ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ನ್ಯೂಜಿಲ್ಯಾಂಡ್: ಕೀವಿಸ್ ಗುಮ್ಮನಿಗೆ ಬೆದರಿದ್ರಾ ರೋಹಿತ್!

ರೋಹಿತ್ ಶರ್ಮಾ ಕಳಪೆ ಪ್ರದರ್ಶನಕ್ಕೆ ಇಲ್ಲಿದೆ ಕಾರಣ | Oneindia Kannada
 Rohit Sharma’s Numbers Pose A Big Concern For Team India

ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಪಂದ್ಯವನ್ನೂ ಟೀಮ್ ಇಂಡಿಯಾ ಎರಡನೇ ಪಂದ್ಯವನ್ನು ಕೂಡ ಭರ್ಜರಿಯಾಗಿ ಗೆದ್ದುಕೊಂಡಿದೆ. ಆದರೆ ಟೀಮ್ ಇಂಡಿಯಾದ ಒಬ್ಬ ಆಟಗಾರ ಮಾತ್ರ ಮಂಕಾದಂತೆ ಕಂಡು ಬರುತ್ತಿದೆ. ಅದು ಬೇರೆ ಯಾರೂ ಅಲ್ಲ ರೋಹಿತ್ ಶರ್ಮಾ.

ಟೀಮ್ ಇಂಡಿಯಾ ಸ್ಪೋಟಕ ಆಟಗಾರ ರೋಹಿತ್ ಶರ್ಮಾ ಸದ್ಯ ಎಲ್ಲಾ ಫಾರ್ಮ್ಯಾಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಆಟಗಾರ. ಆದರಲ್ಲೂ ಟಿ20ಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಳಿಕ ರೋಹಿತ್ ಶರ್ಮಾ ಎರಡನೇ ಅತಿಹೆಚ್ಚು ರನ್ ಗಳಿಸಿರುವ ಆಟಗಾರ. ಆದರೆ ನ್ಯೂಜಿಲ್ಯಾಂಡ್ ವಿರುದ್ಧ ರೋಹಿತ್ ಪರದಾಡುತ್ತಿದ್ದಾರೆ.

ಪ್ರಥಮ ದರ್ಜೆ ಕ್ರಿಕೆಟರ್ ವಸಂತ್ ರಾಯ್ಜಿ ಸೆಂಚುರಿಗೆ ಸಚಿನ್ ಸಾಕ್ಷಿ!ಪ್ರಥಮ ದರ್ಜೆ ಕ್ರಿಕೆಟರ್ ವಸಂತ್ ರಾಯ್ಜಿ ಸೆಂಚುರಿಗೆ ಸಚಿನ್ ಸಾಕ್ಷಿ!

ಟೀಮ್ ಇಂಡಿಯಾ ಬ್ಯಾಟ್ಸ್‌ಮನ್‌‌ಗಳು ರನ್ ಹೊಳೆ ಹರಿಸುತ್ತಿದ್ದರೆ ರೋಹಿತ್ ಶರ್ಮಾ ಮಾತ್ರ ಮುಗ್ಗರಿಸುತ್ತಿದ್ದಾರೆ. ಈ ಸರಣಿಯ ಎರಡೂ ಪಂದ್ಯಗಳಲ್ಲೂ ರೋಹಿತ್ ಶರ್ಮಾ ಎರಡಂಕಿಯನ್ನು ದಾಟಲೂ ವಿಫಲರಾಗಿದ್ದಾರೆ. ಈ ಸರಣಿ ಮಾತ್ರವಲ್ಲ ನ್ಯೂಜಿಲ್ಯಾಂಡ್ ವಿರುದ್ಧ ಟಿ20ಯಲ್ಲಿ ರೋಹಿತ್ ಶರ್ಮಾ ಸಂಪೂರ್ಣ ವಿಫಲರಾಗಿರುವುದು ಅವರ ಅಂಕಿಅಂಶಗಳೇ ತಿಳಿಸುತ್ತದೆ.

ಆರು ಇನ್ನಿಂಗ್ಸ್‌ಗಳಲ್ಲಿ ಸಿಂಗಲ್ ಡಿಜಿಟ್

ಆರು ಇನ್ನಿಂಗ್ಸ್‌ಗಳಲ್ಲಿ ಸಿಂಗಲ್ ಡಿಜಿಟ್

ರೋಹಿತ್ ಶರ್ಮಾ ನ್ಯೂಜಿಲ್ಯಾಂಡ್ ವಿರುದ್ಧ ಟಿ20 ಪಂದ್ಯಗಳಲ್ಲಿ ಆಡಿದ ಹನ್ನೊಂದು ಇನ್ನಿಂಗ್ಸ್‌ಗಳಲ್ಲಿ ಕಳಪೆ ಆಟ ಪ್ರದರ್ಶಿಸಿದ್ದಾರೆ. ಹತ್ತು ರನ್‌ಗಳಿಸುವ ಮುನ್ನವೇ ರೋಹಿತ್ ಶರ್ಮಾ ಏಳು ಬಾರಿ ಔಟ್ ಆಗಿದ್ದಾರೆ. ಇದು ರೋಹಿತ್ ಶರ್ಮಾ ಅವರ ಕೀವಿಸ್ ವಿರುದ್ಧದ ಕಳಪೆ ಸಾಧನೆಯನ್ನು ತೋರಿಸುತ್ತದೆ.

