ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮುಂದಿನ ಟಿ20 ವಿಶ್ವಕಪ್‌ನಲ್ಲಿ ಭಾಗಿಯಾಗುವ ಬಗ್ಗೆ ಖಚಿತತೆಯಿಲ್ಲ ಎಂದ ಕಿವೀಸ್ ದಿಗ್ಗಜ

ross taylor not sure playing t20 wc 2021

ನ್ಯೂಜಿಲೆಂಡ್ ಕ್ರಿಕೆಟ್‌ನ ಅನುಭವಿ ಆಟಗಾರ ರಾಸ್ ಟೇಲರ್ ಮುಂದಿನ ವಿಶ್ವಕಪ್‌ನಲ್ಲಿ ಆಡುವ ಬಗ್ಗೆ ಸ್ಪಷ್ಟತೆಯನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. 2021ರಲ್ಲಿ ಭಾರತದಲ್ಲಿ ಚುಟುಕು ವಿಶ್ವಕಪ್ ಆಯೋಜನೆಯಾಗಲಿದ್ದು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದೇನೆಯೇ ಇಲ್ಲವೇ ಎಂಬುದರ ಬಗ್ಗೆ ನಾನೂ ಖಚಿತ ನಿಲುವಿಗೆ ಬಂದಿಲ್ಲ ಎಂದು ಹೇಳಿಕೊಂಡಿದ್ದಾರೆ.

2020ರ ವಿಶ್ವಕಪ್ ಆಯೋಜನೆ ಆಸ್ಟ್ರೇಲಿಯಾದಲ್ಲಿ ನಡೆಯಬೇಕಾಗಿತ್ತು. ಆದರೆ ಅದನ್ನು ಐಸಿಸಿ 2022ಕ್ಕೆ ಮುಂದೂಡುವ ನಿರ್ಧಾರವನ್ನು ತೆಗೆದುಕೊಂಡಿದೆ. ಈಗಾಗಲೇ ನಿರ್ಧಾರವಾಗಿರುವ 2021ರ ವಿಶ್ವಕಪ್ ಭಾರತದಲ್ಲೇ ನಡೆಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ.

ಸಿಪಿಎಲ್‌ನ ಯಶಸ್ವಿ ನಾಯಕ ಡ್ವೆಯ್ನ್ ಬ್ರಾವೋ ಈ ಬಾರಿ ಕೇವಲ ಆಟಗಾರ ಮಾತ್ರ!ಸಿಪಿಎಲ್‌ನ ಯಶಸ್ವಿ ನಾಯಕ ಡ್ವೆಯ್ನ್ ಬ್ರಾವೋ ಈ ಬಾರಿ ಕೇವಲ ಆಟಗಾರ ಮಾತ್ರ!

ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ನಿರ್ಧಾರದ ಬಗ್ಗೆ ರಾಸ್ ಟೇಲರ್, "ಆ ಬಗ್ಗೆ ಸ್ಪಷ್ಟತೆಯಿಲ್ಲ. ವಯಸ್ಸಾಗುತ್ತಾ ಹೋಗುತ್ತಿದ್ದಂತೆಯೇ ನಿಧಾನವಾಗುತ್ತಾ ಹೋಗುತ್ತೇವೆ. ಆದರೆ ನಿಮ್ಮ ತರಬೇತಿ, ಅನುಭವ ಹಾಗೂ ಮನೋಬಲ ಬಹಳ ಮುಖ್ಯವಾಗುತ್ತದೆ ಎಂದು ರಾಸ್ ಟೇಲರ್ ಹೇಳಿಕೆಯನ್ನು ಕ್ರಿಕ್ ಇನ್ಫೋ ವರದಿ ಮಾಡಿದೆ.

ಈ ವರ್ಷಾರಂಭದಲ್ಲಿ ಭಾರತದ ವಿರುದ್ಧದ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಪಾಲ್ಗೊಳ್ಳುವ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 100 ಪಂದ್ಯಗಳನ್ನಾಡಿದ ಮೊದಲ ನ್ಯೂಜಿಲೆಂಡ್ ಆಟಗಾರ ಎಂಬ ಖ್ಯಾತಿಗೆ ಒಳಗಾಗಿದ್ದಾರೆ. ಮಾತ್ರವಲ್ಲ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಕನಿಷ್ಠ 100 ಪಂದ್ಯಗಳನ್ನಾಡಿದ ಮೊದಲ ಹಾಗೂ ಏಕೈಕ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.

ಎಲ್‌ಪಿಎಲ್ 2020: ಲಂಕನ್ ಪ್ರೀಮಿಯರ್ ಲೀಗ್ ನವೆಂಬರ್‌ಗೆ ಮುಂದೂಡಿಕೆಎಲ್‌ಪಿಎಲ್ 2020: ಲಂಕನ್ ಪ್ರೀಮಿಯರ್ ಲೀಗ್ ನವೆಂಬರ್‌ಗೆ ಮುಂದೂಡಿಕೆ

ಇನ್ನು ಸದ್ಯದ ಪರಿಸ್ಥಿತಿಯ ಬಗ್ಗೆ ಮಾತಮಾಡಿದ ಟೇಲರ್, ವಿಶ್ವಾದ್ಯಂತ ವಿಚಿತ್ರ ಸನ್ನಿವೇಶ ಉಂಟಾಗಿದೆ. ಹೈಸ್ಕೂಲ್‌ನ ಕಾಲದಿಂದಲೂ ನಾನು ಇಷ್ಟು ಸುದೀರ್ಘ ಕಾಲ ಕ್ರಿಕೆಟ್‌ನಿಂದ ದೂರವಿರಲಿಲ್ಲ. ಎಲ್ಲರ ಪರಿಸ್ಥಿತಿಯೂ ಹೀಗೇ ಇದೆ ಎಂದು ಟೇಲರ್ ಹೇಳಿಕೆಯನ್ನು ನೀಡಿದ್ದಾರೆ. ಈ ಬಾರಿಯ ಸಿಪಿಎಲ್‌ನಲ್ಲಿ ಪಾಲ್ಗೊಳ್ಳುವ ಸಲುವಾಗಿ ರಾಸ್ ಟೇಲರ್ ಕೆರಿಬಿಯನ್ ನಾಡಿಗೆ ತೆರಳಿದ್ದಾರೆ.

Story first published: Wednesday, August 12, 2020, 10:11 [IST]
Other articles published on Aug 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X