ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶ್ರೀಲಂಕಾ ವಿರುದ್ಧ ಟೇಲರ್ ಆರ್ಭಟ, ಸಚಿನ್-ಕೊಹ್ಲಿ ದಾಖಲೆ ಧೂಳೀಪಟ!

ಸಚಿನ್-ಕೊಹ್ಲಿ ದಾಖಲೆ ಧೂಳೀಪಟ ಮಾಡಿದ ಆಟಗಾರ..! | Oneindia Kannada
Ross Taylor scores hundred against Sri Lanka, overtakes Tendulkar & Kohli

ನೆಲ್ಸನ್, ಜನವರಿ 8: ನ್ಯೂಜಿಲ್ಯಾಂಡ್ ಪ್ರವಾಸದಲ್ಲಿರುವ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯದಲ್ಲಿ ಆತಿಥೇಯ ನ್ಯೂಜಿಲ್ಯಾಂಡ್ ತಂಡದ ಆಟಗಾರ ರಾಸ್ ಟೇಲರ್ ಬ್ಯಾಟಿಂಗ್‌ ಆರ್ಭಟ ನಡೆಸಿದ್ದಾರೆ. 131 ಎಸೆತಗಳಲ್ಲಿ ಶತಕ (137 ರನ್) ದಾಖಲಿಸಿರುವ ಟೇಲರ್, ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ದಾಖಲೆಯನ್ನೂ ಸರಿಗಟ್ಟಿದ್ದಾರೆ.

ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯಿಂದ ಬೂಮ್ರಾ ಹೊರಕ್ಕೆಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯಿಂದ ಬೂಮ್ರಾ ಹೊರಕ್ಕೆ

ನೆಲ್ಸನ್ ನಲ್ಲಿರುವ ಸ್ಯಾಕ್ಸ್‌ಟನ್ ಓವಲ್ ಸ್ಟೇಡಿಯಂನಲ್ಲಿ ಮಂಗಳವಾರ (ಜನವರಿ 8) ಮುಕ್ತಾಯಗೊಂಡ ಇತ್ತಂಡಗಳ ನಡುವಿನ 3ನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ರಾಸ್‌ ಟೇಲರ್ ಅಬ್ಬರದ ಬ್ಯಾಟಿಂಗ್‌ ಪ್ರದರ್ಶಿಸಿದರು. ಜೊತೆಗೆ ಹೆನ್ರಿ ನಿಕೋಲ್ಸ್ ಕೂಡ ಅಜೇಯ ಶತಕ (124 ರನ್) ಬಾರಿಸಿದ್ದರಿಂದ ನ್ಯೂಜಿಲ್ಯಾಂಡ್ 115 ರನ್ ಜಯ ಸಾಧಿಸಿದೆ.

ಭಾರತ Vs ಆಸ್ಟ್ರೇಲಿಯಾ ಸರಣಿ: ಕೊಹ್ಲಿ ಬಳಗದ ಸಾಧನೆಗಳ ಅಂಕಿ ಅಂಶಭಾರತ Vs ಆಸ್ಟ್ರೇಲಿಯಾ ಸರಣಿ: ಕೊಹ್ಲಿ ಬಳಗದ ಸಾಧನೆಗಳ ಅಂಕಿ ಅಂಶ

ಈ ಪಂದ್ಯದ ಜಯದೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 3-0ಯ ಕ್ಲೀನ್ ಸ್ವೀಪ್‌ ಮೂಲಕ ಸರಣಿ ನ್ಯೂಜಿಲ್ಯಾಂಡ್ ತೆಕ್ಕೆಗೆ ಬಿದ್ದಿದೆ. ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲ್ಯಾಂಡ್ 4 ವಿಕೆಟ್ ಕಳೆದು 364 ರನ್ ಗಳಿಸಿದರೆ, ಶ್ರೀಲಂಕಾ 41.4 ಓವರ್‌ನಲ್ಲಿ ಎಲ್ಲಾ ವಿಕೆಟ್ ಕಳೆದು 249 ರನ್ ಪೇರಿಸಿ ಶರಣಾಯಿತು.

ಸತತ 6 ಬಾರಿ 50+ ರನ್

ಸತತ 6 ಬಾರಿ 50+ ರನ್

ಭರ್ಜರಿ ಶತಕದಿಂದಾಗಿ ಏಕದಿನ ಕ್ರಿಕೆಟ್‌ನಲ್ಲಿ 20ನೇ ಶತಕ ಪೂರೈಸಿದ ಮೊದಲ ನ್ಯೂಜಿಲ್ಯಾಂಡ್ ಆಟಗಾರ ಹಿರಿಮೆಗೆ ಟೇಲರ್ ಪಾತ್ರರಾಗಿದ್ದಾರೆ. ಜೊತೆಗೆ ಹಿಂದಿನ ಆರು ಏಕದಿನ ಇನ್ನಿಂಗ್ಸ್‌ಗಳಲ್ಲೂ 50+ ರನ್ ಬಾರಿಸಿದ ಅಪರೂಪದ ದಾಖಲೆಗೂ ರಾಸ್ ಕಾರಣರಾಗಿದ್ದಾರೆ.