ಸರಾಸರಿಯೂ ಕಳಪೆ

ಸರಾಸರಿಯೂ ಕಳಪೆ

ನ್ಯೂಜಿಲ್ಯಾಂಡ್ ವಿರುದ್ಧ ರೋಹಿತ್ ಶರ್ಮಾ ಟಿ20 ಸರಾಸರಿ ಕೂಡ ಕಳಪೆ ಪ್ರದರ್ಶನಕ್ಕೆ ಸಾಕ್ಷಿ ಹೇಳುತ್ತಿದೆ. ನ್ಯೂಜಿಲ್ಯಾಂಡ್ ವಿರುದ್ಧ ರೋಹಿತ್ ಶರ್ಮಾ 22.77 ರಷ್ಟು ಸರಾಸರಿಯನ್ನು ಹೊಂದಿದ್ದಾರೆ. ಇದು ಕೀವಿಸ್ ವಿರುದ್ಧ ಕನಿಷ್ಟ ಹತ್ತು ಇನ್ನಿಂಗ್ಸ್‌ಗಳನ್ನು ಆಡಿದ ಆಟಗಾರರ ಪೈಕಿ ನಾಲ್ಕನೇ ಅತಿ ಕನಿಷ್ಟ ಸರಾಸರಿಯಾಗಿದೆ.

ಭಾರತ vs ನ್ಯೂಜಿಲೆಂಡ್‌, 2ನೇ ಟಿ20 : ಎರಡನೇ ಪಂದ್ಯದಲ್ಲೂ ಟೀಮ್ ಇಂಡಿಯಾ ಭರ್ಜರಿ ಗೆಲುವು

ಕನಿಷ್ಟ ಸ್ಟ್ರೈಕ್ ರೇಟ್‌

ಕನಿಷ್ಟ ಸ್ಟ್ರೈಕ್ ರೇಟ್‌

ರೋಹಿತ್ ಶರ್ಮಾ ಸಾಮಾನ್ಯ ಪಂದ್ಯಗಳಲ್ಲಿ 138.14 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಆದರೆ ನ್ಯೂಜಿಲ್ಯಾಂಡ್ ವಿರುದ್ಧ ಈ ಸ್ಟ್ರೈಕ್ ರೇಟ್ ಪ್ರಮಾಣವೂ ಕಡಿಮೆಯಾಗಿದೆ. ನ್ಯೂಜಿಲ್ಯಾಂಡ್ ವಿರುದ್ಧ 129.74 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಇದು ಕೀವಿಸ್ ವಿರುದ್ಧ ಕನಿಷ್ಟ ಐದು ಪಂದ್ಯಗಳನ್ನಾಡಿರುವ ಆಟಗಾರರ ಪೈಕಿ ಎರಡನೇ ಕನಿಷ್ಟ ಸ್ಟ್ರೈಕ್ ರೇಟ್‌ ಆಗಿದೆ.

ಸರಣಿಯಲ್ಲಿ ಇನ್ನೂ ಮೂರು ಪಂದ್ಯಗಳಿವೆ

ಸರಣಿಯಲ್ಲಿ ಇನ್ನೂ ಮೂರು ಪಂದ್ಯಗಳಿವೆ

ರೋಹಿತ್ ಶರ್ಮಾ ವಿಶ್ವದರ್ಜೆಯ ಆಟಗಾರ. ಇಂತಾ ಆಟಗಾರನಿಗೆ ಈ ಚಕ್ರವ್ಯೂಹದಿಂದ ತಪ್ಪಿಸಿಕೊಳ್ಳುವುದು ಕಷ್ಟವೇನಲ್ಲ. ಈ ಸರಣಿಯಲ್ಲಿ ಎರಡೇ ಪಂದ್ಯಗಳು ಮುಗಿದೆ. ಇನ್ನೂ ಮೂರು ಪಂದ್ಯಗಳಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಲಿದೆ. ಮುಂದಿನ ಪಂದ್ಯದಲ್ಲಿ ರೋಹಿತ್ ಕೀವಿಸ್ ವಿರುದ್ಧ ಅಬ್ಬರಿಸುವ ನಿರೀಕ್ಷೆಯಲ್ಲಿದ್ದಾರೆ ಕ್ರಿಕೆಟ್ ಅಭಿಮಾನಿಗಳು

Story first published: Sunday, January 26, 2020, 18:36 [IST]
Other articles published on Jan 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X