ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ನಂತರ ಭಾರತ ಟಿ20 ತಂಡದ ನಾಯಕನಾಗಲು ಈತನನ್ನು ಬಿಟ್ಟರೆ ಇನ್ಯಾರಿಗೆ ಸಾಧ್ಯ!: ಬಿಸಿಸಿಐ ಅಧಿಕಾರಿ

Rohit Sharma will become T20I captain for team India after Virat Kohli says BCCI official

ಇತ್ತೀಚೆಗಷ್ಟೇ ನಡೆದ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಯುಎಇ ಆವೃತ್ತಿ ಆರಂಭವಾಗುವ ಮುನ್ನ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನಾಯಕತ್ವದ ಕುರಿತಾಗಿ ದೊಡ್ಡ ಮಟ್ಟದ ನಿರ್ಧಾರವನ್ನು ಕೈಗೊಂಡು ಘೋಷಣೆ ಹೊರಡಿಸಿದ್ದರು. ಹೌದು, ಮುಂಬರಲಿರುವ ಬಹುನಿರೀಕ್ಷಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಕ್ತಾಯಗೊಂಡ ಬಳಿಕ ಭಾರತ ಟ್ವೆಂಟಿ ಕ್ರಿಕೆಟ್ ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ವಿರಾಟ್ ಕೊಹ್ಲಿ ತೀರ್ಮಾನವನ್ನು ಕೈಗೊಂಡು ಘೋಷಣೆ ಮಾಡಿದ್ದರು.

ಟಿ20 ವಿಶ್ವಕಪ್: ಬಹು ನಿರೀಕ್ಷಿತ ಭಾರತ vs ಪಾಕಿಸ್ತಾನ ಪಂದ್ಯ ರದ್ದು?; ಸ್ಪಷ್ಟನೆ ನೀಡಿದ ಬಿಸಿಸಿಐಟಿ20 ವಿಶ್ವಕಪ್: ಬಹು ನಿರೀಕ್ಷಿತ ಭಾರತ vs ಪಾಕಿಸ್ತಾನ ಪಂದ್ಯ ರದ್ದು?; ಸ್ಪಷ್ಟನೆ ನೀಡಿದ ಬಿಸಿಸಿಐ

ಬಹಿರಂಗ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದರ ಮೂಲಕ ತಮ್ಮ ಅಭಿಮಾನಿಗಳಿಗೆ ಮತ್ತು ಕ್ರಿಕೆಟ್ ವೀಕ್ಷಕರಿಗೆ ತಾವು ಭಾರತ ಟಿ ಟ್ವೆಂಟಿ ಕ್ರಿಕೆಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ಕೊಡಲು ತೀರ್ಮಾನ ಕೈಗೊಂಡಿರುವುದರ ಹಿಂದಿನ ಕಾರಣವನ್ನು ಬಿಚ್ಚಿಟ್ಟಿದ್ದರು. ಭಾರತ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ತಂಡಗಳ ನಾಯಕತ್ವದತ್ತ ಹೆಚ್ಚಿನ ಗಮನ ಕೊಡಲು ಮತ್ತು ತಮ್ಮ ಬ್ಯಾಟಿಂಗ್ ಕುರಿತಾಗಿ ಇನ್ನಷ್ಟು ಸಮಯ ನೀಡುವ ಕಾರಣದಿಂದಾಗಿ ಈ ರೀತಿಯ ನಿರ್ಧಾರವನ್ನು ಕೈಗೊಂಡಿರುವುದಾಗಿ ವಿರಾಟ್ ಕೊಹ್ಲಿ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವದಿಂದ ಕೆಳಗಿಳಿಯುತ್ತಿರುವ ಇದರ ಹಿಂದಿನ ಕಾರಣವನ್ನು ತಿಳಿಸಿದ್ದರು.

ಹೀಗೆ ವಿರಾಟ್ ಕೊಹ್ಲಿ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬಳಿಕ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ತ್ಯಜಿಸುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಕೊಹ್ಲಿ ನಂತರ ಯಾರು ಟೀಮ್ ಇಂಡಿಯಾ ಸಾರಥ್ಯವನ್ನು ವಹಿಸಿಕೊಳ್ಳಲಿದ್ದಾರೆ ಎಂಬ ಪ್ರಶ್ನೆ ಮೂಡಿತು. ಈ ಕುರಿತಾಗಿ ಸಾಕಷ್ಟು ಚರ್ಚೆಗಳು ಕೂಡ ನಡೆದಿದ್ದು, ಭಾರತ ಕ್ರಿಕೆಟ್ ತಂಡದ ಹಲವಾರು ಪ್ರಮುಖ ಕ್ರಿಕೆಟಿಗರ ಹೆಸರು ಈ ಚರ್ಚೆಯಲ್ಲಿ ಕೇಳಿಬಂದಿತ್ತು. ಆದರೆ ಯಾವ ಆಟಗಾರ ವಿರಾಟ್ ಕೊಹ್ಲಿ ನಂತರ ಭಾರತ ಟಿ ಟ್ವೆಂಟಿ ತಂಡದ ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ ಎಂಬುದನ್ನು ಸ್ಪಷ್ಟವಾಗಿ ಬಿಸಿಸಿಐನ ಯಾವುದೇ ಸದಸ್ಯರಾಗಲಿ ಅಥವಾ ಅಧಿಕಾರಿಗಳಾಗಲಿ ಬಾಯ್ಬಿಟ್ಟಿರಲಿಲ್ಲ. ಆದರೆ ಇದೀಗ ಇತ್ತೀಚಿಗಷ್ಟೇ ಬಿಸಿಸಿಐನ ಅಧಿಕಾರಿಯೊಬ್ಬರು ಈ ಕುರಿತಾಗಿ ಮಾತನಾಡಿದ್ದು ವಿರಾಟ್ ಕೊಹ್ಲಿ ನಂತರ ಯಾರು ನಾಯಕತ್ವವನ್ನು ವಹಿಸಿಕೊಳ್ಳಲಿದ್ದಾರೆ ಎಂಬುದನ್ನು ಈ ಕೆಳಕಂಡಂತೆ ಬಿಚ್ಚಿಟ್ಟಿದ್ದಾರೆ.

