ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗೇಲ್ ಅಬ್ಬರ ವ್ಯರ್ಥಗೊಳಿಸಿದ ರಾಯ್-ರೂಟ್, ಇಂಗ್ಲೆಂಡ್‌ಗೆ ದಾಖಲೆ ಜಯ!

Roy, Root score centuries as England register record win against Windies

ಬ್ರಿಡ್ಜ್‌ಟೌನ್, ಫೆಬ್ರವರಿ 21: ಜೇಸನ್ ರಾಯ್ ಮತ್ತು ಜೋ ರೂಟ್ ಬಿರುಸಿನ ಶತಕದ ನೆರವಿನಿಂದ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಇಂಗ್ಲೆಂಡ್ ಆತಿಥೇಯರ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ದಾಖಲೆ ರನ್ ಚೇಸ್ ಮಾಡುವುದರೊಂದಿಗೆ 6 ವಿಕೆಟ್ ಗೆಲುವನ್ನಾಚರಿಸಿದೆ.

ವಿಶ್ವಕಪ್‌ನಿಂದ ಪಾಕಿಸ್ತಾನ ನಿಷೇಧಿಸುವಂತೆ ಐಸಿಸಿಯ ಕೋರಲಿದೆ ಬಿಸಿಸಿಐ!ವಿಶ್ವಕಪ್‌ನಿಂದ ಪಾಕಿಸ್ತಾನ ನಿಷೇಧಿಸುವಂತೆ ಐಸಿಸಿಯ ಕೋರಲಿದೆ ಬಿಸಿಸಿಐ!

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿಸಿದ್ದ ವೆಸ್ಟ್ ಇಂಡೀಸ್ ತಂಡ ಆರಂಭಿಕ ಆಟಗಾರ ಕ್ರಿಸ್‌ ಗೇಲ್ ಅವರ ಆಕರ್ಷಕ ಶತಕದ ಸಹಾಯದಿಂದ 361 ಬೃಹತ್ ರನ್ ಗುರಿ ನೀಡಿತ್ತು. ಗುರಿ ಬೆನ್ನಟ್ಟಿದ ಇಂಗ್ಲೆಂಡ್ 364 ರನ್ ಸೇರಿಸುವ ಮೂಲಕ ದಾಖಲೆ ಗೆಲುವು ಸಾಧಿಸಿದೆ.

ಉತ್ತಪ್ಪ ಮತ್ತೆ ಕಣಕ್ಕೆ, ಸೌರಾಷ್ಟ್ರ ಪರ ಟಿ20 ಟೂರ್ನಮೆಂಟ್ ನಲ್ಲಿ ಬ್ಯಾಟಿಂಗ್ಉತ್ತಪ್ಪ ಮತ್ತೆ ಕಣಕ್ಕೆ, ಸೌರಾಷ್ಟ್ರ ಪರ ಟಿ20 ಟೂರ್ನಮೆಂಟ್ ನಲ್ಲಿ ಬ್ಯಾಟಿಂಗ್

ಕೆನ್ನಿಂಗ್ಟನ್ ಓವಲ್‌ನ ಬ್ರಿಡ್ಜ್ ಟೌನ್ ನಲ್ಲಿ ನಡೆದ ಐದು ಪಂದ್ಯಗಳ ಈ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಜಯ ಗಳಿಸಿರುವ ಇಂಗ್ಲೆಂಡ್ ಸರಣಿಯಲ್ಲಿ ಮುನ್ನಡೆ ಪಡೆದಿದೆ. ವೆಸ್ಟ್ ಇಂಡೀಸ್ ಇನ್ನಿಂಗ್ಸ್ ವೇಳೆ ಕ್ರಿಸ್‌ ಗೇಲ್ ಅಬ್ಬರದ ಬ್ಯಾಟಿಂಗ್‌ಗಾಗಿ ಗಮನ ಸೆಳೆದರಲ್ಲದೆ 24ನೇ ಅಂತಾರಾಷ್ಟ್ರೀಯ ಏಕದಿನ ಶತಕ ಪೂರೈಸಿಕೊಂಡಿದ್ದಾರೆ.

