ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಭಿಮಾನಿಗಳ ನೆನೆದು ವಿಶೇಷ ಟ್ವೀಟ್ ಮಾಡಿದ ರೋಹಿತ್ ಶರ್ಮಾ

Rohit Sharma wants spectators inside stadiums again, reacts on tweet
ICC ತೆಗೆದುಕೊಂಡ ನಿರ್ಧಾರಕ್ಕೆ ರೋಹಿತ್ ಶರ್ಮಾ ಫುಲ್ ಹ್ಯಾಪಿ | Oneindia Kannada

ನವದೆಹಲಿ: ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ ಖುಷಿಯಾಗಿದ್ದಾರೆ. ಅಭಿಮಾನಿಗಳ ಎದುರಿಗೆ ಬ್ಯಾಟ್ ಬೀಸಿ ಸಂಭ್ರಮಿಸಬೇಕು ಎಂದು ಕಾಯುತ್ತಿದ್ದ ಆಕ್ರಮಣಕಾರಿ ಆಟಗಾರನಿಗೆ ಮತ್ತೆ ಅಭಿಮಾನಿಗಳ ಎದುರು ಕ್ರಿಕೆಟ್ ಆಡುವ ಅವಕಾಶ ಸಿಕ್ಕಿರುವುದು ಖುಷಿ ನೀಡಿದೆ.

ಭಾರತ-ನ್ಯೂಜಿಲೆಂಡ್ ನಡುವಿನ WTC final ದುಬಾರಿ ಟಿಕೆಟ್ ಬೆಲೆಯೆಷ್ಟು ಗೊತ್ತಾ?!ಭಾರತ-ನ್ಯೂಜಿಲೆಂಡ್ ನಡುವಿನ WTC final ದುಬಾರಿ ಟಿಕೆಟ್ ಬೆಲೆಯೆಷ್ಟು ಗೊತ್ತಾ?!

ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯದಲ್ಲಿ ಪ್ರೇಕ್ಷಕರಿಗೆ ಅವಕಾಶ ನೀಡಲಾಗಿದೆ. ಕೋವಿಡ್ ಕಾರಣ ಅಭಿಮಾನಿಗಳಿಲ್ಲದ ಖಾಲಿ ಮೈದಾನದಲ್ಲಿ ಆಡಿ ಬೇಜಾರಾಗಿದ್ದ ಶರ್ಮಾಗೆ ಅಭಿಮಾನಿಗಳು ಮತ್ತೆ ಮೈದಾನಕ್ಕೆ ಬರಲಿದ್ದಾರೆ ಅನ್ನೋ ಸಂಗತಿ ಖುಷಿ ನೀಡಿದೆ. ಈ ಖುಷಿಯನ್ನು ಶರ್ಮಾ ಟ್ವೀಟ್ ಮೂಲಕ ತೋರಿಕೊಂಡಿದ್ದಾರೆ.

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜೋ ರೂಟ್ ಹೆಸರಿನಲ್ಲಿ ಮಾತ್ರ ಇದೆ ಈ ವಿಶೇಷ ದಾಖಲೆವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜೋ ರೂಟ್ ಹೆಸರಿನಲ್ಲಿ ಮಾತ್ರ ಇದೆ ಈ ವಿಶೇಷ ದಾಖಲೆ

ಮೇ 24ರ ಗುರುವಾರ (ಮೇ 27) ಟ್ವೀಟ್ ಮಾಡಿರುವ ರೋಹಿತ್, 'ಸ್ನೇಹಿತರೆ, ನಾವು ಮತ್ತೆ ಜೊತೆಯಾಗುತ್ತಿದ್ದೇವೆ. ಇದಕ್ಕಾಗೇ ನಾನು ಕಾಯುತ್ತಿದ್ದೆ' ಎಂದು ಬರೆದುಕೊಂಡಿದ್ದಾರೆ. ಅಭಿಮಾನಿಗಳತ್ತ ಮುಖ ಮಾಡಿ ಶತಕ ಸಂಭ್ರಮಾಚರಿಸುತ್ತಿರುವ ಚಿತ್ರವನ್ನು ರೋಹಿತ್ ಟ್ವೀಟ್ ಜೊತೆ ಹಾಕಿಕೊಂಡಿದ್ದಾರೆ.

ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯ ಜೂನ್ 18-22ರವರೆಗೆ ಸೌತಾಂಪ್ಟನ್‌ನ ರೋಸ್‌ಬೌಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ 3:30 PMನಂತೆ ಪಂದ್ಯ ಆರಂಭಗೊಳ್ಳಲಿದೆ. ಈ ಪಂದ್ಯದ ಮೂಲಕ ಬಹಳ ದಿನಗಳ ನಂತರ ಅಭಿಮಾನಿಗಳು ಮೈದಾನದಲ್ಲಿದ್ದು ಪಂದ್ಯ ವೀಕ್ಷಿಸಲಿದ್ದಾರೆ.

Story first published: Friday, May 28, 2021, 9:39 [IST]
Other articles published on May 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X