ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ವೃತ್ತಿ ಬದುಕಿನ ಕರಾಳ ಕ್ಷಣವದು': ದುಃಖಕರ ಸಂದರ್ಭ ನೆನೆದ ಹಿಟ್‌ಮ್ಯಾನ್

Rohit Sharma Talks To Kevin Pietersen About saddest moment of his career

ಮುಂಬೈ, ಮಾರ್ಚ್ 27: ಎಲ್ಲರ ಬದುಕಿನೊಳಗೂ ಏರಿಳಿತಗಳು ಇದ್ದೇ ಇದೆ. ಟೀಮ್ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ತನ್ನ ಬದುಕಿನ ಅತೀ ಕೆಟ್ಟ ಸಂದರ್ಭವನ್ನು ಸ್ಮರಿಸಿಕೊಂಡಿದ್ದಾರೆ. ಆ ದಿನ ನನ್ನ ಪಾಲಿಗೆ ಅತೀ ದುಃಖಕರವಾದ ದಿನವೆನಿಸಿತ್ತು ಎಂದು ಹಿಟ್‌ಮ್ಯಾನ್ ಹೇಳಿಕೊಂಡಿದ್ದಾರೆ. ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್ ಜೊತೆ ಮಾತನಾಡುತ್ತ ಶರ್ಮಾ ಗತಕಾಲವನ್ನು ಸ್ಮರಿಸಿಕೊಂಡಿರು.

ವಿರಾಟ್ ಕೊಹ್ಲಿಯಿಂದ ಮುರಿಯಲು ಸಾಧ್ಯವೇ ಇಲ್ಲದ 5 ದಾಖಲೆಗಳುವಿರಾಟ್ ಕೊಹ್ಲಿಯಿಂದ ಮುರಿಯಲು ಸಾಧ್ಯವೇ ಇಲ್ಲದ 5 ದಾಖಲೆಗಳು

ಪೀಟರ್ಸನ್ ಜೊತೆ ಮಾತನಾಡುತ್ತಿದ್ದ ರೋಹಿತ್ ಶರ್ಮಾ, ಚಾಟ್ ಮುಕ್ತಾಯದ ಹೊತ್ತಿನಲ್ಲಿ ಪ್ರಮುಖ ವಿಚಾರವನ್ನು ಹೇಳಿಕೊಂಡರು. ಈ ಬಾರಿಯ ಐಸಿಸಿ ವಿಶ್ವಕಪ್‌ನಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದ ರೋಹಿತ್‌ ಶರ್ಮಾ ಸುಮಾರು 9 ವರ್ಷಗಳಿಗೆ ಹಿಂದೆ ಅಂಥ ಫಾರ್ಮ್‌ನಲ್ಲಿರಲಿಲ್ಲ.

ಸಿಎಸ್‌ಕೆ ಗೆಲುವು, ಆರ್‌ಸಿಬಿ ಸೋಲಿಗೆ ಕಾರಣ ಹೇಳಿದ ರಾಹುಲ್ ದ್ರಾವಿಡ್!ಸಿಎಸ್‌ಕೆ ಗೆಲುವು, ಆರ್‌ಸಿಬಿ ಸೋಲಿಗೆ ಕಾರಣ ಹೇಳಿದ ರಾಹುಲ್ ದ್ರಾವಿಡ್!

ನ್ಯೂಜಿಲೆಂಡ್‌ಗೆ ಭಾರತ ಪ್ರವಾಸ ಕೈಗೊಂಡಿದ್ದಾಗ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆರಂಭಿಕ ಮೂರು ಪಂದ್ಯಗಳಲ್ಲಿ ಆಡಿದ್ದ ರೋಹಿತ್, ಆ ಬಳಿಕ ಗಾಯಗೊಂಡು ಭಾರತ ತಂಡದಿಂದ ಹೊರ ಬಿದ್ದವರು ಯಾವುದೇ ಪಂದ್ಯವನ್ನಾಡಿಲ್ಲ.

ವೃತ್ತಿ ಬದುಕಿನ ಕರಾಳ ಕ್ಷಣವದು

ವೃತ್ತಿ ಬದುಕಿನ ಕರಾಳ ಕ್ಷಣವದು

ಪೀಟರ್ಸನ್ ಜೊತೆ ಮಾತನಾಡಿದ ರೋಹಿತ್, 2011ರ ವಿಶ್ವಕಪ್‌ಗೆ ಟೀಮ್ ಇಂಡಿಯಾದಲ್ಲಿ ಸ್ಥಾನವೇ ಸಿಗದಿದ್ದುದು ನನ್ನ ವೃತ್ತಿ ಬದುಕಿನಲ್ಲಿ ನನಗೆ ಅತೀ ದುಃಖಕರ ಸಂಗತಿ ಎಂದು ಹೇಳಿದ್ದಾರೆ. ಅಂದಿನ ಟೂರ್ನಿಯಲ್ಲಿ ಭಾರತ ಪರ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಎಂಎಸ್ ಧೋನಿ, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್‌ನಂತ ಆಟಗಾರರು ಆಡಿದ್ದರು.

