ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ವಿಚಾರದಲ್ಲಿ ಆರ್‌ಸಿಬಿಯೇ ನಂ.1, ಬೆಂಗಳೂರ್ ಸೂಪರ್!

Royal Challengers Bangalore (RCB) achieved special milestones on digital
CSK ಹಿಂದಿಕ್ಕಿ ಮತ್ತೆ ನಂಬರ್ 1 ಆಯ್ತು RCB | Oneindia Kannada

ಬೆಂಗಳೂರು: ರಾಯಲ್ ಚಾಲೆಂಜರ್ಡ್ ಬೆಂಗಳೂರು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನಲ್ಲಿ ಬಲಿಷ್ಠ ತಂಡವಾಗಿ ಕಾಣಿಸಿಕೊಂಡಿತ್ತು. ಈ ಬಾರಿ ಟೂರ್ನಿ ನಡೆದಿದ್ದರೆ ಆರ್‌ಸಿಬಿ ಕಪ್‌ ಗೆಲ್ಲುವ ಸಾಧ್ಯತೆಯೀ ಇತ್ತು. ಯಾಕೆಂದರೆ ಆಡಿದ 7 ಪಂದ್ಯಗಳಲ್ಲಿ ಆರ್‌ಸಿಬಿ 5 ಪಂದ್ಯಗಳನ್ನು ಗೆದ್ದಿತ್ತು. ಆದರೆ ಅಷ್ಟರಲ್ಲಾಗಲೇ ಕೋವಿಡ್-19ನಿಂದಾಗಿ 2021ರ ಐಪಿಎಲ್ ರದ್ದಾಗಿದೆ. ಆದರೇನಂತೆ ನಡೆದ 29 ಪಂದ್ಯಗಳ ವೇಳೆಯೇ ಕೊಹ್ಲಿ ನಾಯಕತ್ವದ ಆರ್‌ಸಿಬಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದೆ.

ಐಪಿಎಲ್ ನಡೆಯದಿದ್ರೆ ಬಿಸಿಸಿಐಗೆ ಆಗೋ ನಷ್ಟವೆಷ್ಟು?: ಸತ್ಯ ಬಾಯ್ಬಿಟ್ಟ ಗಂಗೂಲಿ!ಐಪಿಎಲ್ ನಡೆಯದಿದ್ರೆ ಬಿಸಿಸಿಐಗೆ ಆಗೋ ನಷ್ಟವೆಷ್ಟು?: ಸತ್ಯ ಬಾಯ್ಬಿಟ್ಟ ಗಂಗೂಲಿ!

ಒಂದು ಬಾರಿಯೂ ಐಪಿಎಲ್ ಟ್ರೋಫಿ ಗೆಲ್ಲದ ಸಾಲುಗಳಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ವಿಶ್ವದಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಆರ್‌ಸಿಬಿಯಲ್ಲಿ ಈ ಸಾರಿ ಸ್ಟಾರ್‌ಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಹೆಚ್ಚಿನ ಕ್ರಿಕೆಟ್‌ ಪ್ರೇಮಿಗಳು ಆರ್‌ಸಿಬಿಯತ್ತ ಒಲವು ತಾಳಿದ್ದರು. ಇದಕ್ಕೆ ಸಾಕ್ಷಿಯೂ ದೊರೆತಿದೆ.

