ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಂಐ-ಸಿಎಸ್‌ಕೆ ಸೇರಿಸಿ ಬಲಿಷ್ಠ ತಂಡ ಪ್ರಕಟಿಸಿದ ರೋಹಿತ್, ಸುರೇಶ್ ರೈನಾ

Rohit Sharma, Suresh Raina pick combined MI-CSK side

ಮುಂಬೈ, ಮೇ 15: ಬೆನ್ನು ಬೆನ್ನಿಗೆ ಕ್ರಿಕೆಟ್ ಪಂದ್ಯಗಳು ಇರುತ್ತಿದ್ದರಿಂದ ಯಾವಾಗಲೂ ಬ್ಯುಸಿಯಾಗಿರುತ್ತಿದ್ದ ಕ್ರಿಕೆಟಿಗರಿಗೆಲ್ಲ ಈಗ ದೀರ್ಘ ಬಿಡುವು ದೊರೆತಿದೆ. ಕೊರೊನಾ ವೈರಸ್‌ನಿಂದ ವಿಶ್ವದ ಎಲ್ಲಾ ಕ್ರಿಕೆಟ್ ಪಂದ್ಯಗಳು ರದ್ದು, ಇಲ್ಲವೆ ಮುಂದೂಡಲ್ಪಟ್ಟಿದ್ದರಿಂದ ಮೈದಾನದಲ್ಲಿರಬೇಕಿದ್ದ ಕ್ರಿಕೆಟಿಗರೆಲ್ಲ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ. ಲೈವ್ ಚಾಟ್, ಫನ್ನಿ ವೀಡಿಯೋ, ವಿಭಿನ್ನ-ಮಾಹಿತಿಪೂರ್ಣ ಸಂದರ್ಶನಗಳ ತುಣುಕುಗಳನ್ನು ಕ್ರಿಕೆಟಿಗರು ಸೋಶಿಯಲ್ ಮೀಡಿಯಾದಲ್ಲಿ ಆಗೀಗ ಹಂಚಿಕೊಳ್ಳುತ್ತಲೇಯಿದ್ದಾರೆ.

ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ: ಶೀಘ್ರ ನಡೆಯುವುದರಲ್ಲಿದೆ ವಿನ್ಸಿ ಟಿ10 ಲೀಗ್‌!ಕ್ರಿಕೆಟ್ ಪ್ರೇಮಿಗಳಿಗೆ ಸಿಹಿ ಸುದ್ದಿ: ಶೀಘ್ರ ನಡೆಯುವುದರಲ್ಲಿದೆ ವಿನ್ಸಿ ಟಿ10 ಲೀಗ್‌!

ಈ ಬಾರಿ ಭಾರತದ ಬ್ಯಾಟ್ಸ್‌ಮನ್ ಸುರೇಶ್ ರೈನಾ ಮತ್ತು ಭಾರತದ ಉಪನಾಯಕ ರೋಹಿತ್ ಶರ್ಮಾ ಇಬ್ಬರೂ ಸೇರಿ, ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳಿಂದ ಆಟಗಾರರನ್ನು ಹೆಕ್ಕಿ ಬಲಿಷ್ಠ ತಂಡವನ್ನು ಪ್ರಕಟಿಸಿದ್ದಾರೆ. ಇನ್‌ಸ್ಟಾಗ್ರಾಮ್‌ ಲೈವ್‌ನಲ್ಲಿ ಕಾಣಿಸಿಕೊಂಡಿದ್ದ ರೋಹಿತ್, ರೈನಾ ತಮ್ಮ ಬೆಸ್ಟ್ ಐಪಿಎಲ್ ತಂಡ ಆರಿಸಿದ್ದಾರೆ.

ಐಪಿಎಲ್ ನಡೆಯದಿದ್ದರೆ ಬಿಸಿಸಿಐಗೆ ಭಾರೀ ನಷ್ಟ : ಸಂಬಳ ಕಡಿತದ ಸುಳಿವು ನೀಡಿದ ಗಂಗೂಲಿಐಪಿಎಲ್ ನಡೆಯದಿದ್ದರೆ ಬಿಸಿಸಿಐಗೆ ಭಾರೀ ನಷ್ಟ : ಸಂಬಳ ಕಡಿತದ ಸುಳಿವು ನೀಡಿದ ಗಂಗೂಲಿ

ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಮತ್ತು ಮುಂಬೈ ಎರಡೂ ಹೆಚ್ಚು ಯಶಸ್ವಿ ತಂಡಗಳು ಎಂದಾದರೆ, ಈ ತಂಡಗಳಿಂದ ಆಟಗಾರರನ್ನು ಆರಿಸಿ, ರೋಹಿತ್ ಮತ್ತು ರೈನಾ ಕಟ್ಟಿದ ಸಾರ್ವಕಾಲಿಕ ಬೆಸ್ಟ್ ತಂಡ ಎಷ್ಟು ಬಲಿಷ್ಠವಾಗಿದ್ದೀತು ಅಲ್ಲವೆ?

