ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

33ನೇ ವರ್ಷಕ್ಕೆ ಕಾಲಿಟ್ಟ 3 ದ್ವಿಶತಕ ವೀರ: ರೋಹಿತ್ ಸಿಡಿಸಿದ ದ್ವಿಶತಕಗಳ ನೆನಪು

Rohit Sharma Turns 33: On Hitman’s Birthday Recalling Double Hundreds

ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಇಂದು 33ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಟೀಮ್ ಇಂಡಿಯಾದ ಪ್ರತಿಭಾನ್ವಿತ ಆಟಗಾರ ಟೀಮ್ ಇಂಡಿಯಾದ ಅವಿಭಾಜ್ಯ ಅಂಗವಾಗಿದ್ದಾರೆ. ಸೀಮತ ಓವರ್‌ಗಳಲ್ಲಿ ಸಾಕಷ್ಟು ದಾಖಲೆಯನ್ನು ರೋಹಿತ್ ಶರ್ಮಾ ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ.

ದೊಡ್ಡ ಇನ್ನಿಂಗ್ಸ್‌ ಅಡುವುದರಲ್ಲಿ ರೋಹಿತ್ ಶರ್ಮಾ ಎತ್ತಿದ ಕೈ. ಸ್ಪೋಟಕವಾಗಿ ಬ್ಯಾಟಿಂಗ್ ಮಾಡಬಲ್ಲ ಸಾಮರ್ಥ್ಯವಿರುವ ರೋಹಿತ್ ಶರ್ಮಾ ಅದೇ ಕಾರಣಕ್ಕೆ ಕ್ರಿಕೆಟ್ ಲೋಕದಲ್ಲಿ ಹಿಟ್‌ಮ್ಯಾನ್ ಎಂದೇ ಖ್ಯಾತಿಗಳಿಸಿದ್ದಾರೆ. ಅದರಲ್ಲೂ ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಒಂದಲ್ಲ ಎರಡಲ್ಲೂ ಮೂರು ದ್ವಿಶತಕವನ್ನು ದಾಖಲಿಸಿದ್ದಾರೆ.

ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಾಡಿರುವ ಎಲ್ಲಾ ದಾಖಲೆಗಳಿಗೂ ಕಿರೀಟವೇ ಅವರ ದ್ವಿಶತಕದ ಸಾಧನೆ. ಆ ದ್ವಿಶತಕದ ನೆನಪುಗಳನ್ನು ಈ ಸಂದರ್ಭದಲ್ಲಿ ಮಾಡೋಣ

ಒಂದು ದ್ವಿಶತಕವೇ ಕಷ್ಟ

ಒಂದು ದ್ವಿಶತಕವೇ ಕಷ್ಟ

ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸುವುದು ಅಷ್ಟು ಸುಲಭವಲ್ಲ. 2010ರಲ್ಲಿ ಸಚಿನ್ ತೆಂಡೂಲ್ಕರ್ ದ್ವಿಶತಕ ಬಾರಿಸುವವರೆಗೆ ಒಂದೂ ದ್ವಿಶತಕ ದಾಖಲಾಗಿರಲಿಲ್ಲ. ಅಂದರೆ ಏಕದಿನ ಕ್ರಿಕೆಟ್ ಆರಂಭವಾಗಿ ಬರೊಬ್ಬರಿ 39 ವರ್ಷಗಳ ನಂತರ ಮೊದಲ ದ್ವಿಶತಕ ಮೂಡಿಬಂದಿತ್ತು. ಅದಾದ ಬಳಿಕ ಈವರೆಗೆ ಹತ್ತು ದ್ವಿಶತಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲಾಗಿದೆ. ಅದರಲ್ಲಿ ಮೂರು ದ್ವಿಶತಕ ರೋಹಿತ್ ಶರ್ಮಾ ಹೆಸರಿನಲ್ಲೇ ಇದೆ.

ಶರ್ಮಾ ಮೊದಲ ದ್ವಿಶತಕಕ್ಕೆ ಸಾಕ್ಷಿಯಾಗಿದ್ದು ಬೆಂಗಳೂರು

ಶರ್ಮಾ ಮೊದಲ ದ್ವಿಶತಕಕ್ಕೆ ಸಾಕ್ಷಿಯಾಗಿದ್ದು ಬೆಂಗಳೂರು

ರೋಹಿತ್ ಶರ್ಮಾ ಮೊದಲ ದ್ವಿಶತಕವನ್ನು ಬಾರಿಸಿದ್ದು ಬೆಂಗಳೂರಿನಲ್ಲೇ. 2013ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ರೋಹಿತ್ ಈ ಸಾಧನೆಯನ್ನು ಮಾಡಿದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿತ್ತು ಟೀಮ್ ಇಂಡಿಯಾ. ರೋಹಿತ್ ಶರ್ಮಾ ಆಸ್ಟ್ರೇಲಿಯಾ ಬೌಲರ್‌ಗಳನ್ನು ಭರ್ಜರಿಯಾಗಿ ಚೆಂಡಾಡಿದರು. 158 ಎಸತಗಳನ್ನು ಎದುರಿಸಿದ ಶರ್ಮಾ ಬರೊಬ್ಬರಿ 209 ರನ್ ಸಿಡಿಸಿದರು. ರೋಹಿತ್ ಶರ್ಮಾ ಸಿಡಿಸಿದ ಈ ಭರ್ಜರಿ ದ್ವಿಶತಕದ ಸಹಾಯದಿಂದ ಭಾರತ ಆಸಿಸ್ ವಿರುದ್ಧ 383/6 ರನ್ ಗಳಿಸಿತ್ತು. ಇದನ್ನು ಬೆನ್ನತ್ತಿದ ಆಸ್ಟ್ರೇಲಿಯ 326 ರನ್ ಗಳಿಸಿ 57 ರನ್‌ಗಳಿಂದ ಸೋಲನ್ನು ಕಂಡಿತ್ತು.

