ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ, ರೈನಾ ಜೊತೆ ವಿಶೇಷ ಪಟ್ಟಿ ಸೇರಲು ರೋಹಿತ್ ಶರ್ಮಾಗೆ ಬೇಕು ಕೇವಲ 2 ರನ್

Rohit Sharma Two Runs Away From Joining Virat Kohli And Suresh Raina In Elite List

ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಐಪಿಎಲ್‌ನ ವಿಶೇಷ ಸಾಧನೆಯ ಸನಿಹದಲ್ಲಿದ್ದಾರೆ. ಕಿಂಗ್ಸ್ ಇಲವೆನ್ ಪಂಜಾಬ್ ವಿರುದ್ಧದ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ ಈ ಸಾಧನೆಗೆ ಕೆಲವೇ ಇಂಚುಗಳಷ್ಟು ಹಿಂದಿದ್ದು ಇಂದಿನ ಪಂದ್ಯದಲ್ಲಿ ಸಾಧನೆಯನ್ನು ಮಾಡುವುದು ಖಚಿತ. ಈ ಮೂಲಕ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಹಾಗೂ ಸಿಎಸ್‌ಕೆ ಆಟಗಾರ ಸುರೇಶ್ ರೈನಾ ಮಾತ್ರವೇ ಮಾಡಿದ ಸಾಧನೆ ಜೊತೆಗೆ ತಾನೂ ಸೇರ್ಪಡೆಗೊಳ್ಳಲಿದ್ದಾರೆ ರೋಹಿತ್ ಶರ್ಮಾ.

ಹೌದು, ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಇಂದು ಐಪಿಎಲ್‌ನಲ್ಲಿ 5000 ರನ್‌ ದಾಖಲಿಸಿದ ಆಟಗಾರರ ಪಟ್ಟಿಗೆ ಸೇರ್ಪಡೆಗೊಳ್ಳುವ ಸನಿಹದಲ್ಲಿದ್ದಾರೆ. ಈ ವಿಶೇಷ ಮೈಲಿಗಲ್ಲನ್ನು ಮುಟ್ಟು ರೋಹಿತ್ ಶರ್ಮಾಗೆ ಬೇಕಿರುವುದು ಕೇವಲ 2 ರನ್ ಮಾತ್ರ. ಹೀಗಾಗಿ ರೋಹಿತ್ ಇಂದಿನ ಪಂದ್ಯದಲ್ಲಿ ಈ ಸಾಧನೆಯನ್ನು ಮಾಡುವುದು ಬಹುತೇಕ ಖಚಿತ.

ಐಪಿಎಲ್ 2020: ಇಂದು ಮುಂಬೈ ಇಂಡಿಯನ್ಸ್‌ಗೆ ಪಂಜಾಬ್ ಹುಡುಗರ ಸವಾಲ್ಐಪಿಎಲ್ 2020: ಇಂದು ಮುಂಬೈ ಇಂಡಿಯನ್ಸ್‌ಗೆ ಪಂಜಾಬ್ ಹುಡುಗರ ಸವಾಲ್

ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮುಂದಿದ್ದಾರೆ. 180 ಪಂದ್ಯಗಳಿಂದ 37.12ರ ಸರಾಸರಿಯಲ್ಲಿ 5430 ರನ್ ಗಳಿಸಿದ್ದಾರೆ ಕೊಹ್ಲಿ. ಮತ್ತೊಂದೆಡೆ 193 ಪಂದ್ಯಗಳನ್ನಾಡಿರುವ ಸುರೇಶ್ ರೈನಾ 33.34ರ ಸರಾಸರಿಯಲ್ಲಿ 5368 ರನ್ ಗಳಿಸಿದ್ದಾರೆ.

ಈ ಸಾಧನೆಯನ್ನು ಮಾಡಿದರೆ ರೋಹಿತ್ ಶರ್ಮಾ ಐಪಿಎಲ್ ಇತಿಹಾಸದಲ್ಲಿ 5000 ರನ್‌ಗಳ ಮೈಲಿಗಲ್ಲು ತಲುಪಿದ 3ನೇ ಆಟಗಾರ ಎಂಬ ಖ್ಯಾತಿಗೆ ಒಳಗಾಗಲಿದ್ದಾರೆ. ಇಂದಿನ ಪಂದ್ಯದಲ್ಲಿ 10 ರನ್‌ ಗಳಿಸಿದರೆ ಕಿಂಗ್ಸ್ ಇಲವೆನ್ ಪಂಜಾಬ್ ತಂಡದ ವಿರುದ್ಧ 600 ರನ್ ದಾಖಲಿಸಿದ ಕೀರ್ತಿಯೂ ರೋಹಿತ್ ಶರ್ಮಾ ಮುಡಿಗೇರಲಿದೆ.

ಈ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕಿಂಗ್ಸ್ ಇಲವೆನ್ ಪಂಜಾಬ್ ತಂಡಗಳು ಅದ್ಭುತ ಕ್ರಿಕೆಟ್‌ಗೆ ಸಾಕ್ಷಿಯಾಗಿದೆ. ಆದರೆ ಕ್ಲೋಸ್ ಗೇಮ್‌ಗಳನ್ನು ಗೆಲ್ಲಲು ಸಾಧ್ಯವಾಗದೇ ಎರಡೂ ತಂಡಗಳು ಕೂಡ ಸೂಪರ್ ಓವರ್‌ನಲ್ಲಿ ಸೋಲು ಕಂಡಿದೆ. 3 ಪಂದ್ಯಗಳನ್ನಾಡಿರುವ ಎರಡು ತಂಡಗಳು ಒಂದು ಗೆಲುವು ಕಂಡಿದ್ದು ಇಂದಿನ ಪಂದ್ಯದಲ್ಲಿ ಯಾರ ಪಾಲಿಗೆ ಗೆಲುವು ದೊರೆಯಲಿದೆ ಎಂದು ಕಾದು ನೊಡಬೇಕಿದೆ.

Story first published: Tuesday, October 6, 2020, 16:10 [IST]
Other articles published on Oct 6, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X