ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ vs ಭಾರತ: ದಾಖಲೆ ನಿರ್ಮಿಸಲು ರೋಹಿತ್ ಶರ್ಮಾ ಸಜ್ಜು!

Rohit Sharma’s kryptonite all set to halt opener’s surreal record against AUS

ಹೈದರಾಬಾದ್, ಮಾರ್ಚ್ 1: ಟೀಮ್ ಇಂಡಿಯಾ ಉಪ ನಾಯಕ ರೋಹಿತ್ ಶರ್ಮಾ ಅವರು ಶನಿವಾರ (ಮಾರ್ಚ್ 2) ಹೈದರಾಬಾದ್‌ನಲ್ಲಿ ನಡೆಯಲಿರುವ ಪ್ರವಾಸಿ ಆಸ್ಡ್ರೇಲಿಯಾ-ಭಾರತ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ದಾಖಲೆ ನಿರ್ಮಿಸಲು ಸಜ್ಜಾಗಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ರೋಹಿತ್ ಹೆಸರಲಿನಲ್ಲಿ ಈಗಾಗಲೇ ಏಕದಿನ ದಾಖಲೆಗಳಿವೆ.

ಏಕದಿನ ಕ್ರಿಕೆಟ್‌ನಲ್ಲಿ 400+ ರನ್ ದಾಖಲೆ: ಕುತೂಹಲಕಾರಿ ಅಂಕಿ-ಅಂಶಗಳು!ಏಕದಿನ ಕ್ರಿಕೆಟ್‌ನಲ್ಲಿ 400+ ರನ್ ದಾಖಲೆ: ಕುತೂಹಲಕಾರಿ ಅಂಕಿ-ಅಂಶಗಳು!

ಆಸ್ಟ್ರೇಲಿಯಾ ವಿರುದ್ಧ ಒಟ್ಟು 31 ಏಕದಿನ ಪಂದ್ಯಗಳನ್ನಾಡಿರುವ ರೋಹಿತ್ ಶರ್ಮಾ 1,778 ರನ್ ದಾಖಲೆ ಹೊಂದಿದ್ದಾರೆ. ಉಳಿದ ರಾಷ್ಟ್ರಗಳಿಗೆ ಹೋಲಿಸಿದರೆ ರೋಹಿತ್, ಆಸ್ಟ್ರೇಲಿಯಾ ವಿರುದ್ಧವೇ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

ವಿಶ್ವಕಪ್‌ ಆಯ್ಕೆಯಲ್ಲಿ ಐಪಿಎಲ್‌ ಪ್ರಭಾವ: ವಿರಾಟ್ ಕೊಹ್ಲಿ ಏನಂತಾರೆ?ವಿಶ್ವಕಪ್‌ ಆಯ್ಕೆಯಲ್ಲಿ ಐಪಿಎಲ್‌ ಪ್ರಭಾವ: ವಿರಾಟ್ ಕೊಹ್ಲಿ ಏನಂತಾರೆ?

ಆಸ್ಟ್ರೇಲಿಯಾ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ಬ್ಯಾಟಿಂಗ್ ಸರಾಸರಿ ಹೊಂದಿರುವ ವಿಶ್ವದ ಆಟಗಾರರ ಪಟ್ಟಿ ತೆಗೆದರೆ ಅದಲ್ಲಿ ರೋಹಿತ್ ಶರ್ಮಾ ಮುಂಚೂಣಿಯಲ್ಲಿ ನಿಲ್ಲುತ್ತಾರೆ. 31 ಪಂದ್ಯಗಳಿಂದ 65.85ರ ಸರಾಸರಿಯಂತೆ ರೋಹಿತ್ 1,778 ರನ್ ಕಲೆ ಹಾಕಿದ್ದಾರೆ.

ವಿರಾಟ್ ಕೊಹ್ಲಿ ತೃತೀಯ

ವಿರಾಟ್ ಕೊಹ್ಲಿ ತೃತೀಯ

ಆಸ್ಟ್ರೇಲಿಯಾ ವಿರುದ್ಧ ಉತ್ತಮ ಬ್ಯಾಟಿಂಗ್ ಸರಾಸರಿ ಹೊಂದಿರುವವರಲ್ಲಿ ದಕ್ಷಿಣ ಆಫ್ರಿಕಾದ ಎಬಿ ಡಿ ವಿಲಿಯರ್ಸ್ 26 ಪಂದ್ಯಗಳಲ್ಲಿ 59.52ರ ಸರಾಸರಿಯಂತೆ 1250 ರನ್ ನೊಂದಿದೆ ರೋಹಿತ್ ಬಳಿಕ ದ್ವಿತೀಯ ಸ್ಥಾನದಲ್ಲಿದ್ದಾರೆ. ಭಾರತದ ನಾಯಕ ವಿರಾಟ್ ಕೊಹ್ಲಿ (31 ಪಂದ್ಯ, 51.34 ಸರಾಸರಿ, 1335 ಒಟ್ಟು ರನ್) ತೃತೀಯ ಸ್ಥಾನದಲ್ಲಿದ್ದಾರೆ.

