ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು: ವಿಶಿಷ್ಟ ಸಾಧನೆ ಮಾಡಿದ ರಾಸ್ ಟೇಯ್ಲರ್

Ross Taylor Becomes First Player To Achieve Huge Milestone

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ತಂಡದ ಅನುಭವಿ ಆಟಗಾರ ರಾಸ್ ಟೇಯ್ಲರ್ ಟೀಮ್ ಇಂಡಿಯಾ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ದೊಡ್ಡ ಮೈಲಿಗಲ್ಲೊಂದನ್ನು ಸ್ಥಾಪಿಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಟೀಮ್ ಇಂಡಿಯಾ ವಿರುದ್ಧ ಟಿ20 ಮತ್ತು ಏಕದಿನ ಸರಣಿಯಲ್ಲಿ ಅಮೋಘ ಪ್ರದರ್ಶನವನ್ನು ರಾಸ್ ಟೇಯ್ಲರ್ ನೀಡಿದರು. ಶುಕ್ರವಾರ ಮೊದಲ ಟೆಸ್ಟ್ ಪಂದ್ಯಕ್ಕೆ ವೆಲ್ಲಿಂಗ್ಟನ್ ಅಂಗಳಕ್ಕೆ ಕಣಕ್ಕಿಳಿಯುತ್ತಿದ್ದಂತೆಯೇ ಈ ದಾಖಲೆಗೆ ಪಾತ್ರರಾಗಿದ್ದಾರೆ.

ಭಾರತ vs ನ್ಯೂಜಿಲೆಂಡ್ ಟೆಸ್ಟ್ : ಟೀಮ್ ಇಂಡಿಯಾ 122/5: ಮಳೆಯಿಂದ ಮೊದಲ ದಿನದ ಆಟ ಸ್ಥಗಿತಭಾರತ vs ನ್ಯೂಜಿಲೆಂಡ್ ಟೆಸ್ಟ್ : ಟೀಮ್ ಇಂಡಿಯಾ 122/5: ಮಳೆಯಿಂದ ಮೊದಲ ದಿನದ ಆಟ ಸ್ಥಗಿತ

ಹಾಗಾದರೆ ರಾಸ್‌ ಟೇಯ್ಲರ್ ಅವರಿಂದ ದಾಖಲಾದ ಹೊಸ ಮೈಲಿಗಲ್ಲು ಯಾವುದು? ಮುಂದೆ ಓದಿ

ನೂರನೇ ಪಂದ್ಯದಲ್ಲಿ ರಾಸ್‌ ಟೇಯ್ಲರ್

ನೂರನೇ ಪಂದ್ಯದಲ್ಲಿ ರಾಸ್‌ ಟೇಯ್ಲರ್

ಟೀಮ್ ಇಂಡಿಯಾ ವಿರುದ್ಧ ವೆಲ್ಲಿಂಗ್ಟನ್‌ನ ಬಾಸಿನ್ ರಿವರ್ಸ್ ಕ್ರೀಡಾಂಗಣದಲ್ಲಿ ರಾಸ್ ಟೇಯ್ಲರ್ ಅವರು ಇಂದು ನೂರನೇ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದಾರೆ. ಈ ಪಂದ್ಯದ ಮೂಲಕ ಕ್ರಿಕೆಟ್‌ನ ಮೂರೂ ಮಾದರಿಯಲ್ಲಿ ರಾಸ್ ಟೇಯ್ಲರ್ ನೂರು ಪಂದ್ಯಗಳಲ್ಲಿ ಪ್ರತಿನಿಧಿಸಿದ ಆಟಗಾರನಾಗಿದ್ದಾರೆ.

ಯಾರೂ ಮಾಡಿಲ್ಲ ಈ ಸಾಧನೆ:

ಯಾರೂ ಮಾಡಿಲ್ಲ ಈ ಸಾಧನೆ:

ಒಬ್ಬನೇ ಆಟಗಾರ ಟಿ20, ಏಕದಿನ ಮತ್ತು ಟೆಸ್ಟ್ ಮೂರೂ ಮಾದರಿಯಲ್ಲಿ ನೂರು ಪಂದ್ಯಗಳಲ್ಲಿ ಪ್ರತಿನಿಧಿಸಿದ ದೃಷ್ಟಾಂತ ಇದು ಮೊದಲನೇ ಬಾರಿಯಾಗಿದೆ. ಹೀಗಾಗಿ ಇದೊಂದು ವಿಶಿಷ್ಟ ಮೈಲಿಗಲ್ಲಾಗಿ ಕ್ರಿಕೆಟ್ ಇತಿಹಾಸದಲ್ಲಿ ದಾಖಲಾಗಿದೆ. ರಾಸ್ ಟೇಯ್ಲರ್ ಈ ಮೈಲಿಗಲ್ಲನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದಾರೆ.

