ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಕ್ರೌರ್ಯವನ್ನೂ ಮೀರಿಸಿದೆ': ಹತ್ರಾಸ್ ಗ್ಯಾಂಗ್ ರೇಪ್‌ಗೆ ಕೊಹ್ಲಿ ಖಂಡನೆ

Royal Challengers Bangalore captain Virat Kohli reacted on Hathras incident

ನವದೆಹಲಿ: ಟೀಮ್ ಇಂಡಿಯಾದ ನಾಯಕ, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುನ್ನಡೆಸುವ ವಿರಾಟ್ ಕೊಹ್ಲಿ, ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ನಡೆದ ಗ್ಯಾಂಗ್‌ರೇಪ್‌ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇದೊಂದು ಅಮಾನವೀಯ ಮತ್ತು ಕ್ರೌರ್ಯಕ್ಕೂ ಮೀರಿದ ಘಟನೆ ಎಂದು ಕೊಹ್ಲಿ ಖಂಡನೆ ವ್ಯಕ್ತಪಡಿಸಿದ್ದಾರೆ.

ಆತ ಇದ್ದಿದ್ದರೆ ವಿಶ್ವಕಪ್ ಗೆಲ್ಲಿಸುತ್ತಿದ್ದ: ತನ್ನ ರಾಜ್ಯದ ಪ್ರತಿಭೆಯನ್ನು ಹೊಗಳಿದ ಶ್ರೀಶಾಂತ್ಆತ ಇದ್ದಿದ್ದರೆ ವಿಶ್ವಕಪ್ ಗೆಲ್ಲಿಸುತ್ತಿದ್ದ: ತನ್ನ ರಾಜ್ಯದ ಪ್ರತಿಭೆಯನ್ನು ಹೊಗಳಿದ ಶ್ರೀಶಾಂತ್

19ರ ಹರೆಯದ ದಲಿತ ಹುಡುಗಿಯ ಮೇಲೆ ಉತ್ತರ ಪ್ರದೇಶದ ಹತ್ರಾಸ್ ಎಂಬಲ್ಲಿ ನಾಲ್ವರ ಅತ್ಯಾಚಾರ ಎಸಗಿದ್ದರು. ಸೆಪ್ಟೆಂಬರ್ 14ರಂದು ಘಟನೆ ನಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಚಿಕಿತ್ಸೆಗೆ ದೆಹಲಿ ಆಸ್ಪತ್ರೆಗೆ ದಾಖಲು ಮಾಡಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಆಕೆ ಸಾವನ್ನಪ್ಪಿದ್ದಾರೆ.

ಹೀಗೆ ಆಗದಿದ್ರೆ CSK ಮತ್ತಷ್ಟು ಒತ್ತಡಕ್ಕೆ ಸಿಲುಕಲಿದೆ: ಬ್ರೆಟ್‌ ಲೀಹೀಗೆ ಆಗದಿದ್ರೆ CSK ಮತ್ತಷ್ಟು ಒತ್ತಡಕ್ಕೆ ಸಿಲುಕಲಿದೆ: ಬ್ರೆಟ್‌ ಲೀ

ಘಟನೆಗೆ ಸಂಬಂಧಿಸಿ ವಿರಾಟ್ ಕೊಹ್ಲಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ. 'ಹತ್ರಾಸ್‌ನಲ್ಲಿ ನಡೆದಿದ್ದು ಅಮಾನವೀಯವಾದ್ದು ಮತ್ತು ಕ್ರೌರ್ಯಕ್ಕೂ ಮೀರಿದ್ದು. ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ, ಹುಡುಗಿಗೆ ನ್ಯಾಯ ಸಿಕ್ಕಿದೆ ಅಂತ ಭಾವಿಸುತ್ತೇನೆ,' ಎಂದು ಕೊಹ್ಲಿ ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಸಂತ್ರಸ್ಥೆಗೆ ತೀವ್ರ ಗಾಯಗಳಾಗಿದ್ದವು. ಆರೋಪಿಗಳು ಆಕೆಯ ನಾಲಗೆ ಕತ್ತರಿಸಿದ್ದರು. ಸಂತ್ರಸ್ಥೆ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಲೇ ತಪ್ಪಿತಸ್ಥರ ವಿರುದ್ಧ ಪ್ರತಿಭಟನೆ ಜೋರಾಗಿದೆ. ಆರೋಪ ಕೇಳಿ ಬಂದ ನಾಲ್ವರನ್ನೂ ಬಂಧಿಸಲಾಗಿದೆ ಎಂದು ಹತ್ರಾಸ್ ಪೊಲೀಸ್ ಅಧೀಕ್ಷಕ ವಿಕ್ರಾಂತ್ ವೀರ್ ಮಾಹಿತಿ ನೀಡಿದ್ದಾರೆ.

Story first published: Wednesday, September 30, 2020, 10:02 [IST]
Other articles published on Sep 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X