ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಸಾಧನೆ ಮಾಡಲಿದ್ದಾರೆ ರಾಸ್ ಟೇಯ್ಲರ್

ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲಿಗ | Ross Taylor | Record | ODI | T20 | Test
Ross Taylor To Become First Cricketer To Play 100 Matches In All Formats

ನ್ಯೂಜಿಲೆಂಡ್ ಮತ್ತು ಟೀಮ್ ಇಂಡಿಯಾ ಮಧ್ಯೆ ಟಿ20 ಮತ್ತು ಏಕದಿನ ಸರಣಿ ಮುಕ್ತಾಯವಾಗಿದೆ. ಟಿ20ಯನ್ನು ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಮಾಡಿಕೊಂಡರೆ ಏಕದಿನವನ್ನು ನ್ಯೂಜಿಲೆಂಡ್ ವೈಟ್‌ವಾಶ್ ಮಾಡಿ ವಶಕ್ಕೆ ಪಡೆಯಿತು. ಇದೀಗ ಎರಡೂ ತಂಡಗಳು ಟೆಸ್ಟ್ ಸರಣಿಗಾಗಿ ಸಜ್ಜಾಗಿವೆ.

ಕೀವಿಸ್ ಮತ್ತು ಟೀಮ್ ಇಂಡಿಯಾ ವಿರುದ್ಧದ ಸರಣಿಯ ಮೊದಲ ಟೆಸ್ಟ್ ಪಂದ್ಯ ಇದೇ ತಿಂಗಳ 21 ರಿಂದ ಆರಂಭವಾಗಲಿದೆ. ಈ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಅನುಭವಿ ಆಟಗಾರ ರಾಸ್ ಟೇಯ್ಲರ್ ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಸಾಧನೆಯೊಂದನ್ನು ಮಾಡಲು ಸಜ್ಜಾಗಿದ್ದಾರೆ.

ನ್ಯೂಜಿಲೆಂಡ್ ತಂಡದ ಹಿರಿಯ ಕ್ರಿಕೆಟಿಗ ರಾಸ್ ಟೇಯ್ಲರ್ ಮಾಡಲಿರುವ ದಾಖಲೆಯಾವುದು ಅನ್ನೋದನ್ನು ಬನ್ನಿ ನೋಡೋಣ:

ನೂರನೇ ಟೆಸ್ಟ್ ಆಡಲಿದ್ದಾರೆ ರಾಸ್ ಟೇಯ್ಲರ್:

ನೂರನೇ ಟೆಸ್ಟ್ ಆಡಲಿದ್ದಾರೆ ರಾಸ್ ಟೇಯ್ಲರ್:

ರಾಸ್‌ ಟೇಯ್ಲರ್ ಈವರೆಗೂ 99 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು ಟೀಮ್ ಇಂಡಿಯಾ ವಿರುದ್ಧದ ಸರಣಿಯ ಮೊದಲ ಟೆಸ್ಟ್ ಪಂದ್ಯ ಅವರ ನೂರನೇ ಪಂದ್ಯವಾಗಿರಲಿದೆ. ಈ ಮೂಲಕ ರಾಸ್ ಟೇಯ್ಲರ್ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ 100 ಪಂದ್ಯಗಳಲ್ಲಿ ಕಣಕ್ಕಿಳಿದ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

3 ಮಾದರಿಯಲ್ಲೂ 100 ಪಂದ್ಯ:

3 ಮಾದರಿಯಲ್ಲೂ 100 ಪಂದ್ಯ:

ವಿಶ್ವ ಕ್ರಿಕೆಟ್‌ನಲ್ಲಿ ಮೂರೂ ಮಾದರಿಯಲ್ಲಿ ನೂರು ಪಂದ್ಯಗಳನ್ನು ಆಡಿದ ಸಾಧನೆಯನ್ನು ಈವರೆಗೂ ಯಾರೂ ಮಾಡಿಲ್ಲ. ರಾಸ್ ಟೇಯ್ಕರ್ ಈ ಸರಣಿಯ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಈ ಸಾಧನೆಗೆ ಪಾತ್ರರಾಗಲಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಸಾಧನೆಗೆ ರಾಸ್ ಟೇಯ್ಲರ್ ಪಾತ್ರರಾಗಲಿದ್ದಾರೆ.

ನ್ಯೂಜಿಲೆಂಡ್ ಪರವಾಗಿ ದಾಖಲೆ:

ನ್ಯೂಜಿಲೆಂಡ್ ಪರವಾಗಿ ದಾಖಲೆ:

ರಾಸ್‌ ಟೇಯ್ಲರ್ 2006ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು 99 ಟೆಸ್ಟ್, 231 ಏಕದಿನ ಮತ್ತು 100 ಟಿ20 ಪಂದ್ಯಗಳಲ್ಲಿ ಕಣಕ್ಕಿಕಳಿದಿದ್ದಾರೆ. ನ್ಯೂಜಿಲೆಂಡ್ ತಂಡವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳಲ್ಲಿ ಪ್ರತಿನಿಧಿಸಿ ಕೀರ್ತಿಯೂ ರಾಸ್ ಟೇಯ್ಲರ್ ಹೆಸರಿನಲ್ಲಿದೆ.

19 ಶತಕ 33 ಅರ್ಧ ಶತಕ:

19 ಶತಕ 33 ಅರ್ಧ ಶತಕ:

ಟೆಸ್ಟ್‌ ಕ್ರಿಕೆಟ್‌ನಲ್ಲಿ ರಾಸ್‌ ಟೇಯ್ಲೆರ್ 99 ಪಂದ್ಯಗಳಲ್ಲಿ 19 ಶತಕವನ್ನು ಮತ್ತು 33 ಅರ್ಧ ಶತಕಗಳನ್ನು ದಾಖಲಿಸಿದ ಸಾಧನೆಯನ್ನು ಮಾಡಿದ್ದಾರೆ. ಏಕದಿನದಲ್ಲಿ 21 ಶತಕ ದಾಖಲಿಸಿದ್ದು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನ್ಯೂಜಿಲೆಂಡ್ ಪರವಾಗಿ ಅತಿ ಹೆಚ್ಚು ಶತಕವನ್ನು ದಾಖಲಿಸಿದ ಕೀರ್ತಿಯೂ ಟೇಯ್ಲರ್ ಹೆಸರಿನಲ್ಲಿದೆ.

Story first published: Friday, February 14, 2020, 15:41 [IST]
Other articles published on Feb 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X