ಭಾರತದಲ್ಲೇ ನಡೆದಿದ್ದ ಟೂರ್ನಿ

ಭಾರತದಲ್ಲೇ ನಡೆದಿದ್ದ ಟೂರ್ನಿ

2011ರ ವಿಶ್ವಕಪ್‌ ಟೂರ್ನಿ ನಡೆದಿದ್ದು ಭಾರತದಲ್ಲೇ. ಇದನ್ನೇ ನೆನಪಿಸಿಕೊಂಡಿರುವ ರೋಹಿತ್, '2011ರ ವಿಶ್ವಕಪ್‌ ತಂಡಕ್ಕೆ ಆರಿಸಲ್ಪಡದಿದ್ದುದು ನನ್ನ ಪಾಲಿಗೆ ಅತೀ ಬೇಸರ ಸಂದರ್ಭವಾಗಿತ್ತು. ಅದರಲ್ಲೂ ಟೂರ್ನಿ ಭಾರತದಲ್ಲೇ ನಡೆದಿತ್ತು, ಫೈನಲ್ ಪಂದ್ಯ ನನ್ನ ತವರು ನೆಲದಲ್ಲೇ (ಮುಂಬೈ) ನಡೆದಿತ್ತು,' ಎಂದು ಬೇಸರ ತೋರಿಕೊಂಡರು.

ತಂಡಕ್ಕೆ ಆರಿಸದಿದ್ದಕ್ಕೆ ಕಾರಣ

ತಂಡಕ್ಕೆ ಆರಿಸದಿದ್ದಕ್ಕೆ ಕಾರಣ

2011ರ ವಿಶ್ವಕಪ್‌ ತಂಡದಲ್ಲಿ ಸ್ಥಾನ ಲಭಿಸದಿದ್ದಕ್ಕೆ ತಾನೇ ಕಾರಣ ಎಂದೂ ಶರ್ಮಾ ಹೇಳಿಕೊಂಡಿದ್ದಾರೆ. 'ಅಂದು ತಂಡದಲ್ಲಿ ಕಾಣಿಸದಿದ್ದಕ್ಕೆ ನನ್ನ ಪ್ರದರ್ಶನವೇ ಕಾರಣ. ಆಗ ನಾನು ಅತ್ಯುತ್ತಮ ಫಾರ್ಮ್‌ನಲ್ಲಿ ಇರಲಿಲ್ಲ,' ಎಂದು ರೋಹಿತ್ ವಿವರಿಸಿದ್ದಾರೆ.

ಭಾರತಕ್ಕೆ 2ನೇ ವಿಶ್ವಕಪ್ ಗೆಲುವು

ಭಾರತಕ್ಕೆ 2ನೇ ವಿಶ್ವಕಪ್ ಗೆಲುವು

2011ರ ವಿಶ್ವಕಪ್ ಫೈನಲ್ ಪಂದ್ಯ ಮುಂಬೈನಲ್ಲಿ ನಡೆದಿತ್ತು. ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್, ಎಂ.ಎಸ್.ಧೋನಿ (ನಾಯಕ), ಸುರೇಶ್ ರೈನಾ, ಹರ್ಭಜನ್ ಸಿಂಗ್, ಜಹೀರ್ ಖಾನ್, ಮುನಾಫ್ ಪಟೇಲ್, ಎಸ್ ಶ್ರೀಶಾಂತ್ ಪ್ಲೇಯಿಂಗ್‌ XIನಲ್ಲಿ ಆಡಿದ್ದರು. ಶ್ರೀಲಂಕಾ ವಿರುದ್ಧ ಅಂದು ಭಾರತ 6 ವಿಕೆಟ್ ಗೆಲುವು ಕಂಡಿತ್ತು. ಎಂಎಸ್ ಧೋನಿ ಪಂದ್ಯಶ್ರೇಷ್ಠ, ಯುವರಾಜ್ ಸಿಂಗ್ ಸರಣಿಶ್ರೇಷ್ಠರೆನಿಸಿದ್ದರು.

Story first published: Friday, March 27, 2020, 16:18 [IST]
Other articles published on Mar 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X