ಇತ್ತೀಚೆಗಷ್ಟೇ ಟಿ20ಯಲ್ಲಿ 100ನೇ ಪಂದ್ಯ

ಇತ್ತೀಚೆಗಷ್ಟೇ ಟಿ20ಯಲ್ಲಿ 100ನೇ ಪಂದ್ಯ

ರಾಸ್ ಟೇಯ್ಲರ್ ಇತ್ತೀಚೆಗಷ್ಟೇ ಟಿ20 ಕ್ರಿಕೆಟ್‌ನಲ್ಲಿ ನೂರನೇ ಪಂದ್ಯವನ್ನು ಆಡಿದ ಸಾಧನೆ ಮಾಡಿದ್ದಾರೆ. ಈ ಮೂಲಕ ನೂರು ಅಂತಾರಾಷ್ಟ್ರೀಯ ಟಿ20 ಪಂದ್ಯ ಆಡಿದ ಮೊದಲ ನ್ಯೂಜಿಲೆಂಡ್ ಆಟಗಾರ ಎಂಬ ಸಾಧನೆಯನ್ನು ಮಾಡಿದ್ದರು. ಟೀಮ್ ಇಂಡಿಯಾ ವಿರುದ್ಧದ ಅಂತಿಮ ಟಿ20ಯಲ್ಲಿ ಈ ಸಾಧನೆ ಮಾಡಿದ್ದಾರೆ ರಾಸ್‌ ಟೇಯ್ಲರ್ .

ನ್ಯೂಜಿಲೆಂಡ್ ಪರವಾಗಿ ದಾಖಲೆ

ನ್ಯೂಜಿಲೆಂಡ್ ಪರವಾಗಿ ದಾಖಲೆ

ರಾಸ್‌ ಟೇಯ್ಲರ್ 2006ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು 100 ಟೆಸ್ಟ್, 231 ಏಕದಿನ ಮತ್ತು 100 ಟಿ20 ಪಂದ್ಯಗಳಲ್ಲಿ ಕಣಕ್ಕಿಕಳಿದಿದ್ದಾರೆ. ನ್ಯೂಜಿಲೆಂಡ್ ತಂಡವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ಪ್ರತಿನಿಧಿಸಿ ಕೀರ್ತಿಯೂ ರಾಸ್ ಟೇಯ್ಲರ್ ಹೆಸರಿನಲ್ಲಿದೆ.

19 ಶತಕ 33 ಅರ್ಧ ಶತಕ

19 ಶತಕ 33 ಅರ್ಧ ಶತಕ

ಟೆಸ್ಟ್‌ ಕ್ರಿಕೆಟ್‌ನಲ್ಲಿ ರಾಸ್‌ ಟೇಯ್ಲೆರ್ 100 ಪಂದ್ಯಗಳಲ್ಲಿ 19 ಶತಕವನ್ನು ಮತ್ತು 33 ಅರ್ಧ ಶತಕಗಳನ್ನು ದಾಖಲಿಸಿದ ಸಾಧನೆಯನ್ನು ಮಾಡಿದ್ದಾರೆ. ಏಕದಿನದಲ್ಲಿ 21 ಶತಕ ದಾಖಲಿಸಿದ್ದು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನ್ಯೂಜಿಲೆಂಡ್ ಪರವಾಗಿ ಅತಿ ಹೆಚ್ಚು ಶತಕವನ್ನು ದಾಖಲಿಸಿದ ಕೀರ್ತಿಯೂ ಟೇಯ್ಲರ್ ಹೆಸರಿನಲ್ಲಿದೆ.

Story first published: Friday, February 21, 2020, 12:16 [IST]
Other articles published on Feb 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X