ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ಹಿಂದಿಕ್ಕಿ ಟಿ20ಐ ವಿಶಿಷ್ಠ ದಾಖಲೆ ಬರೆದ ರೋಹಿತ್ ಶರ್ಮಾ

Rohit Sharma surpasses Virat Kohli to shatter massive T20I record

ಲಾಡರ್‌ಹಿಲ್, ಆಗಸ್ಟ್ 5: ಅಂತಾರಾಷ್ಟ್ರೀಯ ಟಿ20ಯಲ್ಲಿ ವಿಶೇಷ ದಾಖಲೆಯೊಂದಕ್ಕಾಗಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರನ್ನು ಉಪನಾಯಕ ರೋಹಿತ್ ಶರ್ಮಾ ಸರಿಗಟ್ಟಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ರೋಹಿತ್ ಈ ಅಪರೂಪದ ಸಾಧನೆ ಮೆರೆದರು (ಚಿತ್ರಕೃಪೆ: ಬಿಸಿಸಿಐ).

ಅಂತಾರಾಷ್ಟ್ರೀಯ ಟಿ20: ಹಿಟ್‌ಮ್ಯಾನ್‌ ಮುಡಿಗೆ ಸಿಕ್ಸರ್‌ಗಳ ವಿಶ್ವದಾಖಲೆ!ಅಂತಾರಾಷ್ಟ್ರೀಯ ಟಿ20: ಹಿಟ್‌ಮ್ಯಾನ್‌ ಮುಡಿಗೆ ಸಿಕ್ಸರ್‌ಗಳ ವಿಶ್ವದಾಖಲೆ!

ಫ್ಲೊರಿಡಾd ಲಾಡರ್‌ಹಿಲ್‌ನ ಸೆಂಟ್ರಲ್ ಬ್ರೋವರ್ಡ್ ರೀಜಿನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್‌ನಲ್ಲಿ ಭಾನುವಾರ (ಆಗಸ್ಟ್ 4) ನಡೆದ ಎರಡನೇ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ 67 ರನ್ ಬಾರಿಸಿದ್ದರು. ಪಂದ್ಯವನ್ನು ಪ್ರವಾಸಿ ಭಾರತ (ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ) 22 ರನ್‌ಗಳಿಂದ ಜಯಿಸಿದೆ.

ಗ್ಲೋಬಲ್‌ ಟಿ20 ಕ್ರಿಕೆಟ್‌ ಕೆನಡಾದಲ್ಲಿ ಯುವರಾಜ್‌ 'ಸಿಂಗ್‌ ಈಸ್‌ ಕಿಂಗ್‌'ಗ್ಲೋಬಲ್‌ ಟಿ20 ಕ್ರಿಕೆಟ್‌ ಕೆನಡಾದಲ್ಲಿ ಯುವರಾಜ್‌ 'ಸಿಂಗ್‌ ಈಸ್‌ ಕಿಂಗ್‌'

ಭಾನುವಾರದ ಪಂದ್ಯದಲ್ಲಿ ರೋಹಿತ್ ಶರ್ಮಾ ವಿಶಿಷ್ಠ ದಾಖಲೆಗೆ ಸಂಬಂಧಿಸಿ ಇಲ್ಲೊಂದಿಷ್ಟು ಮಾಹಿತಿಯಿದೆ.

21ನೇ 50+ ರನ್ ದಾಖಲೆ

21ನೇ 50+ ರನ್ ದಾಖಲೆ

ಆಗಸ್ಟ್ 4ರ ಪಂದ್ಯಕ್ಕೂ ಮುನ್ನ ರೋಹಿತ್ ಅಂತಾರಾಷ್ಟ್ರೀಯ ಟಿ20ಯಲ್ಲಿ 20 ಸಾರಿ 50+ ರನ್ ದಾಖಲೆ ಹೊಂದಿದ್ದರು. ಭಾನುವಾರ ರೋಹಿತ್ 51 ಎಸೆತಗಳಿಗೆ 67 ರನ್ ಸೇರಿಸಿದರು. ಈಗ ರೋಹಿತ್ ಟಿ20ಐಯಲ್ಲಿ ಒಟ್ಟು 17 ಅರ್ಧ ಶತಕ ಮತ್ತು 4 ಶತಕಗಳನ್ನು ಬಾರಿಸಿದಂತಾಗಿದೆ. ಅಂದರೆ ರೋಹಿತ್ ಶತಕಗಳನ್ನು 50+ ರನ್ ಆಗಿ ಪರಿಗಣಿಸಿದರೆ ಒಟ್ಟು 21 ಸಾರಿ 50+ ರನ್ ಬಾರಿಸಿದಂತಾಗುತ್ತದೆ.

