ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಹಿತ್ ಶರ್ಮಾ ಆಸ್ಟ್ರೇಲಿಯಾಗೆ ಪ್ರವಾಸ ಕೈಗೊಳ್ಳಲಿದ್ದಾರೆ: ಬಿಸಿಸಿಐ

Rohit Sharma will go to Australia and his travel plans are being made: BCCI

ಆಸ್ಟ್ರೇಲಿಯಾ ಪ್ರವಾಸಕ್ಕೆ ಸಂಬಂಧಪಟ್ಟಂತೆ ರೋಹಿತ್ ಶರ್ಮಾ ವಿಚಾರವಾಗಿ ಕಳೆದ ಕೆಲ ದಿನಗಳಿಂದ ಸಾಕಷ್ಟು ಗೊಂದಲಗಳು ಉಂಟಾಗುತ್ತಿದೆ. ಬಿಸಿಸಿಐ ಕಡೆಯಿಂದ ಸ್ಪಷ್ಟತೆಯ ಕೊರತೆಯ ಬಗ್ಗೆ ಭಾರತೀಯ ನಾಯಕ ವಿರಾಟ್ ಕೊಹ್ಲಿ ಹೇಳಿಕೆಯನ್ನು ನೀಡಿದ ನಂತರ ರೋಹಿತ್ ಟೀಮ್ ಇಂಡಿಯಾ ಪ್ರವಾಸದಲ್ಲಿ ಪಾಲ್ಗೊಳ್ಳದ ಬಗ್ಗೆ ವಿವಾದ ಉಂಟಾಯಿತು.

ವರ್ಚುವಲ್ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದರು. ಯುಎಇಯಿಂದ ರೋಹಿತ್ ಶರ್ಮಾ ಆಸ್ಟ್ರೇಲಿಯಾದ ಸಿಡ್ನಿಗೆ ತಂಡದ ಜೊತೆಗೆ ಪ್ರವಾಸ ಕೈಗೊಳ್ಳುವ ಬದಲು ಭಾರತಕ್ಕೆ ಮರಳಿ ಎನ್‌ಸಿಎಯಲ್ಲಿ ಪಾಲ್ಗೊಂಡ ಬಗ್ಗೆ ಕಾರಣವೇನೆಂದು ಸ್ಪಷ್ಟವಾಗಿ ತಿಳಿದಿಲ್ಲ ಎಂದು ಹೇಳಿದ್ದರು.

ಭಾರತ vs ಆಸೀಸ್: ಭಾರತೀಯರ ಕ್ಷಮೆ ಕೋರಿದ ಆ್ಯಡಂ ಗಿಲ್‌ಕ್ರಿಸ್ಟ್ಭಾರತ vs ಆಸೀಸ್: ಭಾರತೀಯರ ಕ್ಷಮೆ ಕೋರಿದ ಆ್ಯಡಂ ಗಿಲ್‌ಕ್ರಿಸ್ಟ್

ಈ ಗೊಂದಲದ ಬಗ್ಗೆ ಬಿಸಿಸಿಐ ಸ್ಪಷ್ಟತೆಯನ್ನು ನೀಡಿದ್ದು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದೆ. ರೋಹಿತ್ ಅವರ ರಿಹ್ಯಾಬ್ ಮತ್ತು ಗಾಯ ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ಪ್ರಮುಖರನ್ನು ಒಳಗೊಂಡಂತೆ ಕಾನ್ಫರೆನ್ಸ್ ಕರೆಯ ಮೂಲಕ ಬಿಸಿಸಿಐ ಭಾರತದ ವೈಟ್-ಬಾಲ್ ಉಪನಾಯಕನನ್ನು ವಿಮಾನಕ್ಕೆ ಆಸ್ಟ್ರೇಲಿಯಾಕ್ಕೆ ಸೇರಿಸಲು ಪ್ರಯತ್ನಿಸಲಾಗುತ್ತಿದೆ ಎಂಬ ಮಾಹಿತಿಯನ್ನು ನೀಡಲಾಗಿದೆ.

ಈ ಬಗ್ಗೆ ಬಿಸಿಸಿಐನ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. "ಪ್ರತಿಯೊಬ್ಬರು ಕೂಡ ಕಾನ್ಫರೆನ್ಸ್ ಕಾಲ್‌ನಲ್ಲಿ ಕೂಡಿಕೊಂಡಿದ್ದು ಎಲ್ಲರಿಗೂ ಸ್ಪಷ್ಟನೆಯನ್ನು ನೀಡಲಾಗಿದೆ. ರೊಹಿತ್ ಶರ್ಮಾ ಆಸ್ಟ್ರೇಲಿಯಾಗೆ ಪ್ರವಾಸ ಕೈಗೊಳ್ಳಲಿದ್ದಾರೆ. ಅವರ ಪ್ರವಾಸದ ಯೋಜನೆಗಳನ್ನು ಮಾಡಿಕೊಳ್ಳಲಾಗುತ್ತಿದೆ" ಎಂದು ತಿಳಿಸಿದ್ದಾರೆ.

ಮ್ಯಾಕ್ಸ್‌ವೆಲ್ ಆಟ ನೋಡಿ ಕಾಲೆಳೆದ ಕಿಂಗ್ಸ್ ಇಲೆವೆನ್ ಪಂಜಾಬ್ ಬ್ಯಾಟಿಂಗ್ ಕೋಚ್ಮ್ಯಾಕ್ಸ್‌ವೆಲ್ ಆಟ ನೋಡಿ ಕಾಲೆಳೆದ ಕಿಂಗ್ಸ್ ಇಲೆವೆನ್ ಪಂಜಾಬ್ ಬ್ಯಾಟಿಂಗ್ ಕೋಚ್

ಇನ್ನು ಇದೇ ಅಧಿಕಾರಿ ಟೀಮ್ ಇಂಡಿಯಾ ಜೊತೆಗೆ ರೋಹಿತ್ ಶರ್ಮಾ ಪ್ರವಾಸ ಕೈಗೊಳ್ಳದ ಬಗ್ಗೆಯೂ ಸ್ಪಷ್ಟತೆಯನ್ನು ನೀಡಿದ್ದಾರೆ. "ರೋಹಿತ್ ಶರ್ಮಾ ಅವರ ತಂದೆ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದರು. ಅವರು ಹೃದಯ ರೋಗಿಯೂ ಆಗಿದ್ದಾರೆ. ಈ ಬಗ್ಗೆ ಹೆಚ್ಚಿನ ಯಾರಿಗೂ ಮಾಹಿತಿಯಿಲ್ಲ. ಇದೆಲ್ಲಾ ವೈಯಕ್ತಿಕ ಸಮಸ್ಯೆಗಳು" ಎಂದು ಅಧಿಕಾರಿ ವಿವರಿಸಿರುವುದಾಗಿ ಮುಂಬೈ ಮಿರರ್ ವರದಿ ಮಾಡಿದೆ.

Story first published: Friday, November 27, 2020, 15:37 [IST]
Other articles published on Nov 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X