ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸೀಸ್‌ ವಿರುದ್ಧ ವಿಶ್ವ ದಾಖಲೆ ಬರೆದ ಗಬ್ಬರ್‌-ಹಿಟ್‌ಮ್ಯಾನ್‌ ಜೋಡಿ!

ICC World Cup 2019 : ಯಾರೂ ಮಾಡದ ಸಾಧನೆಯನ್ನು ಮಾಡಿದ ರೋಹಿತ್, ಧವನ್ ಜೋಡಿ..?
Rohit Sharma, Shikkhar Dhawan Become most successful opening pair vs AUS in ODIs

ಲಂಡನ್‌, ಜೂನ್‌ 09: ಪ್ರಸಕ್ತ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಬ್ಯಾಟಿಂಗ್‌ ನಡೆಸಿದ ಟೀಮ್‌ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋಹಿತ್‌ ಶರ್ಮಾ ಮತ್ತು ಶಿಖರ್‌ ಧವನ್‌ ದಾಖಲೆಗಳ ಮೇಲೆ ದಾಖಲೆ ಬರೆದಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಪಂದ್ಯದಲ್ಲಿ ಟೀಮ್‌ ಇಂಡಿಯಾಗೆ ಬೃಹತ್‌ ಮೊತ್ತಕ್ಕೆ ಬೇಕಿದ್ದ ಭದ್ರ ಅಡಿಪಾಯ ಹಾಕಿಕೊಟ್ಟ ಗಬ್ಬರ್‌-ಹಿಟ್‌ಮ್ಯಾನ್‌ ಜೋಡಿ ಮೊದಲ ವಿಕೆಟ್‌ಗೆ 135 ಎಸೆತಗಳಲ್ಲಿ 127 ರನ್‌ಗಳ ಜೊತೆಯಾಟ ನಡೆಸಿದರು. ಈ ಜೊತೆಯಾಟದ ಮೂಲಕ ವೆಸ್ಟ್‌ ಇಂಡೀಸ್‌ನ ದಂತಕತೆಗಳಾದ ಗಾರ್ಡನ್‌ ಗ್ರೀನಿಡ್ಜ್‌ ಮತ್ತು ಡೇಸ್ಮಂಡ್‌ ಹೈನೆಸ್‌ ಅವರ ದಾಖಲೆ ಅಳಿಸಿ ಹಾಕಿದ್ದಾರೆ.

ತಲೆಗೆ ಬಿದ್ದ ಬೌನ್ಸರ್‌ ಪೆಟ್ಟಿನಿಂದ ಚೇತರಿಸಿದ ರಶೀದ್‌ ಖಾನ್‌!ತಲೆಗೆ ಬಿದ್ದ ಬೌನ್ಸರ್‌ ಪೆಟ್ಟಿನಿಂದ ಚೇತರಿಸಿದ ರಶೀದ್‌ ಖಾನ್‌!

ವೆಸ್ಟ್‌ ಇಂಡೀಸ್‌ನ ಈ ಆರಂಭಿಕ ಬ್ಯಾಟ್ಸ್‌ಮನ್‌ಗಳ ಜೋಡಿಯು ಆಸ್ಟ್ರೇಲಿಯಾ ವಿರುದ್ಧ ಒಟ್ಟಾರೆ 1,152 ರನ್‌ಗಳನ್ನು ಜೋಡಿಸಿ ಕಾಂಗರೂ ಪಡೆಯ ಎದುರು ಒಡಿಐ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ಆರಂಭಿಕ ಜೋಡಿ ಎನಿಸಿತ್ತು. ಇದೀಗ ಈ ದಾಖಲೆ ಧವನ್‌-ರೋಹಿತ್‌ ಮುಡಿಗೇರಿದೆ. ಅಷ್ಟೇ ಅಲ್ಲದೆ ಭಾರತದ ಜೋಡಿ 22 ಇನಿಂಗ್ಸ್‌ ವೇಗವಾಗಿ ಈ ದಾಖಲೆಯನ್ನು ಮುರಿದಿರುವುದು ವಿಶೇಷ.

ಇಂಡೊ-ಆಸೀಸ್‌ ಕದನ: ನೆನಪಿನಾಳ ಕೆದಕಿದ ಸಚಿನ್‌ ತೆಂಡೂಲ್ಕರ್‌!ಇಂಡೊ-ಆಸೀಸ್‌ ಕದನ: ನೆನಪಿನಾಳ ಕೆದಕಿದ ಸಚಿನ್‌ ತೆಂಡೂಲ್ಕರ್‌!

ಇದೇ ವೇಳೆ 57 ರನ್‌ಗಳನ್ನು ಸಿಡಿಸಿ ಔಟ್‌ ಆದ ರೋಹಿತ್‌ ಶರ್ಮಾ, ಆಸ್ಟ್ರೇಲಿಯಾ ವಿರುದ್ಧ ಅತ್ಯಂತ ವೇಗವಾಗಿ 2000 ಒಡಿಐ ರನ್‌ಗಳನ್ನು ಪೂರೈಸಿದ ಸಾಧನೆ ಮಾಡುವ ಮೂಲಕ, ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರ ದಾಖಲೆಯನ್ನೂ ಮುರಿದಿದ್ದಾರೆ. ಸಚಿನ್‌, ಆಸ್ಟ್ರೇಲಿಯಾ ವಿರುದ್ಧ 40 ಇನಿಂಗ್ಸ್‌ಗಳಲ್ಲಿ 2 ಸಾವಿರ ರನ್‌ಗಳನ್ನು ಗಳಿಸಿದರೆ, ರೋಹಿತ್‌ ಕೇವಲ 37 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮೆರೆದಿದ್ದಾರೆ.

Story first published: Sunday, June 9, 2019, 17:31 [IST]
Other articles published on Jun 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X