7 ಶತಕ, 5 ಅರ್ಧ ಶತಕ

7 ಶತಕ, 5 ಅರ್ಧ ಶತಕ

ರೋಹಿತ್ ಶರ್ಮಾ ಶ್ರೀಲಂಕಾ ವಿರುದ್ಧ ಪಂದ್ಯವನ್ನಾಡಿದ್ದು ಹೆಚ್ಚು. ಆದರೆ ಆಸೀಸ್ ವಿರುದ್ಧದ ಪಂದ್ಯಗಳಲ್ಲಿ ಹೆಚ್ಚು ಉತ್ತಮ ಸಾಧನೆ ತೋರಿಸಿದ್ದಾರೆ. ಶ್ರೀಲಂಕಾ ವಿರುದ್ಧ 45 ಪಂದ್ಯ, 1562 ರನ್, 5 ಶತಕ, 5 ಅರ್ಧ ಶತಕ, 50 ಶೇ. ಕನ್ವರ್ಷನ್ ರೇಟ್ ಹೊಂದಿದ್ದರೆ, ಆಸೀಸ್ ವಿರುದ್ಧ ದ್ವಿಶತಕವೂ ಸೇರಿ 7 ಶತಕ, 5 ಅರ್ಧಶತಕ ಮತ್ತು 58.33 ಶೇ. ಕನ್ವಷರ್ನ್ ರೇಟ್ ಹೊಂದಿದ್ದಾರೆ.

ಸ್ಟ್ರೈಕ್ ರೇಟ್‌ನಲ್ಲಿ ದ್ವಿತೀಯ

ಸ್ಟ್ರೈಕ್ ರೇಟ್‌ನಲ್ಲಿ ದ್ವಿತೀಯ

ಆಸ್ಟ್ರೇಲಿಯಾ ವಿರುದ್ಧ ಏಕದಿನದಲ್ಲಿ ಉತ್ತಮ ಸ್ಟ್ರೈಕ್ ರೇಟ್ ಹೊಂದಿರುವ ವಿಶ್ವದ ಆಟಗಾರಲ್ಲಿ ಶರ್ಮಾ ದ್ವಿತೀಯ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ಸ್ಟಾರ್ ಬ್ಯಾಟ್ಸ್ಮನ್ ಎಬಿಡಿ 26 ಪಂದ್ಯಗಳಲ್ಲಿ 99.04ರ ಸ್ಟ್ರೈಕ್ ರೇಟ್‌ನಂತೆ 1250 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ 97.26ರ ಸ್ಟ್ರೈಕ್ ರೇಟ್‌ ನೊಂದಿಗೆ ದ್ವಿತೀಯ ಸ್ಥಾನದಲ್ಲಿ, ವಿರಾಟ್ ಕೊಹ್ಲಿ (93.35) ತೃತೀಯ ಸ್ಥಾನ ಪಡೆದಿದ್ದಾರೆ.

ಮಾರ್ಕಸ್ ಮಾರಕ ಬೌಲರ್

ಮಾರ್ಕಸ್ ಮಾರಕ ಬೌಲರ್

ಆಸ್ಟ್ರೇಲಿಯಾ ಈಗಿನ ತಂಡದ ಬೌಲರ್‌ಗಳನ್ನು ಪರಿಗಣಿಸಿದರೆ ರೋಹಿತ್ ಪಾಲಿಗೆ ಮಾರ್ಕಸ್ ಸ್ಟೋಯ್ನಿಸ್ ಮಾರಕ ಬೌಲರ್. ಸ್ಟೋಯ್ನಿಸ್ 52 ಎಸೆತಗಳಿಗೆ ರೋಹಿತ್ 56 ರನ್ ಬಾರಿಸಿದ್ದಾರೆ. ಆದ್ರೆ ಮೂರು ಸಾರಿ ರೋಹಿತ್, ಸ್ಟೋಯ್ನಿಸ್‌ಗೆ ವಿಕೆಟ್ ಒಪ್ಪಿಸಿದ್ದಾರೆ.

Story first published: Friday, March 1, 2019, 17:30 [IST]
Other articles published on Mar 1, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X