ಕೊಹ್ಲಿ ದಾಖಲೆ ಬದಿಗೆ

ಕೊಹ್ಲಿ ದಾಖಲೆ ಬದಿಗೆ

ಅಂತಾರಾಷ್ಟ್ರೀಯ ಟಿ20 ಶತಕಗಳನ್ನು ಪರಿಣಿಸಿದರೂ, 50+ ರನ್ ಪರಿಗಣಿಸಿದರೂ ರೋಹಿತ್ ಶರ್ಮಾ, ಕೊಹ್ಲಿಗಿಂತ ಮೇಲೆ ನಿಲ್ಲುತ್ತಾರೆ. ಕೊಹ್ಲಿ ಮಾತ್ರವಲ್ಲ ಈ ಸಾಧನೆಗಾಗಿ ವಿಶ್ವದಲ್ಲೇ ಮುಂಚೂಣಿ ಆಟಗಾರರಾಗಿ ರೋಹಿತ್ ಕಾಣಿಸುತ್ತಾರೆ. ಕೊಹ್ಲಿ 63 ಇನ್ನಿಂಗ್ಸ್‌ಗಳಲ್ಲಿ 0 ಶತಕ, 20 ಸಾರಿ 50+ ರನ್ ದಾಖಲೆ ಹೊಂದಿದ್ದರೆ, ರೋಹಿತ್ 87 ಇನ್ನಿಂಗ್ಸ್‌ಗಳಲ್ಲಿ 4 ಶತಕ, 17 ಅರ್ಧ ಶತಕ, 21 ಸಾರಿ 50+ ರನ್ ಮಾಡಿದ್ದಾರೆ.

3ನೇ ಸ್ಥಾನದಲ್ಲಿ ಗಪ್ಟಿಲ್

3ನೇ ಸ್ಥಾನದಲ್ಲಿ ಗಪ್ಟಿಲ್

ಟಿ20ಐ ಅತ್ಯಧಿಕ 50+ ರನ್‌ ಸಾಲಿನಲ್ಲಿ ರೋಹಿತ್, ಕೊಹ್ಲಿ ಬಳಿಕ ಅನಂತರದ ಸ್ಥಾನದಲ್ಲಿರುವ ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್, 74 ಇನ್ನಿಂಗ್ಸ್‌ಗಳಲ್ಲಿ 2 ಶತಕಗಳು ಸೇರಿ 16 50+ ರನ್, ವೆಸ್ಟ್ ಇಂಡೀಸ್‌ನ ಕ್ರಿಸ್‌ಗೇಲ್ 54 ಇನ್ನಿಂಗ್ಸ್‌ಗಳಲ್ಲಿ 2 ಶತಕ ಸೇರಿ 15 50+ ರನ್, ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕಲಮ್ 71 ಇನ್ನಿಂಗ್ಸ್‌ಗಳಲ್ಲಿ 2 ಶತಕ ಸೇರಿ 15 50+ ರನ್ ದಾಖಲೆ ಹೊಂದಿದ್ದಾರೆ.

ಪೊವೆಲ್ ಸ್ಫೋಟಕ ಅರ್ಧಶತಕ

ಪೊವೆಲ್ ಸ್ಫೋಟಕ ಅರ್ಧಶತಕ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ತಂಡ, ರೋಹಿತ್ 67, ಶಿಖರ್ ಧವನ್ 23, ವಿರಾಟ್ ಕೊಹ್ಲಿ 28, ಕೃನಾಲ್ ಪಾಂಡ್ಯ 20 ರನ್‌ನೊಂದಿಗೆ 20 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 167 ರನ್ ಮಾಡಿತ್ತು. ರೋಮನ್ ಪೊವೆಲ್ 54 ರನ್ (34 ಎಸತ) ಕೊಡುಗೆಯೊಂದಿಗೆ ವೆಸ್ಟ್ ಇಂಡೀಸ್ 15.3ನೇ ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 98 ರನ್ ಗಳಿಸಿತ್ತು. ಮಳೆ ತೊಂದರೆ ನೀಡಿದ್ದರಿಂದ ಪಂದ್ಯ ರದ್ದುಪಡಿಸಿ ಭಾರತವನ್ನು (ಡಿಎಲ್‌ಎಸ್ ನಿಯಮದ ಪ್ರಕಾರ) ವಿಜಯಿ ಎಂದು ಘೋಷಿಸಲಾಯ್ತು.

Story first published: Monday, August 5, 2019, 11:04 [IST]
Other articles published on Aug 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X