ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌: ಪಾಕ್‌ ವಿರುದ್ಧದ ಪಂದ್ಯದಲ್ಲಿ ಧೋನಿ ದಾಖಲೆ ಮುರಿದ ಹಿಟ್‌ಮ್ಯಾನ್‌!

ICC World Cup 2019 : ಶತಕದ ಆಟದೊಂದಿಗೆ ರೋಹಿತ್ ಮಾಡಿದ ದಾಖಲೆ ಕಮ್ಮಿ ಏನಿಲ್ಲ..!
Rohit smashes most international sixes by an Indian, breaks MS dhoni record

ಮ್ಯಾಂಚೆಸ್ಟರ್‌, ಜೂನ್‌ 16: ಟೀಮ್‌ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ, ಪ್ರಸಕ್ತ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅವರ ದಾಖಲೆಯನ್ನು ಪುಡಿಗಟ್ಟಿದ್ದಾರೆ.

ವಿಶ್ವಕಪ್‌ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ

ಪಂದ್ಯದಲ್ಲಿ ಪಾಕಿಸ್ತಾನ ಎದುರು ಕೇವಲ 34 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಹಿಟ್‌ಮ್ಯಾನ್‌ ಖ್ಯಾತಿಯ ರೋಹಿತ್‌ ಶರ್ಮಾ, ತಮ್ಮ ಮೊದಲ ಸಿಕ್ಸರ್‌ ಮೂಲಕ ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬಳಿಕ ನೋಡ ನೋಡುತ್ತಿದ್ದಂತೆಯೇ 85 ಎಸೆತಗಳಲ್ಲಿ ಶತಕ ಸಿಡಿಸಿ ಅಬ್ಬರಿಸಿದರು. ಇದು ಅವರ ಏಕದಿನ ಕ್ರಿಕೆಟ್‌ ವೃತ್ತಿ ಬದುಕಿನ 24ನೇ ಶತಕವಾಗಿದೆ. ಹಾಗೂ ವಿಶ್ವಕಪ್‌ನಲ್ಲಿ ದಾಖಲಿಸಿದ ಮೂರನೇ ಶತಕ ಕೂಡ.

ಇಂಡೊ-ಪಾಕ್‌ ಕ್ರಿಕೆಟ್‌ ಕದನ: ವಿರಾಟ್‌ ಕೊಹ್ಲಿ ನಿದ್ರೆ ಕಸಿದ ಆ ಪಂದ್ಯ!ಇಂಡೊ-ಪಾಕ್‌ ಕ್ರಿಕೆಟ್‌ ಕದನ: ವಿರಾಟ್‌ ಕೊಹ್ಲಿ ನಿದ್ರೆ ಕಸಿದ ಆ ಪಂದ್ಯ!

ಟೆಸ್ಟ್‌, ಒಡಿಐ ಮತ್ತು ಟಿ20-ಐ ಕ್ರಿಕೆಟ್‌ನಲ್ಲಿ ಧೋನಿ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮಮನ್‌ ಹಾಗೂ ಮಾಜಿ ನಾಯಕ ಕ್ಯಾಪ್ಟನ್‌ ಕೂಲ್‌ ಖ್ಯಾತಿಯ ಧೋನಿ ಒಟ್ಟು 355 ಸಿಕ್ಸರ್‌ಗಳನ್ನು ಸಿಡಿಸಿದ್ದರು. ಇದೀಗ 32 ವರ್ಷದ ಸ್ಫೋಟಕ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ 357+ ಸಿಕ್ಸರ್‌ಗಳ ಮೂಲಕ ಈ ಪಟ್ಟಿಯಲ್ಲಿ ಅಗ್ರಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.

ವಿಶ್ವಕಪ್‌: ಇಂಗ್ಲೆಂಡ್‌ ವಿರುದ್ಧ ಅಪರೂಪದ ದಾಖಲೆ ಬರೆದ ಕ್ರಿಸ್‌ ಗೇಲ್‌!ವಿಶ್ವಕಪ್‌: ಇಂಗ್ಲೆಂಡ್‌ ವಿರುದ್ಧ ಅಪರೂಪದ ದಾಖಲೆ ಬರೆದ ಕ್ರಿಸ್‌ ಗೇಲ್‌!

ಭಾರತದ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಸಿಡಿಸಿದ ಅಗ್ರ ಐವರು ಬ್ಯಾಟ್ಸ್‌ಮನ್‌ಗಳು.

ರೋಹಿತ್‌ ಶರ್ಮಾ

ರೋಹಿತ್‌ ಶರ್ಮಾ

ಅವಧಿ: 2007-2019
ಪಂದ್ಯ: 329 (ಟೆಸ್ಟ್‌, ಒಡಿಐ, ಟಿ20-ಐ)
ಸಿಕ್ಸರ್‌: 357+

ಎಂ.ಎಸ್‌ ಧೋನಿ

ಎಂ.ಎಸ್‌ ಧೋನಿ

ಅವಧಿ: 2004-2019
ಪಂದ್ಯ: 531 (ಭಾರತ/ಏಷ್ಯಾ)
ಸಿಕ್ಸರ್‌: 355+

ಸಚಿನ್‌ ತೆಂಡೂಲ್ಕರ್‌

ಸಚಿನ್‌ ತೆಂಡೂಲ್ಕರ್‌

ಅವಧಿ: 1989-2013
ಪಂದ್ಯ: 664
ಸಿಕ್ಸರ್‌: 264

ಯುವರಾಜ್‌ ಸಿಂಗ್‌

ಯುವರಾಜ್‌ ಸಿಂಗ್‌

ಅವಧಿ: 2000-2017
ಪಂದ್ಯ: 402 (ಭಾರತ/ಏಷ್ಯಾ)
ಸಿಕ್ಸರ್‌: 251

ಸೌರವ್‌ ಗಂಗೂಲಿ

ಸೌರವ್‌ ಗಂಗೂಲಿ

ಅವಧಿ: 1992-2008
ಪಂದ್ಯ: 424 (ಭಾರತ/ಏಷ್ಯಾ)
ಸಿಕ್ಸರ್‌: 247

Story first published: Sunday, June 16, 2019, 17:19 [IST]
Other articles published on Jun 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X