ನಾವು ನೋಡುತ್ತೇವೆ ಆದರೆ ಅವನು ಹೋರಾಟಗಾರ "ಎಂದು ಪೊಲಾರ್ಡ್ ಪಂದ್ಯದ ನಂತರದ ಸಂದರ್ಶನದಲ್ಲಿ ಹೇಳಿದ್ದಾರೆ.

Story first published: Monday, October 19, 2020, 16:35 [IST]
Other articles published on Oct 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X