ನ್ಯೂಜಿಲೆಂಡ್ ಸೋಲಿಗೆ ಈತನೇ ಪ್ರಮುಖ ಕಾರಣ ಎಂದ ಟಾಮ್ ಲಥಾಮ್

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಬೃಹತ್ ಗೆಲುವು ದಾಖಲಿಸಿದ್ದು ನಿಮಗೆಲ್ಲಾ ತಿಳಿದೇ ಇದೆ. 372 ರನ್‌ಗಳ ಭಾರಿ ಗೆಲುವನ್ನ ಪಡೆದ ಟೀಂ ಇಂಡಿಯಾ ಕಳೆದ ಹಲವಾರು ವರ್ಷಗಳಲ್ಲಿ ಸ್ವದೇಶದಲ್ಲಿ ಸರಣಿ ಸೋಲಿಲ್ಲದ ಸರದಾರನಾಗಿದೆ.

ಅತ್ತ ನ್ಯೂಜಿಲೆಂಡ್ ಟೀಂ ಭಾರತದ ವಿರುದ್ಧವೇ ಕಳೆದ ಬಾರಿ ವಿಶ್ವ ಚಾಂಪಿಯನ್ ಶಿಪ್ ಗೆದ್ದು ಬೀಗಿದ್ದು, ಭಾರತದ ನೆಲದಲ್ಲಿ ತನ್ನ ಸಾಮರ್ಥ್ಯ ಪ್ರದರ್ಶಿಸುವಲ್ಲಿ ವಿಫಲಗೊಂಡಿತು.

ಕಾನ್ಪುರ ಟೆಸ್ಟ್‌ನಲ್ಲಿ ಟೈಲ್-ಎಂಡರ್‌ಗಳು ರೋಮಾಂಚಕ ಪ್ರದರ್ಶನದಿಂದಾಗಿ ಡ್ರಾ ಸಾಧಿಸಿದ ನಂತರ, ನ್ಯೂಜಿಲೆಂಡ್ ಅಂತಿಮ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 62 ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ 167 ರನ್‌ಗಳನ್ನು ಗಳಿಸಿತು. ಇದರಿಂದಾಗಿ 540 ಬೃಹತ್ ಗುರಿ ನೀಡಿದ್ದ ಭಾರತವು ನಾಲ್ಕನೇ ದಿನದ ಬೆಳಿಗ್ಗೆ ಒಂದು ಗಂಟೆಗಿಂತ ಕಡಿಮೆ ಸಮಯದಲ್ಲಿ 372 ರನ್‌ಗಳ ಬೃಹತ್ ಜಯದೊಂದಿಗೆ ಹೊರಬಂದಿದೆ.

"ಕ್ರಿಕೆಟ್‌ನಲ್ಲಿ ನೀವು ಮಾಡುವ ಎಲ್ಲಾ ಕೆಲಸ ಮಾಡದಿರುವಂತಹ ವಿಷಯಗಳಲ್ಲಿ ಒಂದಾಗಿದೆ. ಇದು ಆ ದಿನಗಳಲ್ಲಿ ಒಂದಾಗಿದೆ" ಎಂದು ಗಾಯಗೊಂಡಿದ್ದ ಕೇನ್ ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ ಟಾಮ್ ಲ್ಯಾಥಮ್ ಪಂದ್ಯದ ನಂತರ ಹೇಳಿದರು.

ನ್ಯೂಜಿಲೆಂಡ್ ಸೋಲಿಗೆ ಪ್ರಮುಖ ಕಾರಣ ರಾಸ್‌ ಟೇಲರ್!
ಮುಂಬೈ ಟೆಸ್ಟ್‌ನಲ್ಲಿ ಹೀನಾಯ ಸೋಲಿನ ಬಗ್ಗೆ ಮಾತನಾಡಿದ ಲ್ಯಾಥಮ್, ತಂಡದಲ್ಲಿದ್ದ ಅನುಭವಿ ಬ್ಯಾಟ್ಸ್ ಮನ್ ರಾಸ್ ಟೇಲರ್ ಮಾಡಿದ ಫ್ಲಾಪ್​ ಆದ ಕಾರಣ ತಂಡ ಹೀನಾಯವಾಗಿ ಸೋಲಬೇಕಾಯಿತು ಎಂದರು. ಕಾನ್ಪುರದಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಕೆಳ ಕ್ರಮಾಂಕದ ಆಟಗಾರರು ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಮುಂಬೈನಲ್ಲಿ ನ್ಯೂಜಿಲೆಂಡ್ ತಂಡ ಎರಡು ಇನ್ನಿಂಗ್ಸ್‌ಗಳಲ್ಲಿ 62 ಮತ್ತು 167 ರನ್ ಗಳಿಸಲಷ್ಟೇ ಶಕ್ತವಾಯಿತು.