ಕೂಲ್ ಕ್ಯಾಪ್ಟನ್ ಧೋನಿ ನಾಯಕ

ಕೂಲ್ ಕ್ಯಾಪ್ಟನ್ ಧೋನಿ ನಾಯಕ

ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್‌ನ ಎಲ್ಲಾ ಸೀಸನ್‌ಗಳಲ್ಲಿ ಪ್ಲೇ ಆಫ್‌ಗೆ ಪ್ರವೇಶಿಸಿದ ಹೆಗ್ಗಳಿಕೆ ಹೊಂದಿದೆ. 3 ಬಾರಿ ಚಾಂಪಿಯನ್ ಪಟ್ಟ ಕೂಡ ಗೆದ್ದಿದೆ. ಐಪಿಎಲ್‌ನಲ್ಲಿ ಯಶಸ್ವಿ ನಾಯಕನೆಂಬ ಹೆಸರು ಟೀಮ್ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿಯವರದ್ದು. ಹೀಗಾಗಿ ರೋಹಿತ್-ರೈನಾ ಅವರ ನೆಚ್ಚಿನ ಐಪಿಎಲ್ ತಂಡದಲ್ಲೂ ಧೋನಿ ನಾಯಕರಾಗಿ ಕಾಣಿಸಿಕೊಂಡಿದ್ದಾರೆ.

ತಂಡದಲ್ಲಿರುವ ದಂತಕತೆಗಳು

ತಂಡದಲ್ಲಿರುವ ದಂತಕತೆಗಳು

ಸುರೇಶ್ ರೈನಾ, ರೋಹಿತ್ ಶರ್ಮಾ ಹೆಕ್ಕಿದ ಆಲ್ ಟೈಮ್ ಐಪಿಎಲ್ ತಂಡದಲ್ಲಿ ದಂತ ಕತೆಗಳು ಕಾಣಿಸಿಕೊಂಡಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಆಸ್ಟ್ರೇಲಿಯಾದ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್, ಭಾರತದ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

ಸ್ಫೋಟಕ ಬ್ಯಾಟ್ಸ್‌ಮನ್‌ಗಳು

ಸ್ಫೋಟಕ ಬ್ಯಾಟ್ಸ್‌ಮನ್‌ಗಳು

ರೈನಾ-ರೋಹಿತ್ ಹೆಸರಿಸಿದ, ಸಿಎಸ್‌ಕೆ-ಎಂಐನಿಂದ ಆರಿಸಿದ ಆಟಗಾರರ ತಂಡದಲ್ಲಿ ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್‌ನಂತ ಸ್ಫೋಟಕ ಬ್ಯಾಟ್ಸ್‌ಮನ್‌ಗಳಿದ್ದರೆ, ಪಾಂಡ್ಯ ಜೊತೆ ಡ್ವೇನ್ ಬ್ರಾವೋ, ರವೀಂದ್ರ ಜಡೇಜಾನಂತ ಆಲ್‌ ರೌಂಡರ್‌ಗಳೂ ಇದ್ದಾರೆ.

ಸಿಎಸ್‌ಕೆ, ಮುಂಬೈ ಮಿಕ್ಸ್ಡ್‌ ಟೀಮ್

ಸಿಎಸ್‌ಕೆ, ಮುಂಬೈ ಮಿಕ್ಸ್ಡ್‌ ಟೀಮ್

ಸಚಿನ್ ತೆಂಡೂಲ್ಕರ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್ (ವೆಸ್ಟ್ ಇಂಡೀಸ್), ಜಸ್‌ಪ್ರೀತ್ ಬೂಮ್ರಾ, ಅಂಬಾಟಿ ರಾಯುಡು, ಮ್ಯಾಥ್ಯೂ ಹೇಡನ್ (ಆಸ್ಟ್ರೇಲಿಯಾ), ಫಾ ಡು ಪ್ಲೆಸಿಸ್ (ದಕ್ಷಿಣ ಆಫ್ರಿಕಾ), ಎಂ.ಎಸ್. ಧೋನಿ (ಸಿ), ಡ್ವೇನ್ ಬ್ರಾವೋ (ವೆಸ್ಟ್ ಇಂಡೀಸ್), ರವೀಂದ್ರ ಜಡೇಜಾ, ಹರ್ಭಜನ್ ಸಿಂಗ್.

Story first published: Friday, May 15, 2020, 19:40 [IST]
Other articles published on May 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X