ವಿರಾಟ್ ಕೊಹ್ಲಿ ನಂತರ ಈತನೇ ನಾಯಕ

ವಿರಾಟ್ ಕೊಹ್ಲಿ ನಂತರ ಈತನೇ ನಾಯಕ

"ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬಳಿಕ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿಯಲಿದ್ದು, ಆ ಸ್ಥಾನಕ್ಕೆ ಯಾರು ಆಯ್ಕೆಯಾಗಲಿದ್ದಾರೆ ಎಂಬುದರಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ರೋಹಿತ್ ಶರ್ಮಾ ಈಗಾಗಲೇ ತಂಡದ ಉಪನಾಯಕನಾಗಿದ್ದು ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ಬಳಿಕ ವಿರಾಟ್ ಕೊಹ್ಲಿಯಿಂದ ನಾಯಕತ್ವವನ್ನು ಸ್ವೀಕರಿಸಲಿದ್ದಾರೆ. ಹಾಗೂ ಅಧಿಕೃತ ಘೋಷಣೆಯನ್ನು ಬಿಸಿಸಿಐ ಟೂರ್ನಿ ಮುಗಿದ ಬಳಿಕ ಮಾಡಲಿದೆ" ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಾಯಕತ್ವದ ವಿವರ

ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಾಯಕತ್ವದ ವಿವರ

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಒಟ್ಟು ಎಷ್ಟು ಟಿ ಟ್ವೆಂಟಿ ಪಂದ್ಯಗಳಲ್ಲಿ ಕಣಕ್ಕಿಳಿದಿದೆ ಹಾಗೂ ಈ ಪಂದ್ಯಗಳ ಪೈಕಿ ಎಷ್ಟು ಪಂದ್ಯದಲ್ಲಿ ಗೆಲುವು ಸಾಧಿಸಿದೆ ಎಂಬ ಮಾಹಿತಿ ಈ ಕೆಳಕಂಡಂತಿವೆ ಓದಿ.

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ 45 ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳನ್ನಾಡಿದ್ದು 27 ಪಂದ್ಯಗಳಲ್ಲಿ ಗೆದ್ದು, 14 ಪಂದ್ಯಗಳಲ್ಲಿ ಸೋತಿದೆ ಹಾಗೂ 2 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.

ಇನ್ನು ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ 19 ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳನ್ನಾಡಿದ್ದು 15 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ ಮತ್ತು 4 ಪಂದ್ಯಗಳಲ್ಲಿ ಸೋತಿದೆ.


ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ 65.11% ಗೆಲುವನ್ನು ಸಾಧಿಸಿದ್ದರೆ, ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ 78.94% ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಹೀಗೆ ಶೇಕಡಾವಾರು ಗೆಲುವಿನಲ್ಲಿ ರೋಹಿತ್ ಶರ್ಮಾ ನಾಯಕತ್ವ ವಿರಾಟ್ ಕೊಹ್ಲಿ ನಾಯಕತ್ವಕ್ಕಿಂತ ಶಕ್ತಿಶಾಲಿಯಾಗಿದೆ.

Rohit Sharma ನಾಯಕನಾಗಿ Kohliಯನ್ನು ಬಳಸಿಕೊಂಡಿದ್ದು ಹೀಗೆ | Oneindia Kannada
ನಾಯಕನ ಘೋಷಣೆ ಯಾವಾಗ ಮತ್ತು ಉಪ ನಾಯಕ ಯಾರಾಗಬಹುದು?

ನಾಯಕನ ಘೋಷಣೆ ಯಾವಾಗ ಮತ್ತು ಉಪ ನಾಯಕ ಯಾರಾಗಬಹುದು?

ಬಿಸಿಸಿಐ ಅಧಿಕಾರಿ ತಿಳಿಸಿರುವ ಪ್ರಕಾರ ಈ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ನಂತರ ರೋಹಿತ್ ಶರ್ಮಾ ಅವರನ್ನು ಭಾರತ ಟಿ ಟ್ವೆಂಟಿ ತಂಡದ ನಾಯಕನಾಗಿ ಅಧಿಕೃತವಾಗಿ ಬಿಸಿಸಿಐ ಘೋಷಣೆ ಮಾಡಲಿದೆ. ಹಾಗೂ ರೋಹಿತ್ ಶರ್ಮಾ ನಾಯಕತ್ವದ ಪಟ್ಟಕ್ಕೆ ಏರಿದರೆ ಉಪ ನಾಯಕನ ಪಟ್ಟಕ್ಕೆ ಕೆಎಲ್ ರಾಹುಲ್ ನೇಮಕವಾಗುವ ಸಾಧ್ಯತೆಗಳು ಹೆಚ್ಚಿವೆ.

Story first published: Wednesday, October 20, 2021, 18:23 [IST]
Other articles published on Oct 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X