ಈ ಬಗ್ಗೆ ಮಾತನಾಡಿದ ಲ್ಯಾಥಮ್, 'ರಾಸ್ (ಟೇಲರ್) ಸ್ಪಷ್ಟ ಯೋಜನೆಯನ್ನು ಹೊಂದಿದ್ದರು. ಅವರು ಬೌಲರ್‌ಗಳನ್ನು ಒತ್ತಡಕ್ಕೆ ಸಿಲುಕಿಸಲು ಬಯಸಿದ್ದರು. ಉಪಖಂಡದ ತಂಡದ ವಿರುದ್ಧ ನೀವು ಇದನ್ನು ಮಾಡಿದಾಗ, ಎದುರಾಳಿಗಳು ಚೆಂಡನ್ನು ಬೇಗನೆ ಕೆಳಗೆ ಹಾಕಲು ಪ್ರಯತ್ನಿಸುತ್ತಾರೆ. ದುರದೃಷ್ಟವಶಾತ್, ರಾಸ್ ಅವರ ಯೋಜನೆಯು ಕಾರ್ಯರೂಪಕ್ಕೆ ಬರಲಿಲ್ಲ ಎಂದರು. ಇದೇ ವೇಳೆ ಭಾರತದ ಸ್ಪಿನ್ನರ್‌ಗಳನ್ನು ಶ್ಲಾಘಿಸಿದ ಲ್ಯಾಥಮ್, 'ಟೀಮ್ ಇಂಡಿಯಾ ಬೌಲರುಗಳು ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದರು. ಅವರು ನಮಗೆ ರನ್ ಗಳಿಸುವ ಅವಕಾಶವನ್ನು ಕೂಡ ನೀಡಿರಲಿಲ್ಲ ಎಂದರು.

ಮುಂಬೈ ಟೆಸ್ಟ್ ಪಂದ್ಯದಲ್ಲಿ 372ರನ್‌ಗಳ ಭರ್ಜರಿ ಜಯ ಸಾಧಿಸಿ 1-0ಯಿಂದ ಸರಣಿ ವಶಪಡಿಸಿಕೊಂಡ ಭಾರತದ ಪರ ಮಯಾಂಕ್ ಅಗರ್ವಾಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ನಂತರದಲ್ಲಿ ರವಿಚಂದ್ರನ್ ಅಶ್ವಿನ್ ಸರಣಿ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡ್ರು.

ಪಾಯಿಂಟ್ಸ್ ಟೇಬಲ್ ನಲ್ಲಿ ಕೆಳಗೆ, ಶ್ರೇಯಾಂಕದಲ್ಲಿ ಮೊದಲನೇ ಸ್ಥಾನದಲ್ಲಿದೆ ಭಾರತ | Oneindia Kannada

80 ಪಂದ್ಯಗಳನ್ನ ಆಡಿರುವ ರವಿಚಂದ್ರನ್ ಅಶ್ವಿನ್, ಇದೇ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಟಾಮ್ ಲಥಾಮ್‌ರವ ವಿಕೆಟ್ ಎಗರಿಸುತ್ತಿದ್ದಂತೆ, ಹರ್ಭಜನ್ ಸಿಂಗ್ ದಾಖಲೆಯನ್ನ ಮುರಿದು ಗರಿಷ್ಠ ವಿಕೆಟ್ ಪಡೆದ ಭಾರತದ ಬೌಲರ್ಸ್‌ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಏರಿಕೆಗೊಂಡರು.

For Quick Alerts
ALLOW NOTIFICATIONS
For Daily Alerts
Story first published: Monday, December 6, 2021, 23:04 [IST]
Other articles published on Dec 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X