ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇತಿಹಾಸ ಬರೆದ ರೋಹಿತ್ ಶರ್ಮಾ, 25 ವರ್ಷಗಳ ಹಿಂದಿನ ದಾಖಲೆ ಬದಿಗೆ!

Rohit Sharma scripts history, breaks 25-year-old record in Vizag

ವಿಶಾಖಪಟ್ಟಣ, ಅಕ್ಟೋಬರ್ 5: ಭಾರತ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಆರಂಭಿಕರಾಗಿ ಬ್ಯಾಟಿಂಗ್‌ ಮಾಡಿ, ಮೊದಲ ಪಂದ್ಯದಲ್ಲೇ ಶತಕ ಬಾರಿಸಿದ್ದ ಹಿಟ್‌ಮ್ಯಾನ್‌ ರೋಹಿತ್ ಶರ್ಮಾ, ದಕ್ಷಿಣ ಆಫ್ರಿಕಾ ವಿರುದ್ಧ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.

ಭಾರತ vs ದಕ್ಷಿಣ ಆಫ್ರಿಕಾ: ಹೊಸ ಇತಿಹಾಸ ಬರೆದ ಹಿಟ್‌ಮ್ಯಾನ್ ರೋಹಿತ್!ಭಾರತ vs ದಕ್ಷಿಣ ಆಫ್ರಿಕಾ: ಹೊಸ ಇತಿಹಾಸ ಬರೆದ ಹಿಟ್‌ಮ್ಯಾನ್ ರೋಹಿತ್!

ಆಂಧ್ರ ಪ್ರದೇಶದ ವಿಶಾಖಪಟ್ಟಣದಲ್ಲಿರುವ ಡಾ. ವೈಎಸ್ ರಾಜಶೇಖರ ರೆಡ್ಡಿ ಎಸಿಎ-ವಿಡಿಸಿಎ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಶನಿವಾರ (ಅಕ್ಟೋಬರ್ 5) ನಡೆದ, ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲನೇ ಟೆಸ್ಟ್‌ನಲ್ಲಿ ರೋಹಿತ್ ಅಪರೂಪದ, ಅನೇಕ ಮೈಲುಗಲ್ಲುಗಳನ್ನು ಸ್ಥಾಪಿಸಿದ್ದಾರೆ.

ಭಾರತದ ಘಟಾನುಘಟಿಗಳ ಹಿಂದಿಕ್ಕಿ ದಾಖಲೆ ಬರೆದ ರವೀಂದ್ರ ಜಡೇಜಾ!ಭಾರತದ ಘಟಾನುಘಟಿಗಳ ಹಿಂದಿಕ್ಕಿ ದಾಖಲೆ ಬರೆದ ರವೀಂದ್ರ ಜಡೇಜಾ!

ದಕ್ಷಿಣ ಆಫ್ರಿಕಾ ವಿರುದ್ಧ ಎರಡೂ ಇನ್ನಿಂಗ್ಸ್‌ಗಳಲ್ಲಿ ಬಿರುಸಿನ ಬ್ಯಾಟಿಂಗ್‌ ನಡೆಸಿದ ರೋಹಿತ್ ಸಿಕ್ಸ್‌ ಮೇಲೆ ಸಿಕ್ಸ್‌ ಬಾರಿಸಿದರಲ್ಲದೆ, ದಾಖಲೆಗಳ ದಾಖಲೆ ಬರೆದಿದ್ದಾರೆ.

ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ

ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ

ಮೊದಲ ಇನ್ನಿಂಗ್ಸ್‌ನಲ್ಲಿ 176 ರನ್‌ ಬಾರಿಸಿದ್ದ ರೋಹಿತ್, ದ್ವಿತೀಯ ಇನ್ನಿಂಗ್ಸ್‌ನಲ್ಲೂ 127 ರನ್ ಬಾರಿಸಿದ್ದರು. ಆರಂಭಿಕ ಇನ್ನಿಂಗ್ಸ್‌ನಲ್ಲಿ 23 ಫೋರ್ಸ್‌, 6 ಸಿಕ್ಸ್ ಚಚ್ಚಿದ್ದ ಹಿಟ್‌ಮ್ಯಾನ್, ದ್ವಿತೀಯ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ, 7 ಸಿಕ್ಸ್‌ರ್ ಬಾರಿಸಿದ್ದರು. ಅಂತೂ ಆಫ್ರಿಕಾ ಎದುರಿನ ಮೊದಲ ಟೆಸ್ಟ್‌ನಲ್ಲೇ ರೋಹಿತ್ 5ನೇ ಟೆಸ್ಟ್ ಶತಕ ಪೂರೈಸಿಕೊಂಡರು.

