ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್ ಡ್ರೆಸ್ಸಿಂಗ್ ರೂಂನಲ್ಲಿ ವರ್ಣಭೇದ ನೀತಿ: ರಾಸ್‌ ಟೇಲರ್ ಆತ್ಮಚರಿತ್ರೆಯಲ್ಲಿ ಬಹಿರಂಗ

Ross taylor

ನ್ಯೂಜಿಲೆಂಡ್ ತಂಡ ವಿಶ್ವದಲ್ಲೇ ಬಲಿಷ್ಠ ಕ್ರಿಕೆಟ್ ತಂಡ ಎಂಬುದು ತಿಳಿದಿದೆ. ಜೊತೆಗೆ ಹೆಚ್ಚು ಕ್ರೀಡಾಸ್ಫೂರ್ತಿ ಮೆರೆಯುವ ತಂಡ, ಯಾರಿಗೂ ಸ್ಲೆಡ್ಜಿಂಗ್ ಮಾಡಲು, ವಿವಾದಗಳನ್ನ ಬಯಸುವುದಿಲ್ಲ ಎಂಬುದು ಅನೇಕರ ಅಭಿಪ್ರಾಯವಾಗಿದೆ. ಆದ್ರೆ ನ್ಯೂಜಿಲೆಂಡ್ ಮಾಜಿ ಆಟಗಾರ ರಾಸ್‌ ಟೇಲರ್ ಸತ್ಯವನ್ನ ಬಿಚ್ಚಿಟ್ಟಿದ್ದಾರೆ.

ರಾಸ್ ಟೇಲರ್ ತನ್ನ ಆಟೋಬಯೋಗ್ರಫಿಯಲ್ಲಿ ನ್ಯೂಜಿಲೆಂಡ್ ಕ್ರಿಕೆಟ್‌ ಡ್ರೆಸ್ಸಿಂಗ್ ರೂಂ ಕರಾಳ ಮುಖವನ್ನು ಬಹಿರಂಗಪಡಿಸಿದ್ದಾರೆ. ತಂಡದಲ್ಲಿನ ವರ್ಣಭೇದ ನೀತಿಯನ್ನು ಬಯಲಿಗೆಳೆದಿದ್ದಾರೆ ನ್ಯೂಜಿಲೆಂಡ್ ಕ್ರಿಕೆಟ್‌ನಲ್ಲಿ ಬೇರೂರಿರುವ ವರ್ಣಭೇದ ನೀತಿಯ ವಾಸ್ತವತೆಯನ್ನು ಟೇಲರ್ ತಿಳಿಸಿದ್ದಾರೆ.

ತಮ್ಮ ಆತ್ಮಚರಿತ್ರೆ ರಾಸ್ ಟೇಲರ್, 'ಬ್ಲ್ಯಾಕ್ ಅಂಡ್ ವೈಟ್' ನಲ್ಲಿ, ಅವರು ನ್ಯೂಜಿಲೆಂಡ್ ತಂಡದಲ್ಲಿ ಬೇರೂರಿರುವ ವರ್ಣಭೇದ ನೀತಿಯ ಬಗ್ಗೆ ಸಂವೇದನಾಶೀಲ ಕಾಮೆಂಟ್‌ಗಳನ್ನು ಮಾಡಿದ್ದಾರೆ. ನ್ಯೂಜಿಲೆಂಡ್ ಕ್ರಿಕೆಟ್‌ನಲ್ಲಿ ತಾರತಮ್ಯವು ತುಂಬಾ ಸಾಮಾನ್ಯವಾಗಿದೆ ಮತ್ತು ತಾನೂ ಅದಕ್ಕೆ ಬಲಿಯಾಗಿದ್ದೇನೆ ಎಂದು ಹೇಳಿದ್ದಾರೆ.

ನ್ಯೂಜಿಲೆಂಡ್ ಡ್ರೆಸ್ಸಿಂಗ್ ರೂಂ ನೀವು ಅಂದುಕೊಂಡಷ್ಟು ಸುಲಭವಿಲ್ಲ!

ನ್ಯೂಜಿಲೆಂಡ್ ಡ್ರೆಸ್ಸಿಂಗ್ ರೂಂ ನೀವು ಅಂದುಕೊಂಡಷ್ಟು ಸುಲಭವಿಲ್ಲ!

''16 ವರ್ಷಗಳ ಕಾಲ ತಂಡದಲ್ಲಿದ್ದ ನನ್ನ ಅವಧಿ ಅಂದುಕೊಂಡಷ್ಟು ಸುಗಮವಾಗಿ ಸಾಗಲಿಲ್ಲ. ಹೊರ ಜಗತ್ತಿಗೆ ಒಂದು ಕೋನ ಮಾತ್ರ ಗೊತ್ತು. ಆದರೆ ಇನ್ನೊಂದು ಬದಿಯಲ್ಲಿ ಮತ್ತೊಂದು ಕೋನವಿದೆ. ಡ್ರೆಸ್ಸಿಂಗ್ ರೂಂನಲ್ಲಿ ಎಷ್ಟು ತಾರತಮ್ಯ ತೋರಿಸುತ್ತಾರೆ ಎಂಬುದು ಹೊರಜಗತ್ತಿಗೆ ಗೊತ್ತಿಲ್ಲ. ಸುಮ್ಮನೆ ಕೀಟಲೆ ಮಾಡುವ ಕಾಮೆಂಟ್‌ಗಳನ್ನು ಮಾಡುತ್ತಾರೆ. ಅನೇಕ ಅವಮಾನಗಳನ್ನು ಎದುರಿಸುತ್ತಿದ್ದರೂ, ಹಲವು ಬಾರಿ ಅವರು ನನ್ನ ಮೇಲೆ ಕಿಚಾಯಿಸಿದ್ದರು, ಯಾವುದೋ ತಮಾಷೆಗೆ ಜಾತಿವಾದದ ಮಾತು ಹೇಳಿ ನನ್ನ ಮೇಲೆ ಆರೋಪ ಮಾಡುತ್ತಿದ್ದರು'' ಎಂದು ರಾಸ್ ಟೇಲರ್ ಹೇಳಿದ್ದಾರೆ.