ಒಂದೇ ವರ್ಷದ ಬಳಿಕ ಮತ್ತೊಂದು ಸಾಧನೆ

ಒಂದೇ ವರ್ಷದ ಬಳಿಕ ಮತ್ತೊಂದು ಸಾಧನೆ

ರೋಹಿತ್ ಶರ್ಮಾ ತನ್ನ ಮೊದಲ ದ್ವಿಶತಕವನ್ನು ಬಾರಿಸಿ ಒಂದು ವರ್ಷವಷ್ಟೇ ಕಳೆದಿತ್ತು. ಆಗ ಮತ್ತೊಮ್ಮೆ ಈ ಸಾಧನೆಯನ್ನು ಶರ್ಮಾ ಪುನರಾವರ್ತಿಸಿದ್ದರು. ಈ ಬಾರಿ ಶರ್ಮಾ ಆರ್ಭಟಕ್ಕೆ ಬಲಿಯಾಗಿದ್ದು ಶ್ರೀಲಂಕಾ. ಇದಕ್ಕೆ ವೇದಿಕೆಯಾಗಿ ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನ. ಶ್ರಲಂಕಾ ವಿರುದ್ಧ ರೊಹಿತ್ ಶರ್ಮಾ ಸಿಡಿಸಿದ್ದು ಬರೊಬ್ಬರಿ 264 ರನ್(173 ಎಸೆತ). ಏಕದಿನ ಇತಿಹಾಸದಲ್ಲಿ ದಾಖಲಾದ ಅತಿ ದೊಡ್ಡ ವೈಯಕ್ತಿಕ ಸ್ಕೋರ್ ಇದು. ಈ ಪಂದ್ಯದಲ್ಲಿ ಭಾರತ ಭರ್ಜರಿ 404/5 ರನ್ ಗಳಿಸಿತ್ತು. ಇದಕ್ಕೆ ಪ್ರತಿಯಾಗಿ ಶ್ರೀಲಂಕಾ ಕೇವಲ 251 ರನ್ ಗಳಿಸಲಷ್ಟೇ ಶಕ್ತವಾಗಿ ಶರಣಾಗಿತ್ತು.

2017ರಲ್ಲಿ ಮತ್ತೆ ಶ್ರೀಲಂಕಾ ಎದುರಾಳಿ

2017ರಲ್ಲಿ ಮತ್ತೆ ಶ್ರೀಲಂಕಾ ಎದುರಾಳಿ

2017ರಲ್ಲಿ ಮೊಹಾಲಿಯಲ್ಲಿ ನಡೆದ ಪಂದ್ಯವದು. ಇಲ್ಲಿ ರೋಹಿತ್ ಶರ್ಮಾ ನಿಧಾನವಾಗಿ ತಮ್ಮ ಇನ್ನಿಂಗ್ಸ್ ಆರಂಭಿಸಿದ್ದರು. ತಮ್ಮ ಶತಕವನ್ನು ಗಳಿಸಲು ರೋಹಿತ್ ಶರ್ಮಾ 115 ಎಸತಗಳನ್ನು ತೆಗೆದುಕೊಂಡಿದ್ದರು. ಅದಾದ ಬಳಿಕ ಲಂಕಾ ಬೌಲರ್‌ಗಳ ಮೇಲೆ ಭಯಾನಕವಾಗಿ ಎರಗಿದರು ಶರ್ಮಾ. ಮುಂದಿನ 36 ಎಸೆತಕ್ಕೆ ದ್ವಿಶತಕದ ಗುರಿಯನ್ನು ತಲಿಪಿದ್ದರು. ರೋಹಿತ್ ಶರ್ಮಾ ಈ ಇನ್ನಿಂಗ್ಸ್‌ನಲ್ಲಿ ಅಜೇಯವಾಗಿ 208 ರನ್ ಗಳಿಸಿದ್ದರು. ಇದರಲ್ಲಿ 12 ಸಿಕ್ಸ್ ಮತ್ತು 13 ಬೌಂಡರಿಗಳು ಒಳಗೊಂಡಿತ್ತು. ರೋಹಿತ್ ಶರ್ಮಾ ಸಾಹಸದಿಂದ ಈ ಪಂದ್ಯದಲ್ಲಿ ಭಾರತ 392 ರನ್ ಗಳಿಸಿದ್ದರೆ ಶ್ರೀಲಂಕಾ 251 ರನ್ ಗಳಿಸಲಷ್ಟೇ ಶಕ್ತವಾಯಿತು.

Story first published: Thursday, April 30, 2020, 13:02 [IST]
Other articles published on Apr 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X