ಅತ್ಯಧಿಕ ಸಿಕ್ಸ್‌ಗಳ ದಾಖಲೆ

ಅತ್ಯಧಿಕ ಸಿಕ್ಸ್‌ಗಳ ದಾಖಲೆ

ಎಲ್ಲಾ ಕ್ರಿಕೆಟ್‌ ಮಾದರಿಗಳಲ್ಲಿ ಒಂದೇ ಪಂದ್ಯದಲ್ಲಿ ಅತ್ಯಧಿಕ ಸಿಕ್ಸ್‌ ಬಾರಿಸಿದ ಭಾರತೀಯ ಆಟಗಾರರಲ್ಲಿ ರೋಹಿತ್ ಶರ್ಮಾ ಈಗ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಶರ್ಮಾ ಟೆಸ್ಟ್‌ನಲ್ಲಿ 13 ಸಿಕ್ಸ್‌ಗಳು (vs ದಕ್ಷಿಣ ಆಫ್ರಿಕಾ-2019), ಏಕದಿನದಲ್ಲಿ 16 ಸಿಕ್ಸ್‌ಗಳು (vs ಆಸ್ಟ್ರೇಲಿಯಾ-2013), ಟಿ20ಐ 10 ಸಿಕ್ಸ್‌ (vs ಶ್ರೀಲಂಕಾ-2017) ಬಾರಿಸಿದ್ದಾರೆ.

25 ವರ್ಷಗಳ ದಾಖಲೆ ಪತನ

25 ವರ್ಷಗಳ ದಾಖಲೆ ಪತನ

ಭಾರತದಲ್ಲಿ ನಡೆದ ಟೆಸ್ಟ್‌ ಪಂದ್ಯವೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿದ ದಾಖಲೆ ನವಜೋತ್‌ ಸಿಂಗ್ ಸಿಧು ಹೆಸರಿನಲ್ಲಿತ್ತು. 1994ರಲ್ಲಿ ಲಕ್ನೋದಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಸಿಧು 8 ಸಿಕ್ಸ್ ಚಚ್ಚಿ ಈ ದಾಖಲೆ ಉಳಿಸಿಕೊಂಡಿದ್ದರು. ಇದೀಗ 13 ಸಿಕ್ಸ್‌ಗಳಿಂದ ರೋಹಿತ್, ಸಿಧುವನ್ನು ಸರಿಗಟ್ಟಿದ್ದಾರೆ.

100+ ಬ್ಯಾಟಿಂಗ್ ಸರಾಸರಿ

100+ ಬ್ಯಾಟಿಂಗ್ ಸರಾಸರಿ

ಭಾರತದಲ್ಲಿ ನಡೆದ ಟೆಸ್ಟ್‌ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ಸರಾಸರಿ ತೆಗೆದರೆ 100+ ಬರುತ್ತದೆ. ಇದರಲ್ಲಿ 4 ಶತಕಗಳು ಮತ್ತು 6 ಅರ್ಧ ಶತಕಗಳು ಸೇರಿವೆ. ಇಲ್ಲಿಗೆ ರೋಹಿತ್ 28 ಟೆಸ್ಟ್ ಪಂದ್ಯಗಳಲ್ಲಿ 1888 ರನ್ ಗಳಿಸಿದ್ದಾರೆ.

2 ಇನ್ನಿಂಗ್ಸ್‌ಗಳಲ್ಲಿ ಶತಕ ದಾಖಲೆ

2 ಇನ್ನಿಂಗ್ಸ್‌ಗಳಲ್ಲಿ ಶತಕ ದಾಖಲೆ

ಟೆಸ್ಟ್‌ನಲ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿ ದಾಖಲೆಯಲ್ಲಿ ರೋಹಿತ್ 9ನೇ ಭಾರತೀಯನಾಗಿ ಗುರುತಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ವಿಜಯ್ ಹಝಾರೆ (116+145, vs ಆಸ್ಟ್ರೇಲಿಯಾ-1948), ಸುನಿಲ್ ಗವಾಸ್ಕರ್ (124+220, vs ವೆಸ್ಟ್ ಇಂಡೀಸ್-1971), ಸುನಿಲ್ ಗವಾಸ್ಕರ್ (111+137, vs ಪಾಕಿಸ್ತಾನ-1978), ಸುನಿಲ್ ಗವಾಸ್ಕರ್ (107+182, vs ವೆಸ್ಟ್ ಇಂಡೀಸ್-1978), ರಾಹುಲ್ ದ್ರಾವಿಡ್ 190+103, vs ನ್ಯೂಜಿಲೆಂಡ್-1999), ರಾಹುಲ್ ದ್ರಾವಿಡ್ 110+135, vs ಪಾಕಿಸ್ತಾನ-2005), ವಿರಾಟ್ ಕೊಹ್ಲಿ (115+141, vs ಆಸ್ಟ್ರೇಲಿಯಾ-2014), ಅಜಿಂಕ್ಯ ರಹಾನೆ (127+100, vs ದಕ್ಷಿಣ ಆಫ್ರಿಕಾ-2015), ರೋಹಿತ್ ಶರ್ಮಾ (176+127, vs ದಕ್ಷಿಣ ಆಫ್ರಿಕಾ-2019) ಇದ್ದಾರೆ.

Story first published: Saturday, October 5, 2019, 18:12 [IST]
Other articles published on Oct 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X