ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ಟೆಸ್ಟ್ ಸರಣಿಗೆ ತಂಡದಲ್ಲಿ ರೋಹಿತ್ ಇರಲೇಬೇಕು: ಗಂಗೂಲಿ

Rohit Sharma should be included for Australia Test series - Ganguly

ನವದೆಹಲಿ, ಅಕ್ಟೋಬರ್ 25: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಗಾಗಿ ಭಾರತ ತಂಡದಲ್ಲಿ ರೋಹಿತ್ ಶರ್ಮಾ ಇರಲೇಬೇಕು ಎಂದು ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಹೇಳಿದ್ದಾರೆ. ಈ ವರ್ಷಾಂತ್ಯದಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದಲ್ಲಿ ರೋಹಿತ್ ಗೆ ಅವಕಾಶ ನೀಡಬೇಕೆಂದು ಗಂಗೂಲಿ ಅಭಿಪ್ರಾಯಿಸಿದ್ದಾರೆ.

ಎಂಸಿಸಿ ವರ್ಲ್ಡ್ ಕ್ರಿಕೆಟ್ ಸಮಿತಿ ಸೇರಿದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ಎಂಸಿಸಿ ವರ್ಲ್ಡ್ ಕ್ರಿಕೆಟ್ ಸಮಿತಿ ಸೇರಿದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್

ಇಂಡಿಯಾ ಟಿವಿ ಜೊತೆ ಮಾತನಾಡುತ್ತ ದಾದಾ, 'ಆಸ್ಟ್ರೇಲಿಯಾ ಪ್ರವಾಸದ ವೇಳೆ ಟೆಸ್ಟ್ ಸರಣಿಗಾಗಿ ತಂಡದಲ್ಲಿ ರೋಹಿತ್ ಶರ್ಮಾ ಅವರನ್ನು ಆಯ್ಕೆ ಸಮಿತಿ ಸೇರ್ಪಡೆಗೊಳಿಸಬೇಕು. ಕಳೆದ ಎರಡು ವರ್ಷಗಳಿಂದಲೂ ರೋಹಿತ್ ಉತ್ತಮ ಆಟವಾಡುತ್ತಿದ್ದಾರೆ' ಎಂದರು.

'ತನ್ನ ಆಟದ ಮೂಲಕವೇ ರೋಹಿತ್ ನಮ್ಮೆಲ್ಲರಲ್ಲೂ ಭರವಸೆ ಹುಟ್ಟಿಸಿದ್ದಾರೆ. ನಾಯಕತ್ವದ ವಿಚಾರದಲ್ಲಿ ಮತ್ತು ಯೋಗ್ಯತೆ ದೃಷ್ಟಿಯಲ್ಲೂ ರೋಹಿತ್ ವಿಶ್ವಾಸ ಮೂಡಿಸಿದ್ದಾರೆ. ಹಾಗಾಗಿ ಅವರನ್ನು ತಂಡದಲ್ಲಿ ಸೇರ್ಪಡೆಗೊಳಸಿಕೊಳ್ಳಬೇಕು' ಎಂದು ಬಂಗಾಳ ಹುಲಿ ಹೇಳಿದರು.

ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ರೋಹಿತ್ ಅವರನ್ನು ಹೊರಗಿಟ್ಟಿದ್ದಾಗಲೂ ಗಂಗೂಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ಆಸ್ಟ್ರೇಲಿಯಾ ಪ್ರವಾಸ ಪಂದ್ಯದ ಬಗ್ಗೆ ಟ್ವೀಟ್ ಮಾಡಿರುವ ಗಂಗೂಲಿ, ರೋಹಿತ್ ಅವರನ್ನು ಟೆಸ್ಟ್ ತಂಡದಲ್ಲಿ ಸೇರಿಸಿಕೊಳ್ಳುವಂತೆ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿಂಡೀಸ್‌ನ ಡ್ವೇಯ್ನ್ ಬ್ರಾವೋ ಗುಡ್‌ಬೈಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿಂಡೀಸ್‌ನ ಡ್ವೇಯ್ನ್ ಬ್ರಾವೋ ಗುಡ್‌ಬೈ

ಏಷ್ಯಾ ಕಪ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಉತ್ತಮ ಪ್ರದರ್ಶನ ನೀಡಿದ್ದರು. ಟೆಸ್ಟ್ ಕ್ರಿಕೆಟ್ ನಲ್ಲಿ 1,479 ರನ್ ಗಳಿಸಿರುವ ರೋಹಿತ್, 39.97 ರನ್ ಸರಾಸರಿ ಹೊಂದಿದ್ದಾರೆ. 177 ಅಧಿಕ ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾ ಪ್ರವಾಸ ಪಂದ್ಯ ನವೆಂಬರ್ 21ರಿಂದ ಆರಂಭಗೊಳ್ಳಲಿದೆ.

Story first published: Thursday, October 25, 2018, 19:51 [IST]
Other articles published on Oct 25, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X