ಬದಿಗೆ ಸರಿದ ಸಚಿನ್-ಕೊಹ್ಲಿ

ಬದಿಗೆ ಸರಿದ ಸಚಿನ್-ಕೊಹ್ಲಿ

ಏಕದಿನ ಕ್ರಿಕೆಟ್‌ನಲ್ಲಿ ಸತತ 5 ಇನ್ನಿಂಗ್ಸ್‌ಗಳಲ್ಲಿ 50+ ರನ್ ಸಾಧನೆ ತೋರಿಸಿದ್ದಕ್ಕಾಗಿ ಭಾರತದ ಮಾಜಿ ಆಟಗಾರ ಸಚಿನ್ ಮತ್ತು ಈಗಿನ ತಂಡದ ನಾಯಕ ಕೊಹ್ಲಿ ದಾಖಲೆ ನಿರ್ಮಿಸಿದ್ದರು. ಆದರೆ ಟೇಲರ್ ಸತತ 6 ಇನ್ನಿಂಗ್ಸ್‌ಗಳಲ್ಲಿ ಅರ್ಧಶತಕಕ್ಕಿಂತ ಹೆಚ್ಚಿನ ರನ್ ಬಾರಿಸಿ ಕೊಹ್ಲಿ-ಸಚಿನ್‌ ದಾಖಲೆ ಮೀರಿ ಮೇಲಕ್ಕೇರಿದ್ದಾರೆ.

ಅದ್ಭುತ ಬ್ಯಾಟಿಂಗ್‌

ಅದ್ಭುತ ಬ್ಯಾಟಿಂಗ್‌

34ರ ಅನುಭವಿ ಬ್ಯಾಟ್ಸ್ಮನ್ ರಾಸ್, ಹಿಂದಿನ ಬಾರಿ ಆರೂ ಏಕದಿನ ಇನ್ನಿಂಗ್ಸ್‌ಗಳಲ್ಲಿ ಅರ್ಶಶತಕಕ್ಕೂ ಮೀರಿದ ರನ್ ಗಳಿಸಿದ್ದಾರೆ. ಆರು ಇನ್ನಿಂಗ್ಸ್‌ಗಳಲ್ಲಿ ಟೇಲರ್ ಕ್ರಮವಾಗಿ ಅಜೇಯ 181, 80, ಅಜೇಯ 86, 54, 90 ಮತ್ತು 137 ರನ್ ಬಾರಿಸಿದ ಸಾಧನೆ ಹೊಂದಿದ್ದಾರೆ.

ಸಾಧನೆ ಬಮಬಲ

ಸಾಧನೆ ಬಮಬಲ

ರಾಸ್ ಸಾಧನೆ ತನ್ನದೇ ದೇಶದ ನಾಯಕ ಕೇನ್ ವಿಲಿಯಮ್ಸನ್ 2015ರಲ್ಲಿ ನಿರ್ಮಿಸಿದ್ದ ದಾಖಲೆ ಮತ್ತು ಆ್ಯಡ್ರ್ಯೂ ಜೋನ್ಸ್ ಬರೆದಿದ್ದ ದಾಖಲೆಯನ್ನು ಸರಿದೂಗಿಸಿಕೊಂಡಿದ್ದಾರೆ. ಜೊತೆಗೆ ಪಾಕಿಸ್ತಾನ ಮಾಜಿ ಆಟಗಾರ ಮೊಹಮ್ಮದ್ ಯೂಸುಫ್, ವೆಸ್ಟ್ ಇಂಡೀಸ್‌ನ ಗಾರ್ಡನ್ ಗ್ರೀನಿಡ್ಜ್, ಆಸ್ಟ್ರೇಲಿಯಾದ ಮಾರ್ಕ್ ವಾ ದಾಖಲೆಗಳಿಗೆ ಸಮವೆನಿಸಿದೆ. ಆದರೆ 1987ರಲ್ಲಿ ಸತತ 9 ಇನ್ನಿಂಗ್ಸ್‌ಗಳಲ್ಲಿ 50+ ರನ್ ದಾಖಲೆ ಹೊಂದಿರುವ ಪಾಕಿಸ್ತಾನ ದೈತ್ಯ ಜಾವೆದ್ ಮಿಯಾಂದಾದ್ ಈ ಯಾದಿಯಲ್ಲಿ ಇಂದಿಗೂ ಮುಂಚೂಣಿಯಲ್ಲಿದ್ದಾರೆ (ಚಿತ್ರದಲ್ಲಿ ಜಾವೆದ್, ಕೃಪೆ: ಗೆಟ್ಟಿ ಇಮೇಜಸ್).

Story first published: Tuesday, January 8, 2019, 13:59 [IST]
Other articles published on Jan 8, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X