ಗೇಲ್ ಭರ್ಜರಿ ಬ್ಯಾಟಿಂಗ್

ಗೇಲ್ ಭರ್ಜರಿ ಬ್ಯಾಟಿಂಗ್

ಇನ್ನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ಪರ ಗೇಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. 129 ಎಸೆತಗಳನ್ನು ಎದುರಿಸಿದ ಕ್ರಿಸ್ ಗೇಲ್ 135 ರನ್‌ಗಳನ್ನು ತಂಡದ ಖಾತೆಗೆ ತುಂಬಿದರು. ಶೈ ಹೋಪ್ 64, ಡ್ಯಾರೆನ್ ಬ್ರಾವೋ 40 ರನ್ ಬೆಂಬಲ ದೊರೆತಿದ್ದರಿಂದ ವಿಂಡೀಸ್ 50 ಓವರ್‌ಗೆ 8 ವಿಕೆಟ್ ಕಳೆದು ಭರ್ತಿ 360 ರನ್ ಗಳಿಸಿತು.

ಇಂಗ್ಲೆಂಡ್ ರನ್ ಚೇಸಿಂಗ್ ದಾಖಲೆ

ಇಂಗ್ಲೆಂಡ್ ರನ್ ಚೇಸಿಂಗ್ ದಾಖಲೆ

ಏಕದಿನದಲ್ಲಿ 361 ರನ್ ಗುರಿ ತಲುಪೋದು ಸುಲಭವಿಲ್ಲ. ಆದರೆ ಇಂಗ್ಲೆಂಡ್‌ ಪರ ಆರಂಭಿಕ ಆಟಗಾರ ಜೇಸನ್ ರಾಯ್ 85 ಎಸೆತಗಳಿಗೆ 123 ಚಚ್ಚಿದರು. ಜೊತೆಗೆ ಜೋ ರೂಟ್ 102, ಇಯಾನ್ ಮಾರ್ಗನ್ 65 ರನ್ ಸೇರಿಸಿ ತಂಡಕ್ಕೆ ಬಲ ತುಂಬಿದರು. ಇಂಗ್ಲೆಂಡ್ 48.4 ಓವರ್‌ಗೆ 4 ವಿಕೆಟ್ ನಷ್ಟಕ್ಕೆ 364 ರನ್ ಬಾರಿಸಿ ಗೆಲುವನ್ನಾಚರಿಸಿತು.

ಸ್ಟೋಕ್ಸ್, ರಶೀದ್ ಉತ್ತಮ ಬೌಲಿಂಗ್

ಸ್ಟೋಕ್ಸ್, ರಶೀದ್ ಉತ್ತಮ ಬೌಲಿಂಗ್

ಏಕದಿನ ಆರಂಭಿಕ ಸರಣಿಯಲ್ಲಿ ಇಂಗ್ಲೆಂಡ್‌ಗೆ ಗೆಲುವು ತಂದೀಯುವಲ್ಲಿ ಬೌಲರ್‌ಗಳಾದ ಬೆನ್ ಸ್ಟೋಕ್ಸ್ ಮತ್ತು ಆದಿಲ್ ರಶೀದ್ ಪ್ರಮುಖರೆನಿಸಿದರು. ಇಬ್ಬರೂ ತಲಾ 3 ವಿಕೆಟ್ ಪಡೆದರು. ವಿಂಡೀಸ್ ದೈತ್ಯ ಗೇಲ್, ಶೈ ಹೋಪ್ ವಿಕೆಟ್ ಸ್ಟೋಕ್ಸ್ ಪಡೆದರೆ, ಬ್ರಾವೋ ವಿಕೆಟನ್ನು ರಶೀದ್ ಮುರಿದು ವಿಂಡೀಸ್ ರನ್ ಕದಿಯುವಿಕೆಗೆ ಬ್ರೇಕ್ ಒಡ್ಡಿದ್ದರು.

ರಾಯ್ ಪಂದ್ಯಶ್ರೇಷ್ಠ

ರಾಯ್ ಪಂದ್ಯಶ್ರೇಷ್ಠ

ಇಂಗ್ಲೆಂಡ್‌ಗೆ ಶತಕದ ನೆರವು ನೀಡಿದ ಆರಂಭಿಕ ಆಟಗಾರ ಜೇಸನ್ ರಾಯ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ವಿಂಡೀಸ್ 2-1ರಿಂದ ಜಯಿಸಿದೆ. ಐದು ಪಂದ್ಯಗಳ ಏಕದಿನದಲ್ಲಿ ಇಂಗ್ಲೆಂಡ್ 1-0ಯ ಮುನ್ನಡೆಯಲ್ಲಿದೆ. ದ್ವಿತೀಯ ಏಕದಿನ ಪಂದ್ಯ ಫೆಬ್ರವರಿ 22ರಂದು ನಡೆಯಲಿದೆ.

Story first published: Thursday, February 21, 2019, 13:12 [IST]
Other articles published on Feb 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X