ಸಾಮಾಜಿಕ ಜಾಲತಾಣದಲ್ಲಿ ನಂ.1

ಸಾಮಾಜಿಕ ಜಾಲತಾಣದಲ್ಲಿ ನಂ.1

ಐಪಿಎಲ್ ಆರಂಭವಾಗಿ ಅಮಾನತಾಗುವವರೆಗೆ ಅಂದರೆ ಏಪ್ರಿಲ್ 9ರಿಂದ ಮೇ 3ರ ವರೆಗಿನ ಟೂರ್ನಿಯ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಆರ್‌ಸಿಬಿ ದಾಖಲೆಗಳನ್ನು ಸೃಷ್ಟಿಸಿದೆ. ಐಪಿಎಲ್ ಎಲ್ಲಾ ಎಂಟು ತಂಡಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಂ.1 ತಂಡವಾಗಿ ಆರ್‌ಸಿಬಿ ಗುರುತಿಸಿಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ಆರ್‌ಸಿಬಿ ಪೋಸ್ಟ್‌ಗಳಿಗೆ 150.40 ಮಿಲಿಯನ್ ಎಂಗೇಜ್ಮೆಂಟ್‌ ಸಿಕ್ಕಿದೆ. ಇನ್ನು 149.94 ಮಿಲಿಯನ್ ಲೈಕ್ಸ್, 452.2K ಕಾಮೆಂಟ್ಸ್‌ಬಿದ್ದಿವೆ. ಈ ಯಾದಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಚೆನ್ನೈ ಒಟ್ಟಾರೆ 126.09 ಮಿಲಿಯನ್ ಎಂಗೇಜ್ಮೆಂಟ್ಸ್‌ ಇವೆ.

ವಿಶ್ವದಲ್ಲಿ ಆರ್‌ಸಿಬಿ ಟಾಪರ್

ವಿಶ್ವದಲ್ಲಿ ಆರ್‌ಸಿಬಿ ಟಾಪರ್

ಐಪಿಎಲ್ ಅವಧಿಯಲ್ಲಿ ವಿಶ್ವದ ಬೇರೆ ಬೇರೆ ಕ್ರೀಡಾ ತಂಡಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಲಭಿಸಿದ ಅಂಕಿ-ಅಂಶಗಳನ್ನು ಗಮನಿಸಿದರೆ ಇದರಲ್ಲಿ ಆರ್‌ಸಿಬಿ ನಂ.1 ಸ್ಥಾನ ಪಡೆದುಕೊಂಡಿದೆ. ಈ ಬಾರಿಯ ಐಪಿಎಲ್‌ ವೇಳೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಜನಪ್ರಿಯತೆ ಪಡೆದಿದ್ದ ವಿಶ್ವದ ಕ್ರೀಡಾ ತಂಡಗಳ ಪಟ್ಟಿ ತೆಗೆದರೆ ಅದರಲ್ಲಿ ಆರ್‌ಸಿಬಿ ಮೊದಲ ಸ್ಥಾನದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ದ್ವಿತೀಯ ಸ್ಥಾನದಲ್ಲಿ, ಬಾರ್ಸಿಲೋನಾ ಎಫ್‌ಸಿ ತೃತೀಯ ಸ್ಥಾನದಲ್ಲಿ ಮತ್ತು ಮುಂಬೈ ಇಂಡಿಯನ್ಸ್ 4ನೇ ಸ್ಥಾನದಲ್ಲಿದೆ.

ಯೂಟ್ಯೂಬ್‌ನಲ್ಲೂ ಅಗ್ರ ಸ್ಥಾನ

ಯೂಟ್ಯೂಬ್‌ನಲ್ಲೂ ಅಗ್ರ ಸ್ಥಾನ

ಐಪಿಎಲ್ ವೇಳೆ ಯೂಟ್ಯೂಬ್‌ನಲ್ಲಿ ಅತೀ ಹೆಚ್ಚು ಸಾರಿ ವೀಕ್ಷಣೆಗೆ ಒಳಪಟ್ಟ ಐಪಿಎಲ್ ತಂಡಗಳ ಸಾಲಿನಲ್ಲಿಯೂ ಆರ್‌ಸಿಬಿ ಮೊದಲ ಸ್ಥಾನದಲ್ಲಿದೆ. ಆರ್‌ಸಿಬಿಗೆ 2.6 ಮಿಲಿಯನ್ ಸಬ್ಸ್‌ಕ್ರೈಬರ್ ಇದ್ದರೆ, 93 ವಿಡಿಯೋಗಳಿಗೆ 37.7K ಎಂಗೇಜ್ಮೆಂಟ್ ಲಭಿಸಿವೆ. ಇನ್ನು ಈ ದಾಖಲೆ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್‌ (1.8 ಸಬ್ಸ್‌ಕ್ರೈಬರ್), 61 ವಿಡಿಯೋಗಳಿಗೆ 25.6K ಎಂಗೇಜ್ಮೆಂಟ್ ಲಭಿಸಿದೆ.

Story first published: Tuesday, July 27, 2021, 15:48 [IST]
Other articles published on Jul 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X