ಬಾಲಿವುಡ್‌ ನಟಿ ಊರ್ವಶಿ ರೌಟೇಲಾ ಬಗ್ಗೆ ಕ್ರಿಕೆಟಿಗ ರಿಷಬ್ ಪಂತ್ ಗರಂ! ವಿವಾದ ಹುಟ್ಟುಹಾಕಿದ ಪೋಸ್ಟ್‌

ನನ್ನ ಮುಖದ ಕುರಿತಾಗಿ ಟೀಕೆ ಮಾಡುತ್ತಿದ್ದರು

ನನ್ನ ಮುಖದ ಕುರಿತಾಗಿ ಟೀಕೆ ಮಾಡುತ್ತಿದ್ದರು

''ನನ್ನ ಕೆಲವು ಕ್ರಿಕೆಟಿಗರು ಡ್ರೆಸ್ಸಿಂಗ್ ರೂಮ್‌ನಲ್ಲಿ ನನ್ನ ಮುಖದ ಬಗ್ಗೆ ಕಾಮೆಂಟ್ ಮಾಡುತ್ತಿದ್ದರು. ನಿಮ್ಮ ಮುಖ ನೋಡಿದ್ದೀರಾ ಟೇಲರ್.. ನಿಮ್ಮ ಮುಖ ನೀವು ನ್ಯೂಜಿಲೆಂಡ್ ಅಲ್ಲ ಎಂದು ತೋರುತ್ತಿದೆ. ರಾಸ್, ನೀವು ನಮ್ಮಲ್ಲಿ ಅರ್ಧದಷ್ಟು ಮಾತ್ರ.. ಇನ್ನರ್ಧ ಏನೆಂದು ನೀವೇ ನಿರ್ಧರಿಸಿ. ನನಗೆ ಕೋಪ ಬರುತ್ತಿತ್ತು ಆದರೆ ನನಗೆ ಕ್ರಿಕೆಟ್ ಮಾತ್ರ ನನ್ನ ಜೀವನ ಮತ್ತು ನಾನು ಅಂತಹ ವಿಷಯಗಳನ್ನು ನಿರ್ಲಕ್ಷಿಸುತ್ತಿದ್ದೆ'' ಎಂದು ಟೇಲರ್ ತಿಳಿಸಿದ್ದಾರೆ.

Breaking: ಜಿಂಬಾಬ್ವೆ ವಿರುದ್ಧದ ಸರಣಿಗೆ ಕೆಎಲ್ ರಾಹುಲ್ ನಾಯಕ; ಧವನ್ ಉಪನಾಯಕ

ಚೆನ್ನೈ ಸೂಪರ್ ಕಿಂಗ್ಸ್ ಪರ ಮತ್ತೆ ಕಣಕ್ಕಿಳಿಯೋದಕ್ಕೆ ರೆಡಿಯಾದ ಫಾಫ್ ಡುಪ್ಲೆಸಿಸ್ | *Cricket | OneIndia Kannada
ನ್ಯೂಜಿಲೆಂಡ್ ಕ್ರಿಕೆಟ್ ಬಿಳಿಯರ ಆಟವಾಗಿದೆ!

ನ್ಯೂಜಿಲೆಂಡ್ ಕ್ರಿಕೆಟ್ ಬಿಳಿಯರ ಆಟವಾಗಿದೆ!

''ಟೇಲರ್ ಡ್ರೆಸ್ಸಿಂಗ್ ರೂಂ ಬಗೆಗಿನ ಜನಾಂಗೀಯ ವರ್ತನೆಯಿಂದಾಗಿ, ನ್ಯೂಜಿಲೆಂಡ್‌ನಲ್ಲಿ ಕ್ರಿಕೆಟ್ ಬಿಳಿಯರ ಆಟವಾಗಿದೆ ಎಂದಿದ್ದಾರೆ. ನನಗೆ ನನ್ನ ತಾಯಿಯ ಕಡೆಯಿಂದ ಬೇರೆ ದೇಶದ ರೀತಿಯಲ್ಲಿ ಕಾಣುತ್ತಿದ್ದು, ಅದಕ್ಕಾಗಿಯೇ ನಾನು ಕಂದುಬಣ್ಣ. ಅವರೆಲ್ಲರ ನಡುವೆಯೂ ನಾನು ಬೇರೆಯಾಗಿದ್ದೆ. ಅದನ್ನೇ ನೆಪವಾಗಿಟ್ಟುಕೊಂಡು ಅಸಭ್ಯ ಪದಗಳಿಂದ ಹಾಸ್ಯ ಮಾಡುತ್ತಾರೆ. ಎಂದು ಹೇಳಿದರು. ರಾಸ್ ಟೇಲರ್ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಉಲ್ಲೇಖಿಸಿರುವ ಈ ವಿಷಯಗಳು ತುಂಬಾ ಆಘಾತಕಾರಿ. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ತಿಳಿಸಿದೆ. ತಂಡದಲ್ಲಿ ತಾರತಮ್ಯವನ್ನು ಎಂದಿಗೂ ಸಹಿಸುವುದಿಲ್ಲ ಎಂದು ದೇಶದ ಕ್ರಿಕೆಟ್ ಮಂಡಳಿ ಹೇಳಿದೆ''

Story first published: Thursday, August 11, 2022, 23:20 [IST]
Other articles published on Aug 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X